- ಸೆಕೆಂಡ್ಸ್ ಮದ್ಯ ಮಾರಿಲ್ಲ । ರಿಯಲ್ ಎಸ್ಟೇಟ್‌ನಲ್ಲಿ ದುಡಿದು ಬದುಕು ಕಟ್ಟಿಕೊಂಡಿದ್ದೇನೆ, ಪಕ್ಷದಲ್ಲಿ ಹಲವರನ್ನೂ ಬೆಳೆಸಿದ್ದೇನೆ: ಸ್ಪಷ್ಟನೆ
- ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧೆ ಆಸೆಯಿದ್ದರೆ ದಿನೇಶ್ ಶೆಟ್ಟಿ ಸಚಿವ ಎಸ್ಸೆಸ್ಸೆಂಗೆ ಬಳಿ ಹೇಳಿಕೊಳ್ಳಲಿ ಎಂದು ಸಲಹೆ - ದಾವಣಗೆರೆಯನ್ನು ರಾಜನಹಳ್ಳಿ, ಚಿಗಟೇರಿ ಸೇರಿ ಅನೇಕ ಮನೆತನದ ಹಿರಿಯರು ಕಟ್ಟಿರೋದು
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಇತಿಹಾಸದ ಬಗ್ಗೆ ಪೂರ್ಣ ಪ್ರಮಾಣದ ಅರಿವಿಲ್ಲದ ದಿನೇಶ ಶೆಟ್ಟಿ ಶಾಮನೂರು ಕುಟುಂಬವೇ ದಾವಣಗೆರೆಯನ್ನು ಕಟ್ಟಿ ಬೆಳೆಸಿದೆಯೆಂಬಂತೆ ಹೇಳಿಕೆ ನೀಡುತ್ತಿದ್ದಾರೆ. ಇದು ಊರಿನ ಬಗ್ಗೆ ಅವರಿಗೆ ತಿಳಿವಳಿಕೆ ಇಲ್ಲ ಎಂಬುದನ್ನು ತೋರಿಸುತ್ತದೆ. ರಾಜನಹಳ್ಳಿ ಹನುಮಂತಪ್ಪ, ಮದ್ದೂರಾಯಪ್ಪ. ಚಿಗಟೇರಿ ಮುರಿಗೆಪ್ಪ, ಅಜ್ಜಂಪುರ ಶೆಟ್ರು, ಚನ್ನಗಿರಿ, ಬಿಟಿ ಕುಟುಂಬ, ಹಿರಿಯರಾದ ಎಸ್. ಕೊಟ್ರಬಸಪ್ಪ, ಕೆ.ಟಿ.ಜಂಬಣ್ಣ, ಶಿವಾನಂದ ಸ್ವಾಮಿ ಹೀಗೆ ನೂರಾರು ಜನರು ಊರನ್ನು ಕಟ್ಟಿ, ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನೂ ಅರಿಯುವಂತೆ ಯಶವಂತ ರಾವ್ ತಿಳಿಸಿದರು.
ನನ್ನಂತೆಯೇ ಬೇರೆ ಬೇರೆ ವೃತ್ತಿಯಲ್ಲಿರುವ ಸಾಮಾನ್ಯ ಕಾರ್ಯಕರ್ತರಿಗೂ ನಮ್ಮ ಪಕ್ಷದಲ್ಲಿ ಸ್ಥಾನಮಾನ, ಅವಕಾಶ ಕೊಡಿಸಿದ ಸಂತೃಪ್ತಿ ನನಗಿದೆ. ಎಂದಿಗೂ ಸೆಕೆಂಡ್ಸ್ ಮದ್ಯ ಮಾರಾಟ ಮಾಡಿಲ್ಲ. ಆದರೆ, ನಿಮ್ಮ ಪಕ್ಷದ ಯಾವ ನಾಯಕರ ಡಿಸ್ಟಿಲರಿಯಲ್ಲಿ ತಯಾರಿಸಿದ ಥರ್ಡ್ಸ್ ಮದ್ಯ ಸೇವಿಸಿ, ಓರ್ವ ಸಾವನ್ನಪ್ಪಿದ್ದ. ಅದರ ವರದಿ ಮಾಡಿದ್ದ ಹಿರಿಯ ಪತ್ರಕರ್ತನಿಗೆ ಬಸವ ನಗರ ಪೊಲೀಸ್ ಠಾಣೆಗೆ ಕರೆದು, ಪಾದರಕ್ಷೆಯಿಂದ ಹೊಡೆದಿದ್ದ ನಿಮ್ಮ ಪಕ್ಷದ ಯಾವ ನಾಯಕರ ವಿರುದ್ಧ ಇದೇ ನಾಯಕ ಸಮಾಜವು ಎಚ್.ಕೆ. ರಾಮಚಂದ್ರಪ್ಪ ನೇತೃತ್ವದಲ್ಲಿ ಪ್ರತಿಭಟಿಸಿತ್ತು ಎಂಬ ಸತ್ಯವನ್ನೂ ದಿನೇಶ ಶೆಟ್ಟಿ ತಿಳಿಯಬೇಕು ಎಂದು ತಾಕೀತು ಮಾಡಿದರು.
ಪಕ್ಷದ ಮುಖಂಡರಾದ ಬಿ.ರಮೇಶ ನಾಯ್ಕ, ಶಿವನಗೌಡ ಪಾಟೀಲ್, ಟಿಂಕರ್ ಮಂಜಣ್ಣ, ದುರುಗೇಶ, ಶಂಕರಗೌಡ ಬಿರಾದಾರ್, ಎಸ್.ಬಾಬು, ಗೋವಿಂದರಾಜ, ಶಿವಾನಂದ, ತರಕಾರಿ ಶಿವು, ಕಿಶೋರಕುಮಾರ ಇತರರು ಇದ್ದರು.
(ಕೋಟ್) ದಾವಣಗೆರೆ ನಗರಸಭೆ ಅಧ್ಯಕ್ಷ ಆಗಿದ್ದಾಗಿನಿಂದ ಈವರೆಗೆ ದಿನೇಶ ಶೆಟ್ಟಿ ಏನೆಲ್ಲಾ ಮಾಡಿದ್ದಾರೆಂಬ ಬಗ್ಗೆ ನಾನೂ ಚರ್ಚೆಗೆ ಸದಾ ಸಿದ್ಧ. ದಿನದ ಯಾವುದೇ ಕ್ಷಣದಲ್ಲಿ, ಎಲ್ಲಿಯೇ ಆಗಲಿ ಚರ್ಚೆಗೆ ಕರೆದರೂ ದಾಖಲೆಗಳ ಸಮೇತವೇ ಬರುತ್ತೇನೆ. ದಿನೇಶ ಶೆಟ್ಟಿ ತನ್ನ ಕಾಂಗ್ರೆಸ್ ಮುಖಂಡರ ಸಮೇತ ಚರ್ಚೆಗೆ ಬರಲಿ, ನಾನೂ ಒಬ್ಬನೇ ಚರ್ಚೆಗೆ ಬರುತ್ತೇನೆ. ವರದಿಗಾರರ ಕೂಟದಲ್ಲೇ ಚರ್ಚೆಗೆ ಸಿದ್ಧ ಎಂದರೆ ಅದಕ್ಕೂ ನಾನು ಸಿದ್ಧ.
- - -
ದಾವಣಗೆರೆಯಲ್ಲಿ ಶನಿವಾರ ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.