ಸಿರಿಧಾನ್ಯಗಳಿಗೆ ಉತ್ತೇಜನದೊಂದಿಗೆ ಮೌಲ್ಯವರ್ಧನೆ ಅಗತ್ಯ: ಕಿರಣ್ ಕಮಾರ್‌

KannadaprabhaNewsNetwork |  
Published : Jan 08, 2026, 02:00 AM IST
ಪೋಟೋ: 06ಎಸ್‌ಎಂಜಿಕೆಪಿ01ಶಿವಮೊಗ್ಗದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2026 ರ ಅಂಗವಾಗಿ ಕೃಷಿ ಇಲಾಖೆ ವತಿಯಿಂದ  ಮಂಗಳವಾರ ಆಯೋಜಿಸಿದ್ದ “ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ” ಸ್ಪರ್ಧೆಯನ್ನು ಜಂಟಿ ಕೃಷಿ ನಿರ್ದೇಶಕ ಕಿರಣ್ ಕಮಾರ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಪೌಷ್ಟಿಕಾಂಶಗಳಿಂದ ಕೂಡಿದೆ. ಹಾಗೂ ನಮ್ಮ ಪೂರ್ವಿಕರು ತಯಾರಿಸುತ್ತಿದ್ದ ಹಳೆಯ ಖಾದ್ಯಗಳು ಆರೋಗ್ಯಕರವಾಗಿದ್ದು, ಅವುಗಳನ್ನು ಉತ್ತೇಜಿಸುವ ಅವಶ್ಯಕತೆ ಇದೆ ಎಂದು ಜಂಟಿ ಕೃಷಿ ನಿರ್ದೇಶಕ ಕಿರಣ್ ಕಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಪೌಷ್ಟಿಕಾಂಶಗಳಿಂದ ಕೂಡಿದೆ. ಹಾಗೂ ನಮ್ಮ ಪೂರ್ವಿಕರು ತಯಾರಿಸುತ್ತಿದ್ದ ಹಳೆಯ ಖಾದ್ಯಗಳು ಆರೋಗ್ಯಕರವಾಗಿದ್ದು, ಅವುಗಳನ್ನು ಉತ್ತೇಜಿಸುವ ಅವಶ್ಯಕತೆ ಇದೆ ಎಂದು ಜಂಟಿ ಕೃಷಿ ನಿರ್ದೇಶಕ ಕಿರಣ್ ಕಮಾರ್ ತಿಳಿಸಿದರು.

ಶಿವಮೊಗ್ಗದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2026 ರ ಅಂಗವಾಗಿ ಕೃಷಿ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ “ಜಿಲ್ಲಾಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ” ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಿರಿಧಾನ್ಯಗಳಲ್ಲಿ ಉತ್ತಮ ಕಾರ್ಬೋಹೈಡ್ರೇಟ್, ನಾರು, ಪ್ರೋಟಿನ್ ಮತ್ತು ಖನಿಜಗಳು ಇದ್ದು ಉತ್ತಮ ಆಹಾರವಾಗಿದೆ. ವಿಶೇಷವಾಗಿ ಸಕ್ಕರೆ ಖಾಯಿಲೆ ಇರುವವರಿಗೆ ಒಳ್ಳೆಯ ಆಹಾರ. ಸಿರಿಧಾನ್ಯಗಳಿಗೆ ಉತ್ತೇಜನ ನೀಡುವುದರೊಂದಿಗೆ ಇದರ ಮೌಲ್ಯವರ್ಧನೆ ಅಷ್ಟೇ ಮುಖ್ಯವಾಗಿದೆ. ಆದ್ದರಿಂದ ಪ್ರತಿ ವರ್ಷ ಸಿರಿಧಾನ್ಯ ಖಾದ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತಿದೆ ಎಂದರು.

ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆ ತೀರಾ ಕಡಿಮೆ. ಆದರೆ, ಬಳಕೆದಾರರ ಸಂಖ್ಯೆ ಹೆಚ್ಚಿದ್ದು, ಸಿರಿಧಾನ್ಯದ ವಿವಿಧ ರೀತಿಯ ಖಾದ್ಯಗಳ ತಯಾರಿಕೆ, ಬಳಕೆ ಮಾಡಲಾದ ಸಿರಿಧಾನ್ಯಗಳ ವಿವರ ಸೇರಿದಂತೆ ಖಾದ್ಯಗಳ ಸಂಪೂರ್ಣ ವಿವರಗಳೊಂದಿಗೆ ಸ್ಪರ್ಧಾಳುಗಳು ಉತ್ತಮವಾಗಿ ಖಾದ್ಯಗಳನ್ನು ಪ್ರದರ್ಶಿಸಿದ್ದಾರೆ. ಈ ರೀತಿಯ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಅತಿ ಮುಖ್ಯವಾಗಿದ್ದು, ಈ ಬಾರಿ ಸ್ಪರ್ಧೆಯಲ್ಲಿ 38 ಜನರು ಭಾಗವಹಿಸಿದ್ದಾರೆ ಎಂದು ತಿಳಿಸಿದರು.

ಮರೆತುಹೋದ ಖಾದ್ಯಗಳಲ್ಲಿ ಮಲೆನಾಡು ಭಾಗದಲ್ಲಿ ತಯಾರಿಸುವ ಬಾಣಂತಿಯರ ಖಾದ್ಯಗಳು ಎಲ್ಲರ ಗಮನ ಸೆಳೆದಿದ್ದು, ಜೋಳದ ಗುಗ್ಗರಿ, ನವಣೆ ಖಿಲ್ಸ, ಸಜ್ಜೆ ಮಾದಲಿ, ಸುಕ್ಕಿನುಂಡೆ, ಕಡುಬುಗಳು, ಗಾರ್ಗೆಯಂತಹ ಅನೇಕ ಮರೆತು ಹೋದ ಖಾದ್ಯಗಳನ್ನು ಸ್ಪರ್ಧಾಳುಗಳು ವಿಶೇಷವಾಗಿ ತಯಾರಿಸಿದ್ದಾರೆ. ಸ್ಪರ್ಧೆಯ ನಿಯಮದಂತೆ ತಿನಿಸುಗಳನ್ನು ಮನೆಯಲ್ಲಿಯೇ ತಯಾರಿಸಿ ಪಾಕ ಸ್ಪರ್ಧೆ ನಡೆಯುವ ಸ್ಥಳದಲ್ಲಿ ಪ್ರದರ್ಶಿಸಿದ್ದಾರೆ ಎಂದರು.

ಸ್ಪರ್ಧೆಯಲ್ಲಿ ಸಿರಿಧಾನ್ಯದ ಸಿಹಿ ಮಂಡಿಗೆ, ಹುರುಳಿ ಉಂಡೆ ಮತ್ತು ಸಾಮೆ ಅಡೆ ಪಾಯಸ, ಹುರುಳಿ ಲೇಹ್ಯಗಳು, ನವಣೆ ಕಡಬು, ಸಿರಿಧಾನ್ಯಗಳ ಮಫಿನ್, ಕೇಕ್ ಬಿಸ್ಕತ್ತು, ನವಣೆ ತೊಡೆದೇವು, ಸಿರಿಧಾನ್ಯ ಮಿಠಾಯಿಗಳು, ಕರಡಿ ಸೊಪ್ಪಿನ ಚಟ್ನಿ, ಬಾಳೆ ಮೂತಿ ಖಾರ(ಬಾಣಂತಿಯರಿಗೆ), ಪೊಂಗಲ, ಪರೋಟ, ಕಡುಬು, ಗಾರ್ಗೆ, ನವಧಾನ್ಯ ಮುದ್ದೆ, ಜೋಳ ಗುಗರಿ, ನವಣೆ ಖಿಲ್ಸ, ಸಿರಿಧಾನ್ಯ ಬರ್ಫಿ, ಮಾಲದಿ, ಸಿರಿಧಾನ್ಯ ಹೋಳಿಗೆ, ಉಂಡೆಗಳನ್ನು ತಯಾರಿಸಿ ಪ್ರದರ್ಶಿಸಿದ್ದು, ವೈವಿಧ್ಯಮಯವಾಗಿ ಅಲಂಕಾರಗೊಳಿಸಿ ಪ್ರದರ್ಶಿಸಿದ ರೀತಿ ಕಣ್ಮನ ಸೆಳೆದು, ಅಡುಗೆಯ ಘಮ ಬಾಯಲ್ಲಿ ನೀರೂರಿಸುವಂತಿತ್ತು.

ಕಾರ್ಯಕ್ರಮದಲ್ಲಿ ಉಪ ಕೃಷಿ ನಿರ್ದೇಶಕಿ ಮಂಜುಳಾ, ಲೋಕೇಶ್, ಸಹಾಯಕ ಕೃಷಿ ನಿರ್ದೇಶಕರಾದ ಕಾಶಿನಾಥ, ಸುನೀತಾ ಇತರೆ ಅಧಿಕಾರಿಗಳು, ಸ್ಪರ್ಧಿಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ