ಕುರುಗೋಡು: ವಿದ್ಯಾರ್ಥಿಗಳು ಜೀವನದಲ್ಲಿ ಮೌಲ್ಯಾಧಾರಿತ ಶಿಕ್ಷಣ, ಶಿಸ್ತು ಸಮಯ ಪಾಲನೆ ಬೆಳೆಸಿಕೊಳ್ಳಬೇಕು ಎಂದು ನೀಲಪ್ಪ ಮುಕ್ಕಣ್ಣನವರ್ ಹೇಳಿದರು.
ಇಂದಿನ ಮಕ್ಕಳು ದೇವರ ಸಮಾನ. ಮಕ್ಕಳು ತಮ್ಮ ಇಷ್ಟಕ್ಕೆ ತಕ್ಕಂತೆ ಕಲಿಯಲು ಬಿಡಿ. ಅವರ ಮೇಲೆ ಒತ್ತಡ ಬೇಡ. ಕಠಿಣ ಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ ಎಂದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳ ಸರ್ವತೋಮುಖ ಬೆಳೆವಣಿಗೆಗೆ ಮೇಘನಾ ಶಾಲಾ ಎಂಟು ವರ್ಷಗಳಿಂದ ತನ್ನದೇ ಕೊಡುಗೆ ನೀಡುತ್ತಾ ಬಂದಿರುವುದು ಶ್ಲಾಘನೀಯ. ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಸಾಲದು. ಆಗಾಗ ಶಾಲೆಗೆ ಭೇಟಿ ನೀಡಿ ಮಕ್ಕಳ ವಿದ್ಯಾಭ್ಯಾಸದ ಕುರಿತು ಶಿಕ್ಷಕರೊಂದಿಗೆ ಚರ್ಚಿಸಬೇಕು. ಮಕ್ಕಳು ಮೊಬೈಲ್, ಟಿವಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಮುಳುಗುತ್ತಿದ್ದಾರೆ ಎಂದರು.ಮೇಘನಾ ಶಾಲೆಯ ಆಡಳಿತ ಕಾರ್ಯದರ್ಶಿ ಬಿ.ಸಿದ್ದಯ್ಯ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಏನು ಬೇಕಾದರೂ ಸಾಧಿಸುವಂತಹ ಶಕ್ತಿ ಇರುತ್ತದೆ. ಮಕ್ಕಳಲ್ಲಿನ ಸಂಕುಚಿತ ಮನೋಭಾವನೆ ಹೋಗಲಾಡಿಸಲು ಶಾಲೆಯಲ್ಲಿ ಹೆಚ್ಚಿನ ಕ್ರಿಯಾ ಚಟುವಟಿಕೆಗಳನ್ನು ಆಯೋಜಿಸಿ ಮಕ್ಕಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದರು.
ಕುಸ್ಮ ಸಂಸ್ಥೆ ಅಧ್ಯಕ್ಷ ಜೆ.ರವಿ ರೆಡ್ಡಿ, ಕಸಾಪ ಅಧ್ಯಕ್ಷ ಮಸೂತಿ ನಾಗರಾಜ್, ಕೆ.ಮಲ್ಲಿಕಾರ್ಜುನ, ಶಿಕ್ಷಣ ಸಂಸ್ಥೆಯ ಜಿಲ್ಲಾಧ್ಯಕ್ಷ ಕೆ.ಶಂಕರ್, ರೇವತಿ ಸಿದ್ದಯ್ಯ, ಕಡ್ಲೆ ಈರಣ್ಣ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕೊಟಗಿ, ಶಂಭುಲಿಂಗಯ್ಯ ಸ್ವಾಮಿ, ಹೆಗ್ಗೂರು ಬಸವರಾಜ್, ಕೆ.ಪಾಂಡುರಂಗ, ಕಂಬಳಿ ಬಸಪ್ಪ, ಮಾರೆಪ್ಪ, ಬಸವರಾಜ್ ಇದ್ದರು
ಕುರುಗೋಡು ತಾಲೂಕು ಸಮೀಪದ ಕಲ್ಲುಕಂಭದ ಗ್ರಾಮದ ಮೇಘನಾ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.