ಹೈನು ವಿಜ್ಞಾನ ಪರೀಕ್ಷೆಯಲ್ಲಿ ಮೌಲ್ಯ ರಾಷ್ಟ್ರಕ್ಕೆ ಪ್ರಥಮ

KannadaprabhaNewsNetwork |  
Published : Sep 15, 2024, 01:55 AM IST
ಪೊಟೋ೧೪ಸಿಪಿಟಿ೩: ಹೈನು ವಿಜ್ಞಾನ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ಮೌಲ್ಯರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಚನ್ನಪಟ್ಟಣ: ತಾಲೂಕಿನ ಮತ್ತೀಕೆರೆ ಗ್ರಾಮದ ಎಂ.ಎಸ್.ಮೌಲ್ಯ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್(ಐಸಿಎಆರ್)ನ ಹೈನು ವಿಜ್ಞಾನ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ ಪ್ರಥಮ ರ್‍ಯಾಂಕ್ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ.

ಚನ್ನಪಟ್ಟಣ: ತಾಲೂಕಿನ ಮತ್ತೀಕೆರೆ ಗ್ರಾಮದ ಎಂ.ಎಸ್.ಮೌಲ್ಯ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್(ಐಸಿಎಆರ್)ನ ಹೈನು ವಿಜ್ಞಾನ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ ಪ್ರಥಮ ರ್‍ಯಾಂಕ್ ಪಡೆದು ತಾಲೂಕಿಗೆ ಕೀರ್ತಿ ತಂದಿದ್ದಾರೆ.

ಮತ್ತೀಕೆರೆ ಗ್ರಾಮದ ಶಶಿಕುಮಾರ್ ಹಾಗೂ ಪೂರ್ಣಿಮಾ ಶಿಕ್ಷಕ ದಂಪತಿ ಪುತ್ರಿಯಾದ ಮೌಲ್ಯ ಕಲುಬುರಗಿ ಜಿಲ್ಲೆಯ ಹೈನು ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಯಾಗಿದ್ದು, ಹೈನು ವಿಜ್ಞಾನ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್‍ಯಾಂಕ್ ಪಡೆದಿದ್ದಾರೆ.

ದೇಶದಲ್ಲಿ ಹೈನು ವಿಜ್ಞಾನ ಕೋರ್ಸ್‌ನ ೪೩ ಸರ್ಕಾರಿ ಮತ್ತು ೧೩ ಖಾಸಗಿ ಕಾಲೇಜುಗಳಿವೆ. ಈ ಪೈಕಿ ರಾಜ್ಯದಲ್ಲಿ ಬೆಂಗಳೂರು ಮತ್ತು ಮಹಗಾಂವ್‌ನಲ್ಲಿ ಮಾತ್ರ ಈ ಕೋರ್ಸ್ ಇದೆ. ಪದವಿ ಪರೀಕೆಯಲ್ಲಿ ಮೌಲ್ಯ ಪ್ರಥಮ ರ್‍ಯಾಂಕ್ ಪಡೆದು ದೇಶದ ಗಮನ ಸೆಳೆದಿದ್ದಾರೆ.

ಬೆಂಗಳೂರಿನ ಹೆಬ್ಬಾಳದ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆದ ೧೮ನೇ ಅಂತರ ಕಾಲೇಜು ಯುವ ಜನೋತ್ಸವ ಮತ್ತು ಕಲಾ ಪರ್ವ-೨೦೨೪ ಕಾರ್ಯಕ್ರಮದಲ್ಲಿ ಮೌಲ್ಯ ಸನ್ಮಾನಕ್ಕೆ ಭಾಜನರಾಗಿದ್ದಾರೆ.

ಪೊಟೋ೧೪ಸಿಪಿಟಿ೩: ಹೈನು ವಿಜ್ಞಾನ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆದ ಮೌಲ್ಯರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎರಡು ಪೋಲಿಯೊ ಹನಿ ಮಕ್ಕಳಿಗೆ ಜೀವಾಮೃತ: ಶಾಸಕ ಪ್ರಸಾದ್ ಅಬ್ಬಯ್ಯ
₹22267 ಕೋಟಿ ವೆಚ್ಚದಲ್ಲಿ 16.75 ಕಿ.ಮೀ ಸುರಂಗ ರಸ್ತೆ ನಿರ್ಮಿಸಲು ಅದಾನಿ ಗ್ರೂಪ್ ಬಿಡ್‌ ಸಲ್ಲಿಕೆ