ಹುಬ್ಬಳ್ಳಿ:
ನಗರದ ಶಿರೂರು ಪಾರ್ಕನ ವಿಶ್ವ ಹಿಂದೂ ಪರಿಷತ್ ಕಾರ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ವನವಾಸಿ ಜನರ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಗಿರಿಜನರ ಸೇವೆ ಮಾಡುವ ಹತ್ತಾರು ಸಂಸ್ಥೆಗಳು ದೇಶದಲ್ಲಿವೆ. ಅವರೆಲ್ಲರ ಉದ್ದೇಶ ಭೌತಿಕ ಅಭಿವೃದ್ಧಿಯಾಗಿದೆ. ಆದರೆ, ವನವಾಸಿ ಕಲ್ಯಾಣ ಸಂಸ್ಥೆ ಸಮುದಾಯವನ್ನು ಆಧ್ಯಾತ್ಮಿಕ, ಸಾಂಸ್ಕೃತಿಕವಾಗಿ ಅಭಿವೃದ್ಧಿ ಮಾಡುವ ಏಕೈಕ ಸಂಸ್ಥೆಯಾಗಿದೆ ಎಂದರು.ವನವಾಸಿ ಕಲ್ಯಾಣದ ಅಖಿಲ ಭಾರತೀಯ ಕಾರ್ಯಾಲಯ ಪ್ರಮುಖ ಶ್ರೀಪಾದ ಮಾತನಾಡಿ, ನಮ್ಮ ದೇಶದ್ದು ಅರಣ್ಯ ಸಂಸ್ಕೃತಿ. ವನವಾಸಿಗಳು ಶುದ್ಧ ಹಿಂದೂಗಳು. ವನವಾಸಿಗಳಲ್ಲಿ ಆತ್ಮಹತ್ಯೆ ಪ್ರವೃತ್ತಿ ಇಲ್ಲ. ಶಿಕ್ಷಣ, ಆರೋಗ್ಯ, ಸಾಂಸ್ಕೃತಿಕ, ಆರ್ಥಿಕ ಸೇರಿದಂತೆ ವನವಾಸಿಗಳ ಸಮಗ್ರ ವಿಕಾಸವೇ ವನವಾಸಿ ಕಲ್ಯಾಣದ ಉದ್ದೇಶವಾಗಿದೆ. ಕರ್ನಾಟಕದಿಂದಲೇ ಟೆಲಿ ಮೆಡಿಸಿನ್ ಎಂಬ ಹೊಸ ಪ್ರಯೋಗವನ್ನು ಸಂಸ್ಥೆ ಆರಂಭಿಸಿದೆ. ದೇಶದ 16 ಸಾವಿರ ಗ್ರಾಮಗಳಲ್ಲಿ 21 ಸಾವಿರ ಸೇವಾ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಹೇಳಿದರು.
ನಂತರ ಸಂವಾದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಉದ್ಯಮಿ ಮಹಾದೇವ ಕರಮರಿ, ಮಂಜುನಾಥ ಹಾರೋಗೇರಿ, ಪ್ರದೀಪ ಗಾವಡೆ, ವನವಾಸಿ ಕಲ್ಯಾಣದ ಹುಬ್ಬಳ್ಳಿ ನಗರ ಸಮಿತಿ ಸದಸ್ಯ ವಿಮಲ್ ಜೈನ್, ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ರವೀಂದ್ರ ಯೆಡಳ್ಳಿ ಸೇರಿದಂತೆ ಹಲವರಿದ್ದರು.