ನರೇಗಾ ಯೋಜನೆಯಡಿ ಜಿಲ್ಲೆಗೆ ವಿವಿಧ ಪ್ರಶಸ್ತಿ

KannadaprabhaNewsNetwork |  
Published : Feb 06, 2025, 12:16 AM IST
5ಕೆಪಿಎಲ್23 ನರೇಗಾ ಯೋಜನೆಯಡಿ ವಿವಿಧ ಪ್ರಶಸ್ತಿಗಳನ್ನು ಕೊಪ್ಪಳ  ಜಿಲ್ಲೆಗೆ ಲಭಿಸಿರುವುದನ್ನು ಬೆಂಗಳೂರಿನಲ್ಲಿ ಸ್ವೀಕಾರ ಮಾಡುತ್ತಿರುವುದು. | Kannada Prabha

ಸಾರಾಂಶ

ನರೇಗಾ ಯೋಜನೆಯಡಿ ಜಿಲ್ಲೆಗೆ ವಿವಿಧ ಪ್ರಶಸ್ತಿ ಲಭಿಸಿದೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ 2023-24ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮುನಿರಾಬಾದ ಡ್ಯಾಂ ಗ್ರಾಪಂ, ಉತ್ತಮ ಕಾಯಕ ಬಂಧು ಅಳವಂಡಿ ಗ್ರಾಪಂ ಶ್ರೀದೇವಿ ಎಲಿಬಳ್ಳಿ, ನರೇಗಾ ಯೋಜನೆಯಡಿ ಒಗ್ಗೂಡಿಸುವಿಕೆ ಪ್ರಶಸ್ತಿಯನ್ನು ಕೊಪ್ಪಳ ತೋಟಗಾರಿಕೆ ಇಲಾಖೆಗೆ ಬೆಂಗಳೂರು ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪ್ರದಾನ ಮಾಡಲಾಯಿತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚಗೌಡ, ಶಾಸಕ ರಿಜ್ವಾನ್ ಅರ್ಷದ್, ಪ್ರಧಾನ ಕಾರ್ಯದರ್ಶಿಗಳಾದ ಅಜುಂಮ್ ಫರ್ವೆಜ್, ಉಮಾ ಮಹಾದೇವನ್, ಅಯುಕ್ತರಾದ ಪವನಕುಮಾರ ಮಾಲಪಾಟಿ, ಅರುಂಧತಿ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಲಾಯಿತು.

ಅತ್ಯುತ್ತಮ ಗ್ರಾಪಂ ಪ್ರಶಸ್ತಿಯನ್ನು ಮುನಿರಾಬಾದ ಡ್ಯಾಂ ಗ್ರಾಪಂ ಅಧ್ಯಕ್ಷ ಅಯೂಬ್ ಖಾನ್, ಪಿಡಿಒ ಮಹೇಶ್ ಸಜ್ಜನ್, ಉಪಾಧ್ಯಕ್ಷ ಸೌಭಾಗ್ಯ ನಾಗರಾಜ ಮತ್ತು ಸರ್ವ ಸದಸ್ಯರು, ತಾಂತ್ರಿಕ ಸಹಾಯಕ, ಗ್ರಾಪಂ ಸಿಬ್ಬಂದಿ ‌ಸ್ವೀಕರಿಸಿದರು.

ಅಳವಂಡಿ ಗ್ರಾಪಂ ಉತ್ತಮ ಕಾಯಕ‌ಬಂಧು ಪ್ರಶಸ್ತಿಯನ್ನು ಕಾಯಕ ಬಂಧು ಶ್ರೀದೇವಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ‌ ತುರಾದಿ, ಅಧ್ಯಕ್ಷೆ ಶಂಕ್ರಮ ಜೊಗಿನ್, ಪಿಡಿಒ ಕೊಟ್ರಪ್ಪ‌ ಅಂಗಡಿ‌, ಗ್ರಾಮ ಕಾಯಕ ಮಿತ್ತ ಗೀತಾ ಕಿಲ್ಲೆದ ಸ್ವೀಕರಿಸಿದರು.

ಅತ್ಯುತ್ತಮ‌ ಒಗ್ಗೂಡಿಸುವಿಕೆ ಪ್ರಶಸ್ತಿಯನ್ನು ಕೊಪ್ಪಳ ತೋಟಗಾರಿಕೆ ಇಲಾಖೆಯ ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಿ., ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಹಿರಿಯ‌ ಸಹಾಯಕ ತೋಟಗಾರಿಕೆ‌ ಅಧಿಕಾರಿಗಳ ತಂಡ ಪ್ರಶಸ್ತಿ ಸ್ವೀಕರಿಸಿತು.

ಜಿಲ್ಲಾ ಪಂಚಾಯಿತಿ‌ಯಿಂದ ನಿರ್ಮಿಸಲಾಗಿದ್ದ ಬೂದು ನೀರು ನಿರ್ವಹಣಾ ಕಾಮಗಾರಿ ಅನುಷ್ಠಾನ ಮಾದರಿಯ ಸ್ತಬ್ಧಚಿತ್ರವನ್ನು ಇಲಾಖಾ ಸಚಿವರು, ವಿಧಾನಪರಿಷತ್ ಸಭಾಪತಿ ವೀಕ್ಷಿಸಿ‌ ಅನುಷ್ಠಾನ ಮಾದರಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಕೊಪ್ಪಳ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಾಲಚಂದ್ರನ್, ಎಡಿಪಿಸಿ ಮಹಾಂತಸ್ವಾಮಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್, ಕಿರಿಯ ಅಭಿಯಂತರ ವಾಸಣ್ಣ, ಜಿಲ್ಲಾ ಐಇಸಿ‌ ಸಂಯೋಜಕ ಶ್ರೀನಿವಾಸ ಚಿತ್ರಗಾರ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ‌ ಸಂಯೋಜಕರಾದ ಸಂತೋಷ‌ ನಂದಾಪುರ, ವಿಶ್ವನಾಥ, ತಾಂತ್ರಿಕ ಸಹಾಯಕ ಮಲ್ಲಿಕಾರ್ಜುನ, ಗುರುರಾಜ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಸಿಸಿ ಬ್ಯಾಂಕ್ ಚುನಾವಣೆ: ನಾಮಪತ್ರ ಹಿಂಪಡೆವ ಅವಧಿ ವಿಸ್ತರಣೆ
ಒಡೆದ ಮನಸ್ಸುಗಳ ಒಗ್ಗೂಡಿಸುವ ಶಕ್ತಿ ಆಧ್ಯಾತ್ಮದಲ್ಲಿದೆ: ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ