ಕನ್ನಡಪ್ರಭ ವಾರ್ತೆ ಸೊರಬ
ಸೊರಬ ಪುರಸಭಾ ವ್ಯಾಪ್ತಿಯ ಎಸ್.ಎಸ್.ಸಿ ಮತ್ತು ಪುರಸಭೆ ಉದ್ದಿಮೆ ನಿಧಿ ವಿಶೇಷ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮಧು ಬಂಗಾರಪ್ಪ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿದ್ದಾರೆ. ಅವರು ಬೆಂಗಳೂರಿನಲ್ಲಿ ಸರ್ಕಾರಿ ಕಾರ್ಯದಲ್ಲಿ ನಿರತರಾಗಿದ್ದರೂ ಅಭಿವೃದ್ಧಿ ಕೆಲಸ ನಿಲ್ಲಬಾರದು ಎಂಬ ಉದ್ದೇಶದಿಂದ ಅವರ ಸೂಚನೆಯಂತೆ ಇಂದು ಗುದ್ದಲಿ ಪೂಜೆ ನೆರವೇರಿಸಲಾಯಿತು ಎಂದರು.ಪುರಸಭೆ ವ್ಯಾಪ್ತಿಯಲ್ಲಿ ಬರುವ ಗಾಂಧಿ ಪಾರ್ಕ್, ರಥ ನಿಲುಗಡೆ ಶೆಡ್ ನಿರ್ಮಾಣ ಕಾಮಗಾರಿ, ಪುರಸಭೆ ವ್ಯಾಪ್ತಿಯಲ್ಲಿ ಬರುವ ಹಳೇ ಸಂತೆ ಮಾರುಕಟ್ಟೆ ಜಾಗದಲ್ಲಿ ಕೋಳಿ ಮಾಂಸ ಮಾರುಕಟ್ಟೆ ಮಳಿಗೆ ಹಾಗೂ ಕುರಿ ಮೇಕೆ ಮಾಂಸ ಮಾರುಕಟ್ಟೆ, ಪುರಸಭೆ ಉದ್ದಿಮೆ ನಿಧಿ ಅನುದಾನದಲ್ಲಿ ಪುರಸಭೆ ವ್ಯಾಪ್ತಿಯ ಕಾಲೇಜು ವಿದ್ಯಾರ್ಥಿನಿಲಯ ಬಳಿ ಸಂತೆ ಮಾರುಕಟ್ಟೆಯ ಅಭಿವೃದ್ಧಿ ಕಾಮಗಾರಿ, ಪುರಸಭೆ ವ್ಯಾಪ್ತಿಯ ಸಾಗರ ರಸ್ತೆಯಲ್ಲಿರುವ ಅರಣ್ಯ ಇಲಾಖೆಯ ನರ್ಸರಿ ಪಕ್ಕದಲ್ಲಿ ಸಿ.ಸಿ. ರಸ್ತೆ ಕಾಮಗಾರಿಯ 2.50 ಲಕ್ಷ ರು. ಕಾಮಗಾರಿಗೆ ಗುದ್ದಲಿ ನೆರವೇರಿಸಲಾಯಿತು ಎಂದರು. ಜತೆಗೆ, ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಜಯಶೀಲ ಗೌಡ, ಆಶ್ರಯ ಸಮಿತಿ ಅಧ್ಯಕ್ಷ ಪ್ರಶಾಂತ್ ಮೇಸ್ತ್ರಿ, ಸದಸ್ಯರಾದ ನೆಹರು ಕೊಡಕಣಿ, ಚಿನ್ನಪ್ಪ, ಪುರಸಭೆ ಮುಖ್ಯಾಧಿಕಾರಿ ಎಚ್.ವಿ. ಚಂದನ್, ಪುರಸಭೆ ಮಾಜಿ ಅಧ್ಯಕ್ಷ ವೀರೇಶ್ ಮೇಸ್ತ್ರಿ, ಮುಖಂಡರಾದ ಅನ್ಸರ್ ಅಹಮದ್, ಸುಜಾಯತ್ ಉಲ್ಲ, ಫಯಾಜ್ ಅಹ್ಮದ್, ಶಿವಾನಂದ ಬಿಳಗಲಿ, ಅಫ್ರಿನಾ ಬೇಗಂ, ಪರಶುರಾಮ್, ಪ್ರಕಾಶ, ರತ್ನಮ್ಮ ನಾಗಪ್ಪ, ಡಾಕಪ್ಪ, ಶರೀಫ್ ಸಾಬ್, ಶೋಭರಾಜ್ ಮೊದಲಾದವರು ಹಾಜರಿದ್ದರು..