ಕನ್ನಡಪ್ರಭ ವಾರ್ತೆ ಲೋಕಾಪುರ
ಶನಿವಾರ ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಗುರು ಬಸವೇಶ್ವರ ವರ್ತಕರ ಕ್ಷೇಮಾಭಿವೃದ್ಧಿ ಸಂಘ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಸೇವೆಯೊಂದಿಗೆ ಸಂಘದ ಸದಸ್ಯರು ಸಹಕಾರದಿಂದ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದೆ, ಸದಸ್ಯರು ಪರಸ್ಪರ ಸಹಕಾರದೊಂದಿಗೆ ಸಂಘಟನೆಯನ್ನು ಇನ್ನಷ್ಟು ಬಲಿಷ್ಠಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲು ಸಂಘದ ಪದಾಧಿಕಾರಿಗಳಿಗೆ ಸಲಹೆ ನೀಡಿದರು.
ನಿವೃತ್ತ ಪ್ರಾಚಾರ್ಯ ವಿ.ಬಿ. ಮಾಳಿ ಮಾತನಾಡಿ, ಸಂಘದ ಸ್ಥಾಪನೆ ಸುಲಭ. ಆದರೆ ಅದನ್ನು ಪೋಷಿಸಿ ಬೆಳೆಸುವುದು ಕಷ್ಟ, ಪ್ರಾಮಾಣಿಕತೆಯ ಆಡಳಿತ ಮಂಡಳಿ ಇದ್ದರೆ ಸಂಘಟನೆಯು ಪ್ರಗತಿ ಸಾಧ್ಯ. ಕಷ್ಟಪಟ್ಟು ದುಡಿಯುವವರೆಲ್ಲ ಸೇರಿ ಸಂಘಟನೆ ಮೂಲಕ ಮತ್ತೊಬ್ಬರ ಕಷ್ಟದಲ್ಲಿ ನೆರವಾಗಬೇಕು ಎನ್ನುವ ಉದ್ದೇಶದಿಂದ ಸಂಘ ಹುಟ್ಟಿದ್ದು ಎಲ್ಲರಿಗೂ ಮಾದರಿಯಾಗಿದೆ ಎಂದರು.ಸಂಘದ ಅಧ್ಯಕ್ಷ ಸದಾಶಿವ ಉದಪುಡಿ ಮಾತನಾಡಿ, ಸಣ್ಣ ಮಳಿಗೆ ಹಿಡಿದು ದೊಡ್ಡ ವಾಣಿಜ್ಯ ಮಳಿಗೆಯ ತನಕವೂ ವ್ಯಾಪಾರ ಮಾಡುವವರು ಎಲ್ಲರೂ ವರ್ತಕರೇ ಆಗಿದ್ದಾರೆ, ವರ್ತಕರಲ್ಲಿ ಸ್ಪರ್ಧೆ ಇರಬಾರದು. ವೈಮನಸ್ಸು ಬಿಟ್ಟು ಪರಸ್ಪರ ಸಹೋದರತ್ವ, ಪ್ರಮಾಣಿಕವಾಗಿ ವ್ಯಾಪಾರ ಮಾಡಿದಾಗ ಖಂಡಿತ ವ್ಯಾಪಾರದಲ್ಲಿ ಯಶಸ್ಸು ಸಿಗುತ್ತದೆ ಎಂದ ಅವರು, ಸಂಘದ ಅಭಿವೃದ್ಧಿಗೆ ಮತ್ತು ನಿರ್ಣಯಗಳಿಗೆ ಪ್ರತಿಯೊಬ್ಬರು ಸಹಕರಿಸಬೇಕೆಂದು ಕೋರಿದರು.
ಜ್ಞಾನೇಶ್ವರ ಮಠದ ಪೀಠಾಧಿಕಾರಿ ಬ್ರಹ್ಮಾನಂದ ಶ್ರೀಗಳು, ಮಲ್ಲಯ್ಯನ ಗುಡ್ಡದ ಮಹಾರುದ್ರಯ್ಯ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಿಎಸೈ ಸಿದ್ದಪ್ಪ ಯಡಹಳ್ಳಿ, ಅಲ್ಲಾಸಾಹೇಬ ಯಾದವಾಡ, ಡಾ. ವಿನಯ ಕುಲಕರ್ಣಿ, ಪಪಂ ಆರೋಗ್ಯ ನಿರೀಕ್ಷಕ ಭಾಗ್ಯಶ್ರೀ ಪಾಟೀಲ ಇತರರು ಇದ್ದರು.