ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದ ಪೇಟೆ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವಾಸವಿ ವನಿತ ಮಹಿಳಾ ಸಂಘದಿಂದ ವಿಶಿಷ್ಟ ಆಹಾರ ಮೇಳವನ್ನು ಏರ್ಪಡಿಸಲಾಗಿತ್ತು.ವಾಸವಿ ವನಿತಾ ಮಹಿಳಾ ಸಂಘದ ಅಧ್ಯಕ್ಷೆ ಜ್ಯೋತಿ ಸುರೇಶ್ ಮಾತನಾಡಿ, ನಮ್ಮ ಸಂಘದಿಂದ ವಿವಿಧ ಬಗೆಯ ರುಚಿಕರ ತಿನಿಸುಗಳನ್ನು ಒಂದೇ ಕಡೆ ಪರಿಚಯಿಸುವ ಉದ್ದೇಶದಿಂದ ಈ ಮೇಳ ಹಮ್ಮಿಕೊಳ್ಳಲಾಗಿದ್ದು ಸಾಂಪ್ರದಾಯಿಕ ಅಡುಗೆಗಳನ್ನು ಪರಿಚಯಿಸುತ್ತಿದ್ದೇವೆ. ಮನೆಯಲ್ಲಿ ಮಾಡಿದ ಖಾದ್ಯಗಳನ್ನು ತಯಾರಿಸಿದ ತಾಜಾ ಮತ್ತು ಆರೋಗ್ಯಕರ ಆಹಾರ ಪದಾರ್ಥಗಳನ್ನು ತಯಾರಿಸಿ ಮಾಡಿಕೊಂಡು ಬಂದಿದ್ದು ಈ ಒಂದು ಅಡುಗೆ ಮೇಳೆ ವಿಶೇಷ ಎನಿಸಿದೆ ಎಂದರು.
ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಎಚ್ ವಿ ರವೀಂದ್ರನಾಥ್ ಹಾಗೂ ಕಾರ್ಯದರ್ಶಿ ಅಶೋಕ್ ಮಾತನಾಡಿ, ಈ ದಿನ ವಾಸವಿ ಮಹಿಳಾ ಸಂಘದಿಂದ ಆಹಾರ ಮೇಳ ನಡೆಯುತ್ತಿದ್ದು, ವಾಸವಿ ಮಹಿಳಾ ಸಂಘವು ಮಹಿಳೆಯರ ಸಬಲೀಕರಣ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಬರುತ್ತಿದ್ದಾರೆ. ಸುಮಾರು ೨೦ ಸ್ಟಾಲ್‌ಗಳಿದ್ದು ಎಲ್ಲಾ ಆಹಾರ ಖಾದ್ಯಗಳನ್ನು ವಿನೂತನ ರೀತಿಯಲ್ಲಿ ಮಾಡಿಕೊಂಡು ಬರುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಜಂಕ್‌ಫುಡ್‌ಗಳ ರಾಸಾಯನಿಕ ಮಿಶ್ರಿತ ಆಹಾರ ಸೇವಿಸಿ ತಮ್ಮ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ. ಅದು ಬಿಟ್ಟು ಮನೆಯಲ್ಲಿ ತಯಾರಿಸಿದ ಅಡುಗೆಗಳನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ವಾಸವಿ ವನಿತಾ ಸಂಘದ ಶಾಲಿನಿ ನಾಗೇಂದ್ರ, ಉಪಾಧ್ಯಕ್ಷೆ, ಕಾರ್ಯದರ್ಶಿ ಲಕ್ಷ್ಮೀ ಗುರುರಾಜ್, ಖಜಾಂಚಿ ಶೈಲಾಶ್ರೀ ರಘು, ಲಕ್ಷ್ಮೀ ವಿಶ್ವನಾಥ್, ಶೈಲಾ ರಮೇಶ್ ಗುಪ್ತ, ಮಾಲತಿ ಪ್ರಶಾಂತ್, ರಾಧ ಕೃಷ್ಣಕುಮಾರ್, ಪ್ರತಿಮ ರಘುನಂದನ್, ರಜನಿ ಅಶೋಕ್, ಲಕ್ಷ್ಮೀ ಪ್ರವೀಣ್ ಕುಮಾರ್ ನಿರ್ದೇಶಕರು ಆರ್ಯ ವೈಶ್ಯ ಮಂಡಳಿ, ವಾಸವಿ ಯುವಜನ ಸಂಘ ಇದ್ದರು ಭಜನಾ ಮಂಡಳಿ ಸದಸ್ಯರು ಇದ್ದರು.