ಮೈಸೂರು: ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದೆ ಎಂಬ ನಟ ಕಮಲಹಾಸನ್ ಹೇಳಿಕೆ ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಗರದ ಹಾರ್ಡಿಂಜ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ಕರ್ನಾಟಕದಿಂದ ಕಮಲಹಾಸನ್ ಬಹಿಷ್ಕರಿಸಬೇಕು. ಅವರ ಸಿನಿಮಾ ರಾಜ್ಯದಲ್ಲಿ ಬಿಡುಗಡೆಯಾಗಬಾರದು. ಈ ವಿಚಾರದಲ್ಲಿ ಕನ್ನಡ ಚಿತ್ರರಂಗ ಗಂಭೀರ ಚಿಂತನೆ ಮಾಡಬೇಕಿದೆ. ಒಂದು ವೇಳೆ ಕಮಲಹಾಸನ್ ಸಿನಿಮಾ ಬಿಡುಗಡೆಯಾದರೆ ಭಾರೀ ಹೋರಾಟ ಮಾಡುತ್ತೇವೆ. ಎಲ್ಲಾ ಕನ್ನಡ ಪರ ಸಂಘಟನೆಗಳು ಸೇರಿ ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಅವರು ಎಚ್ಚರಿಸಿದರು.
ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳು ಇದನ್ನು ಖಂಡಿಸಬೇಕು. ಸಾಹಿತಿಗಳು, ಬರಹಗಾರರು ಈಗ ಕನ್ನಡದ ಪರ ನಿಲ್ಲಬೇಕು. ನಟ ಶಿವರಾಜ್ ಕುಮಾರ್ ಮಾತ್ರವಲ್ಲ, ಎಲ್ಲಾ ನಟರು ಕನ್ನಡದ ಪರ ನಿಲ್ಲಬೇಕು ಎಂದು ಅವರು ಆಗ್ರಹಿಸಿದರು.ಮುಖಂಡರಾದ ಬಿ.ಎ. ಶಿವಶಂಕರ್, ತೇಜಸ್ ಲೋಕೇಶ್ ಗೌಡ, ಮಧುವನ ಚಂದ್ರು ಮೊದಲಾದವರು ಇದ್ದರು.
----------ಕೋಟ್...
ಆರ್ ಸಿಬಿ ಗೆದ್ದರೆ ನಮಗೆ ಕಿರೀಟ ಸಿಕ್ಕಂತೆ. ಆರ್ ಸಿಬಿ ಗೆಲ್ಲಬೇಕೆಂಬುದುಸಮಗ್ರ ಕನ್ನಡಿಗರ ಆಶಯವಾಗಿದೆ. ಈ ಬಾರಿ ಆರ್ ಸಿಬಿ ಕಪ್ ಗೆಲ್ಲಲಿ.- ವಾಟಾಳ್ ನಾಗರಾಜ್