ಎಸಿಎಫ್ ಆಗಿ ವಾಟೇರಿರ ಕಾರ್ಯಪ್ಪ ಅಧಿಕಾರ ಸ್ವೀಕಾರ

KannadaprabhaNewsNetwork |  
Published : Jan 26, 2025, 01:33 AM IST
ಎಸಿಎಫ್ ಆಗಿ ವಾಟೇರಿರ ಕಾರ್ಯಪ್ಪ ಅಧಿಕಾರ ಸ್ವೀಕಾರ. | Kannada Prabha

ಸಾರಾಂಶ

ಮಡಿಕೇರಿ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಗಿ ವಾಟೇರಿರ ಪಿ ಕಾರ್ಯಪ್ಪ ಅಧಿಕಾರ ಸ್ವೀಕರಿಸಿದರು.

ಮಡಿಕೇರಿ - ಮಡಿಕೇರಿ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ( ACF) ಆಗಿ ವಾಟೇರಿರ.ಪಿ.ಕಾರ್ಯಪ್ಪ ಅಧಿಕಾರ ಸ್ವೀಕರಿಸಿದರು.

ಮೂಲತ ಕೊಡಗು ಜಿಲ್ಲೆಯ ಮಗ್ಗುಲ ಗ್ರಾಮದವರಾದ ವಾಟೇರಿರ .ಪಿ.ಕಾರ್ಯಪ್ಪ ನವರು ಈ ಹಿಂದೆ ಕುಂದಾಪುರದಲ್ಲಿ ಕರಾವಳಿ ಮತ್ತು ಸಾಗರ ಕೋಶ ವಿಭಾಗದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿಯಾಗಿ ಸೇವೆಯಲ್ಲಿದ್ದು ಈಗ ಜಿಲ್ಲೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಒದಗಿ ಬಂದಿದೆ. ಇವರ ಕುಟುಂಬ ಮಡಿಕೇರಿ ನಗರದ ನಿವಾಸಿಗಳಾಗಿದ್ದಾರೆ.

-------------------

ಫೈನಾನ್ಸ್‌ಗಳ ಕಿರುಕುಳ ಗಂಭೀರವಾಗಿ ಪರಿಗಣನೆ: ಭೋಸರಾಜು

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಗಳ ಕಿರುಕುಳಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಚಿವ ಸಂಪುಟ ಸಭೆ ನಡೆದಿದ್ದು, ಕಠಿಣವಾದ ಕಾನೂನು ತರುವುದಕ್ಕೆ ನಿರ್ಧಾರ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಹೇಳಿದ್ದಾರೆ.

ವಿರಾಜಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಗಳ ಕಿರುಕುಳ ಪ್ರಕರಣವನ್ನು ಸರ್ಕಾರ ಬಹಳ ಗಂಭೀರವಾಗಿ ತೆಗೆದುಕೊಂಡಿದೆ. ಎಲ್ಲಾ ಜಿಲ್ಲಾಧಿಕಾರಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.ಮುಂದೆ ಈ ರೀತಿ ಅನಾಹುತ ಆಗದಂತೆ ಕ್ರಮವಾಗಲಿದೆ. ಇಂತಹ ಸಮಸ್ಯೆಗಳನ್ನು ತಪ್ಪಿಸುವುದಕ್ಕಾಗಿಯೇ ಸರ್ಕಾರ ಶೂನ್ಯ ಬಡ್ಡಿದರದಲ್ಲಿ ಸಾಲ ಕೊಡುತ್ತಿತ್ತು. ಸಹಕಾರ ಸಂಘಗಳ ಮೂಲಕ ಸಾಲ ಕೊಡಲಾಗುತ್ತಿದೆ. ಆದರೂ ಜನರು ಈ ರೀತಿ ಫೈನಾನ್ಸ್ ಗಳಿಂದ ಸಾಲ ತೆಗೆದುಕೊಳ್ಳುತ್ತಿದ್ದಾರೆ. ಈ ರೀತಿ ಸಾಲ ತೆಗೆದುಕೊಳ್ಳಬಾರದೆಂದು ಸರ್ಕಾರ ಗ್ಯಾರಂಟಿ ಯೋಜನೆ ಮೂಲಕ ಅನುದಾನ ಕೊಡುತ್ತಿದೆ. ಆದರೂ ಕೆಲವು ಈ ರೀತಿ ಸಾಲ ತೆಗೆದುಕೊಂಡು ಸಮಸ್ಯೆ ಆಗುತ್ತಿದೆ. ಆದರೂ ಮೈಕ್ರೋ ಫೈನಾನ್ಸ್ ಗಳ ಆಗುತ್ತಿರುವ ತೊಂದರೆ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ವಿಪಕ್ಷಗಳ ಅಸ್ಥಿರಗೊಳಿಸುತ್ತಿದೆ ಎಂಬ ಕೇಂದ್ರ ಸಚಿವ ಎಚ್ ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಸ್ಥಿರಗೊಳಿಸುತ್ತಿದ್ದಾರೆ ಅಂತ ಮಾತನಾಡುವ ಕುಮಾರಸ್ವಾಮಿ ಅವರಿಗೆ ನಾಚಿಕೆ ಆಗಬೇಕು ಎಂದು ಎಚ್ ಡಿಕೆ ವಿರುದ್ಧ ಸಚಿವ ಭೋಸರಾಜ್ ಕಿಡಿ ಕಾರಿದರು.

ದೇಶದಲ್ಲಿ ಅಸ್ಥಿರ ಅಂತ ತಂದಿದ್ದೇ ಬಿಜೆಪಿಯವರು. ಕರ್ನಾಟಕ ಸೇರಿದಂತೆ ಆಪರೇಷನ್ ಅನ್ನುವ ಶಬ್ಧ ತಂದಿದ್ದೇ ಬಿಜೆಪಿ. ಅವರ ಜೊತೆಗೆ ಸೇರಿಕೊಂಡಿರುವ ಕುಮಾರಸ್ವಾಮಿ ಹೀಗೆ ಹೇಳುತ್ತಿದ್ದಾರೆ. ಹೀಗೆ ಹೇಳುವುದಕ್ಕೆ ಅವರಿಗೆ ನಾಚಿಕೆ ಆಗಬೇಕು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!