ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸೋಮವಾರ ಕರೆಯಲಾಗಿದ್ದ ಪತ್ರಿಕಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಬಿ-ಜಿ-ರಾಮ್-ಜಿ ಉದ್ಯೋಗ ಖಾತ್ರಿ ಕಾಯ್ದೆಯಲ್ಲಿನ ತಿದ್ದುಪಡಿಗೆ ಸಂಬಂಧಪಟ್ಟ ವಾಸ್ತವಿಕ ಅಂಶಗಳನ್ನು ತಿಳಿಯದೇ ಕಾಂಗ್ರೆಸ್ಸಿಗರು ಅರೋಪ ಮಾಡುತ್ತಿದ್ದಾರೆ.
ಯೋಜನೆಗಳಲ್ಲಿನ ಪಾರದರ್ಶಕತೆ ಕಾಪಾಡಿಕೊಳ್ಳುವಲ್ಲಿ ಮತ್ತು ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಆಡಳಿತಾತ್ಮಕ ಹಿತದೃಷ್ಟಿಯಿಂದ ಕಾಲಕಾಲಕ್ಕೆ ಅಗತ್ಯ ಪರಿಷ್ಕರಣೆ ತರುವುದು ಮೊದಲಿನಿಂದಲೂ ನಡೆದ ಪದ್ದತಿ. ಅದೇ ರೀತಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ. ಸರ್ಕಾರ ನರೇಗಾ ಯೋಜನೆಯಲ್ಲಿದ್ದ ಹತ್ತಾರು ಲೋಪದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ನರೇಗಾಯೋಜನೆಗೆ ಜನೋಪಯೋಗಿ ತಿದ್ದುಪಡಿ ತಂದಿದೆ ಎಂದರು.ಪ್ರಧಾನಿ ನರೇಂದ್ರ ಮೋದಿಯವರ ಹೊಸ ಕಲ್ಪನೆಯೊಂದಿಗೆ ಈ ಯೋಜನೆಗೆ ಡಿಸೆಂಬರ್೨೦೨೫ರಲ್ಲಿ ಸಂಸತ್ತಿನಲ್ಲಿ ಮಸೂದೆ ಮಂಡಿಸಿ ತಿದ್ದುಪಡಿ ತರಲಾಗಿದೆ. ಭಾರತದಲ್ಲಿ ಉದ್ಯೋಗ ಖಾತ್ರಿ ಬಗ್ಗೆ ಇರುವ ಶಾಸನ ಇದೇ ಪ್ರಥಮ ಬಾರಿಗೆ ತಿದ್ದುಪಡಿಯಾಗಿಲ್ಲ. ಪ್ರಥಮ ಬಾರಿಗೆ ಹೆಸರು ಬದಲಾಗಿಲ್ಲ. ಇವು ಹತ್ತಾರು ಮಜಲುಗಳಲ್ಲಿ ಬದಲಾಗಿದೆ. ಭಾರತದ ಕೂಲಿ ಉದ್ಯೋಗ ಉಪಕ್ರಮಗಳು ಹಲವು ಹಂತಗಳ ಮುಂದುವರೆದಿದೆ ಎಂದರು.
ಕಳೆದ ಎರಡು ದಶಕಗಳಿಂದ ಗ್ರಾಮೀಣ ಉದ್ಯೋಗವು ಭಾರತದ ಸಾಮಾಜಿಕ ರಕ್ಷಣಾ ಚೌಕಟ್ಟಿನ ಮೂಲಾಧಾರವಾಗಿ ಪರಿಣಮಿಸಿದೆ. ೨೦೦೫ರಲ್ಲಿ ಜಾರಿಗೆ ಬಂದಾಗಿನಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯು ಕೂಲಿ ಉದ್ಯೋಗವನ್ನು ಒದಗಿಸುವಲ್ಲಿ, ಗ್ರಾಮೀಣ ಆದಾಯವನ್ನು ಸ್ಥಿರಗೊಳಿಸುವಲ್ಲಿ ಮತ್ತು ಮೂಲಭೂತ ಸೌಕರ್ಯಗಳನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ.ಆದಾಗ್ಯೂ ಕಾಲಾನಂತರದಲ್ಲಿ ಗ್ರಾಮೀಣ ಭಾರತದ ರಚನೆ ಮತ್ತು ಉದ್ದೇಶಗಳು ಗಣನೀಯವಾಗಿ ವಿಕಸನಗೊಂಡಿವೆ. ಹೆಚ್ಚುತ್ತಿರುವ ಆದಾಯ. ವಿಸ್ತರಿಸಿದ ಸಂಪರ್ಕ ಸೇವೆಗಳು, ವ್ಯಾಪಕವಾದ ಡಿಜಿಟಲ್ ನುಗ್ಗುವಿಕೆ ಮತ್ತು ವೈವಿದ್ಯಮಯ ಜೀವನೋಪಾಯಗಳು ಗ್ರಾಮೀಣ ಉದ್ಯೋಗದ ಅಗತ್ಯತೆಗಳ ಸ್ವರೂಪವನ್ನು ಬದಲಿಸಿವೆ. ಈ ಹಿನ್ನಲೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ. ಸರ್ಕಾರ ವಿಕಸಿತ ಭಾರತ -ಗ್ಯಾರಂಟಿ ಫಾರ್ ರೋಜಗಾರ್ ಆಂಡ್ ಅಜೀವಿಕ ಮಿಷನ್ (ಗ್ರಾಮೀಣ) ಮಸೂದೆ ೨೦೨೫ನ್ನು ಜಾರಿಗೆ ತಂದಿದೆ. ಇದನ್ನು ವಿಕಸಿತ ಭಾರತ್ ಜಿ-ರಾಮ್.-ಜಿ ಮಸೂದೆ ೨೦೨೫ ಎಂದು ಕರೆಯಲಾಗಿದೆ.
ಈ ಮಸೂದೆಯು ನರೇಗಾ ಯೋಜನೆಯ ಸಮಗ್ರ ಶಾಸನಬದ್ದ ಕೂಲಂಕುಷ ಬದಲಾವಣೆಯನ್ನು ಪತ್ರಿನಿಧಿಸುತ್ತದೆ. ಹೊಣೆಗಾರಿಕೆ, ಮೂಲಸೌಕರ್ಯ ಫಲಿತಾಂಶಗಳು ಮತ್ತು ಆದಾಯದ ಭದ್ರತೆಯನ್ನು ಬಲಪಡಿಸುವ ಜೊತೆಗೆ ಗ್ರಾಮೀಣ ಉದ್ಯೋಗಕ್ಕಾಗಿ ವಿಕಸಿತ ಭಾರತ೨೦೪೭ರ ದೀರ್ಘಕಾಲಿನ ದೃಷ್ಟಿಕೋನದಿಂದ ಈ ಯೋಜನೆಯನ್ನು ಸಂಯೋಜಿಸಲಾಗಿದೆ ಎಂದು ಸೋಮಣ್ಣ ತಿಳಿಸಿದರು.ಯೋಜನೆ ತಿದ್ದುಪಡಿ ಹಾಗೂ ಮಾರ್ಪಾಡು ಬಗ್ಗೆ ಬೇರೆ ಬೇರೆ ಹೇಳಿಕೆ ನೀಡಿ ಸಾರ್ವಜನಿಕ ವಲಯದಲ್ಲಿ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲವೆಂಬುದು ನನ್ನ ಸಲಹೆ ನೀಡಿ. ಯೋಜನೆ ಪಾರದರ್ಶಕವಾಗಿ ಮತ್ತು ಸಮರ್ಥವಾಗಿ ಜಾರಿಯಾಗದಿರುವುದನ್ನು ಸಹಿಸದ ಪ್ರತಿಪಕ್ಷಗಳು ಈ ಯೋಜನೆಗೆ ಸುಳ್ಳುವದಂತಿಗಳನ್ನು ಹರಡುತ್ತಿದೆ. ವಾಸ್ತವ ಅಂಶಗಳನ್ನು ರೈತರು ಕೂಲಿ ಕಾರ್ಮಿಕರು ಅರಿಯಬೇಕು.
ಈ ಯೋಜನೆ ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಕಸಿಯುತ್ತಿಲ್ಲ. ಬದಲಾಗಿ ಹತ್ತಾರು ಪ್ರಯೋಜನಗಳನ್ನು ನೀಡಲಾಗಿದೆ. ನರೇಗಾದಲ್ಲಿ ೧೦೦ ಕೆಲಸದ ದಿವಸಗಳಿತ್ತು. ವಿಬಿ-ಜಿ-ರಾಮ್-ಜಿಯಲ್ಲಿ ಕೆಲಸದ ದಿನ ೧೨೫ ದಿನಗಳಿಗೆ ಏರಿಸಲಾಗಿದೆ. ನರೇಗಾದಲ್ಲಿ ಯೋಜನೆ ಕಾಮಗಾರಿ ಬೇಡಿಕೆ ಆಧಾರದಲ್ಲಿತ್ತು. ವಿಜಿ.ರಾಮ್. ಜಿ.ಯಲ್ಲಿ ಕಾಮಗಾರಿ ಟಾರ್ಗೆಟ್ ಆಧಾರದ ಮೇಲೆ ನಡೆಯಲಿದೆ.ನರೇಗಾದಲ್ಲಿ ಟಾರ್ಗೆಟ್ ಇಲ್ಲದ ಕಾರಣ ಅಧಿಕಾರಿಗಳ ಮೇಲೆ ಶಿಸ್ತು ಕ್ರಮವಿಲ್ಲವಾಗಿತ್ತು. ವಿಜಿ.ರಾಮ್.ಜಿ. ಯೋಜನೆಯಲ್ಲಿ ಟಾರ್ಗೆಟ್ ಇರುವುದರಿಂದ ಗುರಿ ಸಾಧಿಸದ ಅಧಿಕಾರಿ ಮೇಲೆ ಕ್ರಮ ಜರುಗಿಸಲು ಅವಕಾಶವಿದೆ. ನರೇಗಾದಲ್ಲಿ ಕೂಲಿ ಮತ್ತು ಸಾಮಾಗ್ರಿ ವೆಚ್ಚದ ಪಾವತಿಯಲ್ಲಿ ಸಮಸ್ಯೆಯಿತ್ತು. ಹೊಸ ಯೋಜನೆಯಲ್ಲಿ ಇರುವುದರಿಂದ ಪಾವತಿ ಸಮಸ್ಯೆಗೆ ತೆರೆ ಎಳೆಯಲಾಗುವುದು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ವಕ್ತಾರ ಮಹೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎನ್. ನಿರಂಜನ್‌ಕುಮಾರ್, ಜೆಡಿಎಸ್ ಶಾಸಕ ಎಂ.ಆರ್.ಮಂಜುನಾಥ್, ಮಾಜಿ ಸಚಿವ ಎನ್. ಮಹೇಶ್, ಮಾಜಿ ವಿಧಾನ ಪರಿಷತ್ ಸದಸ್ಯ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಮಾಜಿ ಶಾಸಕ ಎಸ್. ಬಾಲರಾಜು, ಕೇಂದ್ರ ಬರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ, ಪ್ರದಾನ ಕಾರ್ಯದರ್ಶಿ ಮೂಡ್ನಕೂಡು ಪ್ರಕಾಶ್ ಇತರರು ಇದ್ದರು.ವಿ. ಸೋಮಣ್ಣ ಮಾತನಾಡಿ, ವಿಜಿ.ರಾಮ್. ಜಿ. ಯೋಜನೆಯಲ್ಲಿ ಗ್ರಾಮ ಪಂಚಾಯತಿಗಳೆ ಕೇಂದ್ರ ಬಿಂದುಗಳಾಗಿವೆ. ಪಂಚಾಯಿತಿಗಳನ್ನು ವಿಕಸಿತ ಗ್ರಾಮ ಪಂಚಾಯಿತಗಳನ್ನಾಗಿಸಲು ಸಹಕಾರಿ. ನರೇಗಾದಲ್ಲಿ ಇದ್ದ ಏ ಕೇಂದ್ರಿಕೃತ ಪದ್ದತಿ ಜಿ.ರಾಮ.ಜಿ. ಯೋಜನೆಯಲ್ಲಿ ಸಂಘಟಿತ / ಕೇಂದ್ರಿಕೃತ ಪ್ರಕ್ರಿಯೆಯಾಗಿ ರೂಪುಗೊಂಡಿದೆ. ಜಿ.ರಾಮ್. ಜಿ. ಯೋಜನೆಯಲ್ಲಿ ಪಂಚಾಯತಿ ಯೋಜನೆಗಳನ್ನು ಬ್ಲಾಕ್, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಂಯೋಜಿಸಲು ಅವಕಾಶ ಮಾಡಿಕೊಡಲಾಗಿದೆ ಎಂದರು. ವಿಜಿ.ರಾಮ.ಜಿ. ಯೋಜನೆಯನ್ನು ಪ್ರಧಾನ ಮಂತ್ರಿ ಗತಿಶಕ್ತಿ ಯೋಜನೆಯೊಂದಿಗೆ ಹೊಂದಾಣಿಕ ಮಾಡುವ ಒಂದು ಹೊಸ ಕಲ್ಪನೆಯನ್ನು ಹೊಂದಲಾಗಿದೆ. ಇದರಿಂದ ಕಾಮಗಾರಿ ತ್ವರಿತವಾಗಿ ಅನುಷ್ಠಾನಗೊಳಿಸಲು ಸಹಕಾರಿ, ಗ್ರಾಮೀಣ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಸುಳ್ಳು ಸುದ್ದಿಯನ್ನು ಹರಡಲಾಗುತ್ತಿದೆ. ಜಿ.ರಾಮ. ಜಿ. ಯೋಜನೆಯಲ್ಲಿ ೧೨೫ ದಿವಸಗಳ ಉದ್ಯೋಗ ಖಾತ್ರಿ ಇರುವುದರಿಂದ ಗ್ರಾಮೀಣ ಭಾಗದ ಜನರು ವಲಸೆ ಹೋಗುವುದನ್ನು ತಡೆಗಟ್ಟ ಬಹುದಾಗಿದೆ. ಜಿ.ರಾಮ್. ಜಿ. ಯೋಜನೆಯಲ್ಲಿ ಕೂಲಿ ಪಾವತಿಯನ್ನು ವಾರಕ್ಕೆ ಒಮ್ಮೆ ಅಥವಾ ಗರಿಷ್ಠ ೧೪ ದಿವಸಗಳ ಒಳಗೆ ಕಡ್ಡಾಯವಾಗಿ ಪಾವತಿಸಲು ಅವಕಾಶ ಮಾಡಲಾಗಿದೆ. ಈ ಮೊದಲು ಕಾಮಗಾರಿಗಳನ್ನು ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿದೆಯೇ ಇಲ್ಲವೇ ಎಂದು ಪರಿಗಣಿಸದೇ ಕಾಮಗಾರಿಗಳನ್ನು ನಡೆಸಲಾಗುತ್ತಿತ್ತು. ಇದರಿಂದ ಕಾಮಗಾರಿ ವಿಳಂಬವಾಗುತ್ತಿತ್ತು. ವಿಜಿ.ರಾಮ್. ಜಿ. ಯೋಜನೆಯಡಿ "ಏಕಸಿತ ಗ್ರಾಮ ಪಂಚಾಯತಿ ಯೋಜನೆ " ಎಂದು ತಯಾರಿಸಿ ಕಾಮಗಾರಿಗಳನ್ನು ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಒಗ್ಗೂಡಿಸಲಾಗುವುದು. ಸೇರಿಸುವದರಿಂದ ಕಾಮಗಾರಿಗಳು ನಕಲು ಆಗುವುದನ್ನು ತಡೆಯುವುದು ಮತ್ತು ಭ್ರಷ್ಟಾಚಾರ ನಿಯಂತ್ರಣ. ಸಮುದಾಯ ಆಧಾರಿತ ಕಾಮಗಾರಿಗಳಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಆಡಳಿತಾತ್ಮಕ ವೆಚ್ಚದ ಮಿತಿಯನ್ನು ಈ ಮೊದಲು ಇದ್ದ ಶೇ.೬ ನಿಂದ ಶೇ.೯ಕ್ಕೆ ಏರಿಸಲಾಗಿದೆ. ಈ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಸಮಯಕ್ಕೆ ಸರಿಯಾಗಿ ಪಾವತಿಯಾಗಲಿದೆ. ಪ್ರತಿ ಮನೆಯ ಸರಾಸರಿ ಕೂಲಿ ದಿನಗಳು ೨೦೧೪ರಲ್ಲಿ ೪೫.೯ ದಿನಗಳು ಇದ್ದರೆ, ಈಗ ೫೦.೪ ದಿನಗಳಾಗಿದೆ. ವಿಕಸಿತ ಭಾರತ್ ವಿಬಿ ಜಿ ರಾಮ್ ಜಿ ಕಾಯ್ದೆಯ ದೃಷ್ಟಿಕೋನಗಳು ಹತ್ತಾರು ಜನಪರ ಕಲ್ಯಾಣವನ್ನು ಹೊಂದಿದೆ. ಈ ನಿಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರ ಇದಕ್ಕೆ ಇನ್ನಷ್ಟು ಬಲ ತುಂಬಿದೆಯೆಂದು ತಿಳಿಸಿದರು. ವರ್ಧಿತ ಜೀವನೋಪಾಯದ ಭದ್ರತೆ ಖಚಿತಪಡಿಸುವುದು, ಬಾಳಿಕೆ ಬರುವ ಮತ್ತು ಉತ್ತಮ ಗುಣಮಟ್ಟದ ಗ್ರಾಮೀಣ ಸ್ವತ್ತುಗಳ ರಚನೆ, ತಂತ್ರಜ್ಞಾನ ಆಧಾರಿತ ಪಾರದರ್ಶಕತೆ ರಚನೆ, ಭ್ರಷ್ಟಾಚಾರ ನಿರ್ಮೂಲನೆ, ಸಹಕಾರಿ ಒಕ್ಕೂಟದ ವ್ಯವಸ್ಥೆ ಬಲಪಡಿಸುವುದು, ರಾಷ್ಟ್ರೀಯ ಮೂಲಸೌಕರ್ಯ ಆದ್ಯತೆಗಳೊಂದಿಗೆ ಗ್ರಾಮ ಮಟ್ಟದಯೋಜನೆ ಸಂಯೋಜಿಸುವುದು. ಗ್ರಾಮೀಣ ಉದ್ಯೋಗ ನೀತಿಯನ್ನು ವಿಕಸಿತ ಭಾರತ್ ೨೦೪೭ ಮಾರ್ಗ ಸೂಚಿಯೊಂದಿಗೆ ಜೋಡಿಸುವುದು, ವಿಸ್ತ್ರತ ಉದ್ಯೋಗ ಖಾತ್ರಿ, ಕೃಷಿ-ಸೂಕ್ಷ್ಮ ಉದ್ಯೋಗ ವೇಳಾಪಟ್ಟಿ, ಭಿತ್ತನೆ ಮತ್ತು ಕೊಯ್ಲಿನ ಕೃಷಿ ಚಟುವಟಿಕೆಯಲ್ಲಿ ೬೦ ದಿನಗಳ ವಿರಾಮ ಘೋಷಿಸಲು ರಾಜ್ಯಗಳಿಗೆ ಅಧಿಕಾರ, ಜಲ ಸಂಭಂದಿತ ಕಾಮಗಾರಿಗಳು, ವಿ.ಬಿ. ಗ್ರಾಮ್ ಜಿ. ತಂತ್ರಜ್ಞಾನ, ಜಿಯೋ ರೇಪರೆನ್ಸಿಂಗ್, ಉಪಗ್ರಹ ಚಿತ್ರಣ ದೃಡೀಕರಣ. ಬಯೋ ಮೆಟ್ರಿಕ್, ಕಾಲಮೀತಿ ಪಾವತಿ, ವೇತನದ ಖಾತ್ರಿ ವಿಶ್ವಾಸಾರ್ಹತೆ, ಹಣಕಾಸಿನ ಶಿಸ್ತು, ಕೇಂದ್ರ - ರಾಜ್ಯಕ್ಕೆ ಹಂಚಿಕೆ ಆಧಾರ (ಶೇ.೬೦ ಶೇ.೪೦), ಆಡಳಿತ ಪಾರದರ್ಶಕತೆ, ಬಹು ಹಂತಗಳ ಮೇಲ್ವಿಚಾರಣೆ - ಇತ್ಯಾದಿ ಅನುಕೂಲತೆಯ ಬಗ್ಗೆ ಕೇಂದ್ರ ಸಚಿವ ವಿ. ಸೋಮಣ್ಣ ವಿವರಿಸಿದರು
ಚಾಮರಾಜನಗರ: ಭ್ರಷ್ಟಾಚಾರ ಕಡಿವಾಣ ಹಾಕುವ ವಿಬಿ ಜಿ ರಾಮ್ ಜಿ. ಕಾಯ್ದೆ ವಿರೋಧ ಪಕ್ಷದವರಿಗೆ ತಲೆನೋವಾಗಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ವಿಪಕ್ಷಗಳ ವಿರುದ್ದ ಚಾಟಿ ಬೀಸಿದರು.ರಾಜ್ಯದಲ್ಲಿ ೨೫ ಯೋಜನೆಗಳು ರಾಜೀವ್ ಗಾಂಧಿ, ಇಂದಿರಾ ಗಾಂಧಿ ಹೆಸರಲ್ಲಿವೆ. ಶೈಕ್ಷಣಿಕ ಸಂಸ್ಥೆಗಳು ೫೫ ಕ್ಕೆ ರಾಜೀವ್ ಗಾಂಧಿ, ೨೧ ಸಂಸ್ಥೆಗೆ ಇಂದಿರಾ ಗಾಂಧಿ ಮತ್ತು ೨೨ ಸಂಸ್ಥೆಗಳಿಗೆ ನೆಹರು ಹೆಸರಿವೆ. ಪ್ರತಿಯೊಂದು ಕಾರ್ಯಕ್ರಮದಲ್ಲೂ ರಾಜೀವ್, ಇಂದಿರಾ ಗಾಂಧಿ ಹೆಸರಿಟ್ಟುಕೊಂಡು ಜನರಿಗೆ ಮೋಸ ಮಾಡಿ ನಿಜವಾದ ಗಾಂಧಿಯನ್ನು ಕಾಂಗ್ರೆಸ್ಸಿಗರು ಮರೆತಿದ್ದಾರೆ ಎಂದು ಕೇಂದ್ರ ಸಚಿವ, ವಿ. ಸೋಮಣ್ಣ. ಕೇಂದ್ರ ಸರ್ಕಾರದ ಯೋಜನೆಗಳನ್ನು ಸರಿಯಾಗಿ ಅನುಷ್ಠಾನ ಮಾಡಬೇಕೆಂದು ರಾಜ್ಯಸರ್ಕಾರಕ್ಕೆ ಸಲಹೆ ನೀಡಿದರು.