ವಿಬಿಸಿಎಲ್‌: 66ನೇ ಕಾಲೇಜು ದಿನ, ಸಂಸ್ಥಾಪಕರ ದಿನ

KannadaprabhaNewsNetwork |  
Published : May 28, 2025, 12:13 AM IST
27ವಿಬಿಸಿಎಲ್ | Kannada Prabha

ಸಾರಾಂಶ

ಉಡುಪಿ ನಗರದ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ೬೬ ನೇ ಕಾಲೇಜು ದಿನ ಹಾಗೂ ಸಂಸ್ಥಾಪಕರ ದಿನ ಆಚರಣೆ ಇತ್ತೀಚೆಗೆ ನೆರವೇರಿತು.

ಕನ್ನಡಪ್ರಭ ವಾರ್ತೆ ಉಡುಪಿ

ವಿದ್ಯಾರ್ಥಿಗಳ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಆಳವಡಿಸಿಕೊಳ್ಳಬೇಕು ಹಾಗೂ ಸಮಾಜದಲ್ಲಿರುವ ಅಸಮಾನತೆಯ ವಿರುದ್ಧ ಹೋರಾಡಿ ಸಂವಿಧಾನದ ಆಶಯಗಳಿಗೆ ತಕ್ಕಂತೆ ಸಮಾಜದ ದುರ್ಬಲ ವರ್ಗಗಳಿಗೆ ನ್ಯಾಯ ದೊರಕಿಸಿಕೊಡುವ ಜವಾಬ್ದಾರಿ ಕಾನೂನು ವಿದ್ಯಾರ್ಥಿಗಳ ಮೇಲೆ ಇದೆ ಎಂದು ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿ ಡಾ. ಬಸವರಾಜು ಸಿ. ಹೇಳಿದರು.ಅವರು ನಗರದ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ೬೬ ನೇ ಕಾಲೇಜು ದಿನ ಹಾಗೂ ಸಂಸ್ಥಾಪಕರ ದಿನ ಆಚರಣೆಯ ಮುಖ್ಯ ಅತಿಥಿಗಳಾಗಿ ಮಾತನಾಡುತಿದ್ದರು. ವಿದ್ಯಾರ್ಥಿಗಳು ಶ್ರಮಪಟ್ಟು ಓದಬೇಕು ಹಾಗೂ ಜೀವನದಲ್ಲಿ ಭ್ರಷ್ಟಾಚಾರದಂತಹ ಪಿಡುಗಿನ ವಿರುದ್ಧ ಹೋರಾಡಬೇಕೆಂದು ಕರೆ ನೀಡಿದರು.ಮಣಿಪಾಲದ ಮಾಹೆಯ ಕುಲಸಚಿವ ಡಾ. ಪಿ. ಗಿರಿಧರ್ ಕಿಣಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಬಹಳ ಮುಖ್ಯವಾಗಿದೆ ಹಾಗೂ ವೃತ್ತ್ತಿಯಲ್ಲಿನ ಯಶಸ್ಸಿಗೆ ಶಿಸ್ತು ಬಹಳ ಮುಖ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಳೆದ ಶೈಕ್ಷಣಿಕ ವರ್ಷದ ೩ ವರ್ಷದ ಎಲ್.ಎಲ್.ಬಿ ಪದವಿಯಲ್ಲಿ ಅತೀಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿ ರಮ್ಯ ಅವರಿಗೆ 2 ಚಿನ್ನದ ಪದಕಗಳೊಂದಿಗೆ ೧೨ ದತ್ತಿ ಬಹುಮಾನ, ಪಲ್ಲವಿ ಅವರಿಗೆ ಒಂದು ಚಿನ್ನದ ಪದಕ ಮತ್ತು ೫ ದತ್ತಿ ಬಹುಮಾನ, ೫ ವರ್ಷದ ಬಿ.ಎ ಎಲ್.ಎಲ್.ಬಿ. ಪದವಿಯಲ್ಲಿ ಅತೀಹೆಚ್ಚು ಅಂಕಗಳಿಸಿದ್ದ ಮರಿಯಾ ಥೆರೆಸಾ ಒಂದು ಚಿನ್ನದ ಪದಕ ಹಾಗೂ ೪ ದತ್ತಿ ಬಹುಮಾನಗಳನ್ನು ನೀಡಲಾಯಿತು. ಅಲ್ಲದೆ ವಿವಿಧ ವಿಷಯಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ೨೯ ವಿದ್ಯಾರ್ಥಿ ವಿದ್ಯಾರ್ಥಿನಿಯರು ದತ್ತಿ ಬಹುಮಾನಗಳನ್ನು ಪಡೆದರು.ಕಾಲೇಜಿನ ಇಂಟರ್ನ್ಯಾಷನಲ್ ಜರ್ನಲ್ ಹಾಗೂ ನ್ಯೂಸ್ ಲೆಟರ್‌ನ್ನು ಅತಿಥಿಗಳು ಬಿಡುಗಡೆ ಮಾಡಿದರು. ಕಾಲೇಜಿನ ನಿದೇಶಕ ಡಾ. ನಿರ್ಮಲ ಕುಮಾರಿ ಕೆ. ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ರಘುನಾಥ್ ಕೆ.ಎಸ್. ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಸುರೇಖಾ ಕೆ. ಅತಿಥಿಗಳನ್ನು ಸ್ವಾಗತಿಸಿದರು ಡಾ. ನವೀನಚಂದ್ರ ಸಿ.ಬಿ. ಹಾಗೂ ಚೈತ್ರ ಕುಮಾರಿ ಅತಿಥಿಗಳನ್ನು ಪರಿಚಯಿಸಿದರು, ಈರಪ್ಪ ಎಸ್, ಮೇದಾರ್ ವಂದಿಸಿದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ