ಮಾನದಂಡಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ವಿಡಿಐಟಿಯ ಕಾರ್ಯವನ್ನು ಶ್ಲಾಘಿಸಿದರು.
ಹಳಿಯಾಳ: ವಿಶ್ವ ಗುಣಮಟ್ಟ ದಿನದ ಅಂಗವಾಗಿ ಪಟ್ಟಣದ ಕೆಎಲ್ಎಸ್ ಸಂಸ್ಥೆಯ ವಿಡಿಐಟಿ ಮಹಾವಿದ್ಯಾಲಯವು ಭಾರತೀಯ ಮಾನಕ ಬ್ಯುರೋ ಹುಬ್ಬಳ್ಳಿ ಶಾಖೆಯ ಸಹಯೋಗದಲ್ಲಿ ಬುಧವಾರ ಜಾಗೃತಿ ವಾಕಥಾನ್ ಆಯೋಜಿಸಿತ್ತು.
ಪಟ್ಟಣದ ಶಿವಾಜಿ ಸರ್ಕಲ್ನಿಂದ ಆರಂಭಗೊಂಡ ವಾಕಥಾನ್ ದೇಶಪಾಂಡೆ ರಸ್ತೆ ಮೂಲಕ ಸಾಗಿತು. 50ಕ್ಕೂ ಅಧಿಕ ವಿದ್ಯಾರ್ಥಿಗಳು ಭಾರತೀಯ ಮಾನಕ ಬ್ಯುರೋ ಮಾನದಂಡಗಳ ಕುರಿತು ಘೋಷಣೆ ಕೂಗುತ್ತ ಜನರಲ್ಲಿ ಅರಿವು ಮೂಡಿಸಿದರು. ಎಲ್ಲ ವಿಭಾಗಗಳ ಡೀನ್ಗಳು ಮತ್ತು ವಿಭಾಗ ಮುಖ್ಯಸ್ಥರು ಭಾಗವಹಿಸಿದ್ದರು. ಹಳಿಯಾಳ ಸಿಪಿಐ ಭೀಮಣ್ಣ ಸೂರಿ ಅವರು, ಮಾನದಂಡಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ವಿಡಿಐಟಿಯ ಕಾರ್ಯವನ್ನು ಶ್ಲಾಘಿಸಿದರು. ಪಿಎಸ್ಐ ಕೃಷ್ಣ ಕಾಂಬ್ಳೆ ಉಪಸ್ಥಿತರಿದ್ದರು.
ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ ಮಾತನಾಡಿ, ದಿನನಿತ್ಯ ಬಳಕೆಯ ವಸ್ತುಗಳ ಮೇಲೆ ಇರುವ ಐಎಸ್ಐ ಗುರುತು ಮತ್ತು ಅದರ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಹೇಳಿದರು. ಡೀನ್ ಅಡ್ಮಿನ್ ಡಾ. ಶಂಕರ ಬಡಿಗೇರ ಕಾರ್ಯಕ್ರಮ ಸಂಯೋಜಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.