ನರಗುಂದ: ನಮ್ಮ ಸಮಾಜದಲ್ಲಿ ವೈದ್ಯರು ಜನರಿಗಾಗಿ ಮಾಡುವ ಸೇವೆ ದೊಡ್ಡದು, ನಾವು ಅವರನ್ನು ಗೌರವಿಸುವ ಕಾರ್ಯ ವನ್ನು ಮಾಡಬೇಕೆಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ಎಸ್. ಪಾಟೀಲ ಹೇಳಿದರು. ಅವರು ಪಟ್ಟಣದ ಪಿಕಾರ್ಡ್ ಬ್ಯಾಂಕನಲ್ಲಿ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಚಾನೆಲ್‌ನಿಂದ ಎಕ್ಸಲೆನ್ಸ್ ಆವಾರ್ಡ ಪಡೆದ ಡಾ. ಜಿ.ಎಸ್. ನುಗ್ಗಾನಟ್ಟಿವರನ್ನು ಸನ್ಮಾನಿಸಿ ಆನಂತರ ಮಾತನಾಡಿ, ತಾಲೂಕಿನ ಕಣಿಕಿಕೊಪ್ಪ ಗ್ರಾಮದ ಬಡ ರೈತ ಕುಟುಂಬದಲ್ಲಿ ಡಾ. ನುಗ್ಗಾನಟ್ಟಿಯವರು ಹುಟ್ಟಿ ಹಲವಾರು ಸವಾಲುಗಳನ್ನು ಎದುರಿಸಿ ವೈದಕೀಯ ಶಿಕ್ಷಣ ಕಲಿತು ಮುಂದೆ ವೈದ್ಯರಾಗಿ ನರಗುಂದದ ಪಟ್ಟಣದಲ್ಲಿ ಆಸ್ಪತ್ರೆ ಪ್ರಾರಂಭಿಸಿ ನೂರಾರು ಜನರಿಗೆ ಚಿಕಿತ್ಸೆ ನೀಡಿದ್ದಾರೆ. ಇದರ ಜೊತೆಗೆ ತಾಲೂಕಿನ ಭೈರನಹಟ್ಟಿ, ಮುದ್ಗಣಿಕಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಮೇಲಾಗಿ ಡಾ. ನುಗ್ಗಾನಟ್ಕಿಯವರು ಶಾಲಾ ಕಾಲೇಜಿನ ದಿನಗಳಲ್ಲಿ ಕ್ರೀಡೆಗಳಾದ ಕೋಂ ಕೋ, ವಾಲಿಬಾಲ್, ಯೋಗದಲ್ಲಿ ಸಾಧನೆ ಮಾಡಿದ ಇವರನ್ನು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಚಾನೆಲ್‌ನವರು ಗುರುತಿಸಿ ಎಕ್ಸಲೆನ್ಸ್ ಆವಾರ್ಡ ನೀಡಿದ್ದು ನಮ್ಮ ತಾಲೂಕಿನ ಜನತೆಗೆ ಹೆಮ್ಮೆ ತಂದಿದೆ ಎಂದು ಹೇಳಿದರು.