ಚಿಂಚೋಳಿ: ತಾಲೂಕಿನ ಚಿಮ್ಮಾಇದಲಾಯಿ ಗ್ರಾಮದ ಪ್ರಸಿದ್ದ ವೀರಭದ್ರೇಶ್ವರ ದೇವಾಲಯ ಜಾತ್ರೆಯ ರಥೋತ್ಸವ ಭಾನುವಾರ ಸಾವಿರಾರು ಭಕ್ತರ ಸಡಗರ ಸಂಭ್ರಮದ ಜಯಘೋಷದೊಂದಿಗೆ ಅದ್ಧೂರಿಯಾಗಿ ಜರುಗಿತು.
ತೇರಿನ ಮೇಲೆ ಭಕ್ತರು ಹೂವು, ಉತ್ತತ್ತಿ, ಬಾಳೆಹಣ್ಣು, ನಾರಿನ ಉಂಡೆ, ಬೆಂಡು ಬತಾಸು ಎಸೆದು ತಮ್ಮ ಭಕ್ತಿಯ ಹರಕೆ ಅರ್ಪಿಸಿದರು. ರಥೋತ್ಸವಕ್ಕೆ ಪೂಜ್ಯ ವಿಜಯ ಮಹಾಂತೇಶ್ವರ ಶಿವಾಚಾರ್ಯರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.ಗ್ರಾಮದ ಮುಖಂಡರಾದ ಶಿವಶರಣಪ್ಪ ದೇಸಾಯಿ, ಶಿವರಾಜ ದೇಸಾಯಿ, ಶಿವರಾಜ ಮಾಲಿಪಾಟೀಲ, ಶಿವಶರಣಪ್ಪ ಡೆಂಗಿ, ರಾಜಕುಮಾರ ಕಮಲ ಸೋಲಾರ, ಮಲ್ಲಿಕಾರ್ಜುನ ದಳಪತಿ, ಮಲ್ಲಿಕಾರ್ಜುನ ಕೊಟಪಳ್ಳಿ, ಶ್ರೀನಿವಾಸ ಚಿಂಚೋಳಿಕರ, ಮೊಗಲಪ್ಪ ದಾಸ, ಅಮೃತಪ್ಪ, ಗುಂಡಪ್ಪ ಅವರಾದಿ, ಶಿವಯೋಗಿ ರುಸ್ತಂಪೂರ, ಬಂಡೆಪ್ಪ ಹೊಳ್ಕರ, ಚೆನ್ನಪ್ಪ ನಿರಾಳಕರ, ಉಮೇಶ ಧೂಳಪ್ಪನೋರ, ಮಡೆಯ್ಯ ಸ್ವಾಮಿ, ಶಿವಕುಮಾರ ರಾಮಗೊಂಡ ಇನ್ನಿತರಿದ್ದರು.