ರಾಣಿಬೆನ್ನೂರು: ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಯಕಲಾಸಪುರದ ಜನನಿ ಜಾನಪದ ಕಲಾ ವೇದಿಕೆ ಹಾಗೂ ಶ್ರೀ ವೀರಮಹೇಶ್ವರ ಜಾತ್ರಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಜಾನಪದ ಸಂಗೀತ ಹಾಗೂ ಜೋಗತಿ ಮತ್ತು ಹಲವು ಬಗೆ ನೃತ್ಯ ರೂಪಕಗಳನ್ನು ಪ್ರದರ್ಶಿಸಲಾಯಿತು.
ಕಲಾವಿದ ಗುರುನಾಥ ಹುಬ್ಬಳ್ಳಿ, ಶಿವಕುಮಾರ ಜಾಧವ್. ನೀನಾಸಂ ಇಸ್ಮಾಯಿಲ್ ಐರಣಿ, ಶಿವಾನಂದ ಕಳ್ಳಿಮನಿ, ಉದಯರಾಜ್ ಕೊಳಜಿ, ರಾಜು ಸೂರ್ವೆ, ಮಣಿಕಂಠ ಬಣಕಾರ, ಗಂಗಮ್ಮ ಮೋಟೆಬೆನ್ನೂರು, ವಿಜಯಕುಮಾರ ಬಣಕಾರ, ರೇಣುಕಾ ಮರಾಠೆ, ಚಂದ್ರಪ್ಪ ದೊಡ್ಡಮನಿ, ರವೀಂದ್ರ ನಲವಾಗಲ, ಗುಡ್ಡರಾಜ್ ಹಲಗೇರಿ, ಮೃತ್ಯುಂಜಯ ಅಂಗಡಿ, ದೇವಸ್ಥಾನ ಹಾಗೂ ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.