ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದಲ್ಲಿ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತ್ಯುತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ
ಮಾತನಾಡಿ, ನಮ್ಮ ಸಮಾಜ, ನಮ್ಮ ಒಕ್ಕಲು ಧಾರುಣೀಕರಣದಲ್ಲಿದ್ದೇವೆ. ಎಲ್ಲ ಸಮಾಜದವರನ್ನು ಒಂದೇ ಎನ್ನುವ ರೀತಿಯಲ್ಲಿ ಕಾಣುತ್ತೇವೆ ಎಂದರು.ಪರಸ್ಪರ ಸಹಕಾರದ ಮನೋಭಾವನೆಯಿಂದ ನಮ್ಮ ಸಮಾಜದಲ್ಲಿ ನೊಂದಿರುವವರಿಗೆ ನೆರವು ನೀಡುವ ಕಾಯಕ ಮಾಡಬೇಕು. ಸರ್ಕಾರದ ಉಚಿತ ಯೋಜನೆಗಳನ್ನು ಬೇಡ. ಎಲ್ಲರೂ ಸ್ವಯಂ ದುಡಿದು ಜೀವನ ಮಾಡುತ್ತೇವೆ ಎನ್ನುವ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.
ಮಾಜಿ ಶಾಸಕಿ ನಾಗಮಣಿ ನಾಗೇಗೌಡ ಮಾತನಾಡಿ, ಮಳವಳ್ಳಿಯ ಜನರ ಮನಸ್ಸು ತುಂಬಾ ಒಳ್ಳೆಯದು ಎನ್ನುವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ. ಸುತ್ತೂರು ಮಠದ ಸೇವೆಯನ್ನು ನೆನೆಯುವ ಅವಕಾಶ ನಿಮಗೆ ನಮಗೆ ಸಿಕ್ಕಿರುವುದೇ ಧನ್ಯ. ರಾಜ್ಯ ಮಟ್ಟದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವು ನಮ್ಮಲ್ಲಿ ಅದ್ದೂರಿಯಾಗಿ ಆಯೋಜನೆಯಾಗಿದೆ ಎಂದು ಬಣ್ಣಿಸಿದರು.ಇದೇ ವೇಳೆ ವಿವಿಧ ಶಾಲೆಗಳ ಮಕ್ಕಳು ನೃತ್ಯ ಪ್ರದರ್ಶನ ನೀಡಿದರು. ಮೈಸೂರಿನ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜ್, ಜಿಲ್ಲಾ ಬಿಜೆಪಿ ಮುಖಂಡರಾದ ಎಸ್.ಸಚ್ಚಿದಾನಂದ, ಡಾ.ಎನ್.ಎಸ್.ಇಂದ್ರೇಶ್, ಲಕ್ಷ್ಮಿಅಶ್ವಿನ್ ಗೌಡ, ಸಂಗಮೇಶ್, ಅಶೋಕ್ ಜಯರಾಮು, ಸ್ವಾಮಿ, ಪಾಲ್ಗೊಂಡಿದ್ದರು.