-ವಧು-ವರರ ಬೃಹತ್ ಸಮಾವೇಶ ಉದ್ಘಾಟಿಸಿದ ಮಹೇಶರೆಡ್ಡಿ ಮುದ್ನಾಳ್
ಕನ್ನಡಪ್ರಭ ವಾರ್ತೆ ಯಾದಗಿರಿ
ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಬಹುಮುಖ್ಯ ಹಂತವಾಗಿದೆ. ಉತ್ತಮ ಸಂಗಾತಿಗಳ ಆಯ್ಕೆ ಪ್ರತಿಯೊಬ್ಬರ ಆಕಾಂಕ್ಷೆಯಾಗಿರುತ್ತದೆ. ವಧು-ವರರ ವೇದಿಕೆ ಆಯೋಜನೆ ಮುಖಾಂತರ ಸಂಗಾತಿಗಳ ಆಯ್ಕೆ ಸುಲಭವಾಗುವುದು ಎಂದು ಬಿಜೆಪಿ ಯುವ ಮುಖಂಡ ಮಹೇಶರೆಡ್ಡಿ ಮುದ್ನಾಳ್ ಹೇಳಿದರು.ಯಾದಗಿರಿ ನಗರದ ಲಕ್ಷ್ಮೀ ದೇವಸ್ಥಾನದಲ್ಲಿ ರಾಮನವಮಿ ಪ್ರಯುಕ್ತ ವೀರಶೈವ ಲಿಂಗಾಯತ, ರಡ್ಡಿ, ವೀರಮಹೇಶ್ವರ ಸ್ವಾಮಿ ಹಾಗೂ ಉಪ ಪಂಗಡಗಳ ವಧು-ವರರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ದಾಸಬಾಳ ಮಠದ ಶ್ರೀ ವೀರೇಶ್ವರ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ವೀರಶೈವ ಲಿಂಗಾಯತ ಸಮಾಜದ ಉಪ ಪಂಗಡಗಳನ್ನು ಒಳಗೊಂಡ ವಧು-ವರರ ಸಮಾವೇಶ ಏರ್ಪಡಿಸಿದ್ದು ಸಮಾಜ ಬಾಂಧವರ ವೈವಾಹಿಕ ಸಂಬಂಧಗಳನ್ನು ಬೆಳೆಸಲು ಅತ್ಯಂತ ಅನುಕೂಲಕರವಾಗಿದೆ ಎಂದರು.
ವಧು-ವರರ ಸಮಾವೇಶಕ್ಕೆ ಬೆಂಗಳೂರು, ಧಾರವಾಡ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಜಿಲ್ಲೆ ಸೇರಿದಂತೆ ನೆರೆಯ ಆಂಧ್ರ ತೆಲಂಗಾಣದಿಂದ ಹೈದ್ರಾಬಾದ್, ಮಹೇಬೂಬ ನಗರದಿಂದ ವೀರಶೈವ ಲಿಂಗಾಯತ ಉಪ ಪಂಗಡಗಳ ನೂರಾರು ವಧುವರರ ಪೋಷಕರು, ಸಂಬಂಧಿಕರು ಆಗಮಿಸಿದ್ದರು. ಈ ವೇಳೆ ಪರಸ್ಪರ ವಧು-ವರರ ಮಾಹಿತಿಯನ್ನು ವಿನಿಮಯ ಮಾಡಿಕೊಂಡರು.
ಯಾದಗಿರಿ ನಗರದ ಲಕ್ಷ್ಮೀ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ವೀರಶೈವ ಲಿಂಗಾಯತ, ರಡ್ಡಿ, ವೀರಮಹೇಶ್ವರ ಸ್ವಾಮಿ ಹಾಗೂ ಉಪ ಪಂಗಡಗಳ ವಧು-ವರರ ಬೃಹತ್ ಸಮಾವೇಶವನ್ನು ಬಿಜೆಪಿ ಯುವ ಮುಖಂಡ ಮಹೇಶರೆಡ್ಡಿ ಮುದ್ನಾಳ್ ಉದ್ಘಾಟಿಸಿದರು.7ವೈಡಿಆರ್13