ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ: ಚಾನಾಳ್ ಶೇಖರ್ ತಂಡ ಬೆಂಬಲಿಸಲು ನಿರ್ಧಾರ

KannadaprabhaNewsNetwork | Published : Jun 23, 2024 2:04 AM

ಸಾರಾಂಶ

ಮೂರು ವರ್ಷದ ಅವಧಿಯಲ್ಲಿ ಅನೇಕ ಸಮಾಜಮುಖಿ ಕೆಲಸ ನಡೆದಿವೆ.

ಬಳ್ಳಾರಿ: ಇಲ್ಲಿನ ಕೊಟ್ಟೂರು ಸ್ವಾಮಿ ಮಠದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಯಿತು.ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿ ಪೂರ್ವಭಾವಿ ಸಭೆಗೆ ಚಾಲನೆ ನೀಡಿದರು. ಮಹಾಸಭೆಯ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ ರೆಡ್ಡಿ ಮಾತನಾಡಿ, ಮಹಾಸಭಾದ ಬೆಳವಣಿಗೆಗೆ ಶ್ರಮಿಸುತ್ತಿರುವ ಚಾನಾಳ್ ಶೇಖರ್ ಹಾಗೂ ಅವರ ತಂಡವನ್ನು ಪ್ರೋತ್ಸಾಹಿಸಬೇಕು. ಸಮಾಜವನ್ನು ಕಟ್ಟುವ ಕೆಲಸದಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದರು.

ಪ್ರಾಸ್ತಾವಿಕ ಮಾತನಾಡಿದ ಮಹಾಸಭಾದ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್, ಮಹಾಸಭಾದಿಂದ ಕಳೆದ 20 ವರ್ಷಗಳಿಂದ ಯಾವುದೇ ಕೆಲಸ ಆಗಿರಲಿಲ್ಲ. ಆದರೆ, ಮೂರು ವರ್ಷದ ಅವಧಿಯಲ್ಲಿ ಅನೇಕ ಸಮಾಜಮುಖಿ ಕೆಲಸ ನಡೆದಿವೆ. ಸಭಾದ ಸದಸ್ಯತ್ವ ಹೆಚ್ಚಳ, 2021ರಲ್ಲಿ ಬಸವ ಭವನದಲ್ಲಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆ ನಡೆಸಿ ಹಾನಗಲ್ಲು ಕುಮಾರೇಶ್ವರ ಜಯಂತ್ಯುತ್ಸವ, ಬಸವ ಜಯಂತಿ ಅರ್ಥಪೂರ್ಣ ಆಚರಣೆ, ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮಾಜದ ಹಿರಿಯ ಮುತ್ಸದ್ಧಿ ಎನ್.ತಿಪ್ಪಣ್ಣ ಅವರಿಗೆ ಅಭಿನಂದನಾ ಸಮಾರಂಭ, ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಮುಖ್ಯಮಂತ್ರಿ ಆಗಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಕರೆಸಿ, ಸಂಘದ ಶಾಲೆ ಉದ್ಘಾಟನೆ, ಇದೇವೇಳೆ ಮಹಾಸಭಾಕ್ಕೆ ಕೊಳಗಲ್ಲು ರಸ್ತೆಯಲ್ಲಿ 2 ಎಕರೆ ಜಮೀನು ಮಂಜೂರು, ನಗರದ ಮೋಕಾ ರಸ್ತೆಯ ಕೆಇಬಿ ಸರ್ಕಲ್ ನಲ್ಲಿ ಜಗಜ್ಯೋತಿ ಬಸವಣ್ಣನವರ ಪುತ್ಥಳಿ ನಿರ್ಮಾಣಕ್ಕೆ ಸಿದ್ಧತೆ, ವೀರಶೈವ ಲಿಂಗಾಯತ ಸಮಾಜವನ್ನು ಒಬಿಸಿಗೆ ಸೇರಿಸುವಂತೆ ನಡೆದ ಹೋರಾಟದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಮಾಡಿ, ಸಮಾಜಕ್ಕಾಗಿ ಶ್ರಮಿಸಲಾಗಿದೆ ಎಂದರು.

ಮಹಾಸಭಾ ಭವನ, ವಿದ್ಯಾರ್ಥಿನಿಯರಿಗೆ ವಸತಿ ನಿಲಯ ನಿರ್ಮಿಸುವ ಉದ್ದೇಶವಿದೆ. ₹10 ಕೋಟಿ ವೆಚ್ಚದಲ್ಲಿ ಬೃಹತ್ ಮಹಾಸಭಾ ಭವನ ನಿರ್ಮಿಸಲಾಗುವುದು ಎಂದರು.

ವೀವಿ ಸಂಘದ ಉಪಾಧ್ಯಕ್ಷ ಚಾನೆಕುಂಟೆ ಬಸವರಾಜ್, ವೀರಶೈವ ಮಹಾಸಭಾದ ಆಂಧ್ರಪ್ರದೇಶದ ರಾಜ್ಯ ಘಟಕದ ಅಧ್ಯಕ್ಷ ದಂಡಿನ ಶಿವಾನಂದ, ಉಡೇದ ಬಸವರಾಜ್, ಪಲ್ಲೇದ ಪಂಪಾಪತಿ, ದರೂರು ಶಾಂತನಗೌಡ, ರೂಪನಗುಡಿ ಬಸವರಾಜ್, ಅರವಿ ಬಸವನಗೌಡ, ಮಸೀದಿಪುರ ಸಿದ್ಧರಾಮೇಶ್ವರಗೌಡ, ಕಾರ್ಯದರ್ಶಿ ಯಾಳ್ಪಿ ಪೊಂಪನಗೌಡ, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಎನ್.ಟಿ.ಶೇಖರ್, ಮಿಂಚೇರಿ ನರೇಂದ್ರಬಾಬು, ಅಲ್ಲಂ ಪ್ರಮೋದ್, ಎಸ್.ಮಲ್ಲನಗೌಡ, ಆರ್.ಎಚ್.ಎಂ. ಚನ್ನಬಸಯ್ಯಸ್ವಾಮಿ, ಗೋನಾಳು ವಿರುಪಾಕ್ಷಗೌಡ, ಟಿ.ಎಚ್.ಎಂ. ಬಸವರಾಜ, ಆನೆ ಗಂಗಣ್ಣ ಇದ್ದರು.

Share this article