ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧ ಕೆಲವರು ರಾಜಕೀಯ ಪಿತೂರಿ ನಡೆಸುತ್ತಿದ್ದಾರೆ. ತಾವು ಕೂಡ ರಾಜಕೀಯವಾಗಿಯೇ ಎದುರಿಸುವುದಾಗಿ ಸವಾಲು ಹಾಕಿದರು.
ಕಳೆದ 40 ವರ್ಷಗಳಿಂದ ವೀರಶೈವ ಮಹಾಸಭಾ ಬೆರಳೆಣಿಕೆ ಜನರ ಕೈಯಲ್ಲಿದ್ದು ಮಹಾಸಭಾದ ಕಚೇರಿಗೆ ಬೀಗ ಹಾಕಲಾಗಿತ್ತು. ನಾನು ಅಧ್ಯಕ್ಷನಾದ ನಂತರ ಕಚೇರಿ ಬೀಗ ತೆಗೆಸಿ ವೀರಶೈವ ಮಹಾಸಭಾದ ಕಾರ್ಯ ಚಟುವಟಿಕೆಗಳನ್ನು ಸಕ್ರಿಯಗೊಳಿಸಿದ್ದೇನೆ ಎಂದರು.ಪಟ್ಟಣದ ವೀರಶೈವ ನಿವೇಶನ ವಿಚಾರವಾಗಿ ನ್ಯಾಯಾಲಯದಲ್ಲಿ 9 ಪ್ರಕರಣಗಳಿದ್ದು ನನ್ನ ಸ್ವಂತ ಹಣದಿಂದ ಈಗಾಗಲೇ 6 ಪ್ರಕರಣಗಳು ಇತ್ಯರ್ಥವಾಗಿದೆ. ಮೂರು ಪ್ರಕರಣಗಳೂ ಮುಕ್ತಾಯದ ಹಂತಕ್ಕೆ ಬಂದಿವೆ ಎಂದರು.
ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ವೀರಶೈವ ವಿದ್ಯಾರ್ಥಿ ನಿಲಯಕ್ಕೆ 1 ಕೋಟಿ ಹಾಗೂ ಬಸವ ಭವನ ನಿರ್ಮಾಣಕ್ಕೆ 2 ಕೋಟಿಯಂತೆ ಒಟ್ಟು 3 ಕೋಟಿ ರು. ಅನುದಾನ ನೀಡಿದ್ದರು. ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಸಮುದಾಯದ ಹಿತಕ್ಕೆ ಸ್ಪಂದಿಸಲಿಲ್ಲ ಎಂದರು.
ಕ್ಷೇತ್ರದ ಶಾಸಕರಿಗೆ ಮತ್ತು ವೀರಶೈವ ಮಹಾಸಭಾದ ಅಧ್ಯಕ್ಷನಾಗಿರುವ ನನಗೆ ಹೆಸರು ಬರುತ್ತದೆ ಎನ್ನುವ ಕಾರಣಕ್ಕೆ ನಮ್ಮದೇ ಸಮುದಾಯದ ಕೆಲವರು ವಿದ್ಯಾರ್ಥಿ ನಿಲಯದ ಕಾಮಗಾರಿಯ ಗುದ್ದಲಿ ಪೂಜೆಗೆ ತಡೆಮಾಡಿ ವಿದ್ಯಾರ್ಥಿಗಳ ಅನ್ನಕ್ಕೆ ಕಲ್ಲು ಹಾಕಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಕಾರ್ಯದರ್ಶಿ ಈರಪ್ಪ, ನಿರ್ದೇಶಕರಾದ ಮಾದೇಶ್, ಡಿ.ಸಿ.ಕುಮಾರ್, ಶಿವಮೂರ್ತಿ, ವಡ್ಡರಹಳ್ಳಿ ಶಿವಕುಮಾರ್, ಶಿಕ್ಷಕರಾದ ಶಿವಪ್ಪ, ಮಲ್ಲೇಶ್, ಶಿವಕುಮಾರ್, ಮುಖಂಡರಾದ ಬಸವಲಿಂಗಪ್ಪ, ಶಿವಕುಮಾರ್, ಚಂದ್ರಶೇಖರ್, ಭೀಮೇಶ್ ಕುಮಾರ್, ನಂದೀಶ್‌ಕುಮಾರ್, ಟಿ.ಎನ್.ಚಂದ್ರಪ್ಪ ಸೇರಿದಂತೆ ನೂರಾರು ಜನರು ಇದ್ದರು.