ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಡ್ಡಪಲ್ಲಕ್ಕಿ ಮಹೋತ್ಸವ

KannadaprabhaNewsNetwork |  
Published : Dec 01, 2025, 02:15 AM IST
ಪೊಟೋಪೈಲ್ ನೇಮ್ ೩೦ಎಸ್‌ಜಿವಿ೧ ಶಿಗ್ಗಾಂವಿ ತಾಲೂಕಿನ ಬಿಸನಳ್ಳಿ ಗ್ರಾಮದಲ್ಲಿ ಬಾಳೇಹೊನ್ನೂರ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು  | Kannada Prabha

ಸಾರಾಂಶ

ಶಿಗ್ಗಾಂವಿ ತಾಲೂಕಿನ ಬಿಸನಳ್ಳಿ ಗ್ರಾಮದ ಕಾಶೀಪೀಠದ ಪಂಚಾಚಾರ್ಯ ವೇದ, ಆಗಮ, ಸಂಸ್ಕೃತಿ, ಸಂಗೀತ, ಯೋಗ ಮತ್ತು ಜ್ಯೋತಿಷ್ಯ ಪಾಠಶಾಲೆ ಆವರಣದಲ್ಲಿ ನಡೆದ ಇಷ್ಟಲಿಂಗ ಪೂಜೆ, ವೀರಶೈವ ಪಂಚಾಚಾರ ಆಧ್ಯಾತ್ಮಿಕ ಆಶೀರ್ವಚನ ಹಾಗೂ ಮಾನವ ಧರ್ಮ ಸಮಾವೇಶ, ಕಾಶೀ ಶ್ರೀಗಳ ೩೬ನೇ ವಷದಿಂದ ಪೀಠಾರೋಹಣ ವರ್ಧಂತಿ ಮಹೋತ್ಸವ, ಪುಸ್ತಕ ಬಿಡುಗಡೆ ಸೇರಿದಂತೆ ವಿವಿಧ ಧಾರ್ಮಿಕ ಸಮಾರಂಭದ ಅಂಗವಾಗಿ ಬಾಳೇಹೊನ್ನೂರ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು.

ಶಿಗ್ಗಾಂವಿ: ತಾಲೂಕಿನ ಬಿಸನಳ್ಳಿ ಗ್ರಾಮದ ಕಾಶೀಪೀಠದ ಪಂಚಾಚಾರ್ಯ ವೇದ, ಆಗಮ, ಸಂಸ್ಕೃತಿ, ಸಂಗೀತ, ಯೋಗ ಮತ್ತು ಜ್ಯೋತಿಷ್ಯ ಪಾಠಶಾಲೆ ಆವರಣದಲ್ಲಿ ನಡೆದ ಇಷ್ಟಲಿಂಗ ಪೂಜೆ, ವೀರಶೈವ ಪಂಚಾಚಾರ ಆಧ್ಯಾತ್ಮಿಕ ಆಶೀರ್ವಚನ ಹಾಗೂ ಮಾನವ ಧರ್ಮ ಸಮಾವೇಶ, ಕಾಶೀ ಶ್ರೀಗಳ ೩೬ನೇ ವಷದಿಂದ ಪೀಠಾರೋಹಣ ವರ್ಧಂತಿ ಮಹೋತ್ಸವ, ಪುಸ್ತಕ ಬಿಡುಗಡೆ ಸೇರಿದಂತೆ ವಿವಿಧ ಧಾರ್ಮಿಕ ಸಮಾರಂಭದ ಅಂಗವಾಗಿ ಬಾಳೇಹೊನ್ನೂರ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಮಹೋತ್ಸವ ಜರುಗಿತು.

ಗ್ರಾಮದ ರಾಷ್ಟ್ರೀಯ ಹೆದ್ದಾರಿ ರಸ್ತೆ ಬಳಿ ಇರುವ ಕಲ್ಮೇಶ್ವರ, ಮಾರುತಿ ದೇವಸ್ಥಾನದ ಆವರಣದಿಂದ ಆರಂಭವಾದ ಅಡ್ಡಪಲ್ಲಕ್ಕಿ ಮಹೋತ್ಸವ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಶ್ರದ್ಧಾ ಭಕ್ತಿಯಿಂದ ಸಂಭ್ರಮದಿಂದ ಸಂಚರಿಸಿತು.ಭಕ್ತರು ದೇಶಗೀತೆ, ಭಕ್ತಿಗೀತೆಗಳನ್ನು ಹಾಡುತ್ತಿದ್ದರು. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಜಯ ಘೋಷಣೆಗಳು, ಧರ್ಮ ಧ್ವಜಗಳು ರಾರಾಜಿಸುತ್ತಿದ್ದವು. ಮಹಿಳೆಯರು ಮಕ್ಕಳು ಹಣ್ಣುಕಾಯಿ, ಹೂಹಾರಗಳಿಂದ ವಿಶೇಷ ಪೂಜೆ ಸಲ್ಲಿಸಿದರು. ಕಾಶೀ ಪೀಠದ ಸಂಗೀತ, ವೇದ ಪಾಠ ಸಾಲೆ ವಟುಗಳಿಂದ ವೇದ ಪಠಣದ ಮೂಲಕ ಶ್ರದ್ಧಾಭಕ್ತಿ ಸಲ್ಲಿಸಿದರು. ಕೊನೆಗೆ ಕಾಶೀ ಪೀಠದ ಮಠದವರೆಗೆ ಮೆರವಣಿಗೆ ಸಾಗಿತು.

ಕಾಶೀ ಪೀಠದ ಜಗದ್ಗುರುಗಳಾದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಉಜ್ಜಯಿನಿ ಪೀಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಪೀಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ವಾರಣಾಸಿ ಜಂಗಮವಾಡಿ ಕಾಶೀಪೀಠದ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಿದ್ದರು.

ಬಂಕಾಪುರ ಅರಳೆಲೆಮಠದ ರೇವಣಸಿದ್ದೇಶ್ವರ ಸ್ವಾಮೀಜಿ, ಸಿಂದಗಿ ಸಾರಂಗಮಠದ ಪ್ರಭುಸಾರಂಗದೇವ ಸ್ವಾಮೀಜಿ, ಶಿವಗಂಗಾ ಮಲಯಸಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಮುಕ್ತಿಮಂದಿರದ ವಿಮಲರೇಣುಕ ವೀರ ಮುಕ್ತಿಮುನಿ ಸ್ವಾಮೀಜಿ, ಅಕ್ಕಿಆಲೂರ ಚಂದ್ರಶೇಖರ ಸ್ವಾಮೀಜಿ, ಗುಳೇದಗುಡ್ಡದ ನೀಲಕಂಠ ಸ್ವಾಮೀಜಿ, ಗದಗ ಅಭಿನವ ಪಂಚಾಕ್ಷರ ಸ್ವಾಮೀಜಿ, ಹಿರೇಮಣಕಟ್ಟಿ ವಿಶ್ವಾರಾಧ್ಯ ಸ್ವಾಮೀಜಿ, ಹಿರೇಬೆಂಡಿಗೇರಿ ವಿಶ್ವೇಶ್ವರ ಸ್ವಾಮೀಜಿ ಸಮ್ಮುಖ ವಹಿಸಿದ್ದರು.ಪಾಠ ಸಾಲೆ ಉಪಧ್ಯಕ್ಷ ಶಂಭಣ್ಣ ಮಾಮ್ಲೆಪಟ್ಟಣಶೆಟ್ಟರ, ಕಲ್ಲಪ್ಪ ಆಜೂರ, ಶಂಭಣ್ಣ ಆಜೂರ, ಮುರಗೇಶ ಆಜೂರ, ವೀರೇಶ ಆಜೂರ, ಗುರುಶಾಂತಪ್ಪ ನರೆಗಲ್ಲ, ಗದಿಗೆಪ್ಪ ಶೆಟ್ಟರ, ಸಾಗರ ಕಂತಿಮಠ, ಮಲ್ಲಿಕಾರ್ಜುನ ಯಳಮಲ್ಲಿಮಠ, ಗದಿಗಯ್ಯ ಹಿರೇಮಠ, ಚಂದ್ರು, ಕೋರಿ, ಗಂಗಮ್ಮ ದೇಸಾಯಿ, ನಿಂಗಪ್ಪ ಹುಬ್ಬಳ್ಳಿ ಸೇರಿದಂತೆ ಸೇವಾ ಸಮಿತಿ ಎಲ್ಲ ಸದಸ್ಯರು, ರಾಜ್ಯದ ವಿವಿಧ ಕಡೆಯಿಂದ ಬಂದಿರುವ ಮುಖಂಡರು, ಕಲಾವಿದರು, ಸಾಹಿತಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕಗಳಲ್ಲಿ ಬೆಂಗಳೂರು ನಗರಕ್ಕೆ ಬರೋಬ್ಬರಿ ₹38 ಕೋಟಿ ಡ್ರಗ್ಸ್‌ ಸಾಗಾಟ
ಸರ್ಕಾರದಿಂದ ಗೋಬ್ಯಾಕ್‌ ಗೌರ್ನರ್‌ ಅಭಿಯಾನ ಚಿಂತನೆ