ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ
ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಕೆಂಚನಾಲ ಗ್ರಾಪಂ ವ್ಯಾಪ್ತಿಯ ಮಸರೂರು, ಮಾಣಿಕೆರೆ, ಹೊನ್ನಕೊಪ್ಪ, ಕಮದೂರು ಬಳಿ ರೈತರ ಬಾಳೆ ತೋಟಕ್ಕೆ ಅನೆ ದಾಳಿ ನಡೆಸಿ ಬಾಳೆ ದ್ವಂಸಗೊಳಿಸಿದ್ದು, ಕಳೆದ ವರ್ಷ ಸಹ ಬೆಳೆ ಹಾನಿಗೊಳಿಸಿರುತ್ತವೆ, ಅದ್ದರಿಂದ ಮುಂದಿನ ದಿನಗಳಲ್ಲಿ ಅನೆ ಬರದಂತೆ ಸೋಲಾರ್ ಗಾರ್ಡ್ ಅಳವಡಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣ ಅಳವಡಿಸುವ ಕಾರ್ಯ ಕೈಗೊಳ್ಳುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಬೆಳ್ಳೂರು ಗ್ರಾಪಂ ವ್ಯಾಪ್ತಿಯ ಕಳಸೆ ಗ್ರಾಮದಲ್ಲಿ ಸಹ ಇದೇ ರೀತಿಯಲ್ಲಿ ರೈತರ ಜಮೀನಿಗೆ ನುಗ್ಗಿ ಬೆಳೆ ನಾಶಗೊಳಿಸಿರುತ್ತವೆ, ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ ಎಂದು ರೈತರು ತಮ್ಮ ನೋವನ್ನು ತೋಡಿಕೊಂಡಾಗ ಶಾಸಕರು ಸ್ಪಂದಿಸಿ ವೈಯಕ್ತಿಕ ಧನ ಸಹಾಯ ನೀಡುವುದರೊಂದಿಗೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಅನೆಗಳ ಸ್ಥಳಾಂತರ ಮಾಡಿ ರೈತರಿಗೆ ಆದ ಹಾನಿಗೆ ಪರಿಹಾರದ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.ಅರಣ್ಯ ಜಾಗ ಒತ್ತುವರಿದಾರರ ರೈತರಿಗೆ ನೋಟಿಸ್: ಕೆಂಚನಾಲ ಗ್ರಾಪಂ ವ್ಯಾಪ್ತಿಯ ಅರಸಾಳು ವಲಯ ವ್ಯಾಪ್ತಿಯಲ್ಲಿ ಬರುವ ಮಸರೂರು, ಮಾಣಿಕೆರೆ ಗ್ರಾಮದ ಅರಣ್ಯ ಸರ್ವೇ ನಂಬರ್‌ನಲ್ಲಿ ಆಕ್ರಮ ಸಾಗುವಳಿ ಮಾಡಿಕೊಂಡಿರುವ ರೈತರೊಬ್ಬರಿಗೆ ಅರಣ್ಯ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗಿದೆ ಎಂದು ಶಾಸಕರ ಬಳಿ ರೈತ ನೋಟಿಸಿ ಹಿಡಿದುಕೊಂಡು ತೋರಿಸಿದಾಗ ಸ್ಥಳದಲ್ಲಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ತರಾಟೆಗೆ ತಗೆದುಕೊಂಡ ಅವರು, ಈ ರೀತಿ ನೋಟಿಸ್ ನೀಡಿದರೆ ಮುಂದೆ ನಿಮ್ಮ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ವಿರೋಧ ಪಕ್ಷದವರು ಉದ್ದೇಶ ಪೂರ್ವಕವಾಗಿ ಇಲ್ಲಸಲ್ಲದ ಅರೋಪ ಮಾಡುತ್ತಿದ್ದಾರೆ. ಅವರ ಅವಧಿಯಲ್ಲಿ ಈ ರೀತಿ ದಾಳಿ ಮಾಡಿದಾಗ ಏನು ಮಾಡಿದ್ದಾರೆ ಹೇಳಲಿ ಎಂದರು.
ಶಿವಮೊಗ್ಗ ವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ, ವನ್ಯ ಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಹೊಸನಗರ ತಹಸೀಲ್ದಾರ್ ಭರತ್‍ರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ, ಹೊಸನಗರ ತಾಲೂಕು ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷ ಬಿ.ಜೆ.ಚಂದ್ರುಮೌಳಿಗೌಡರು, ಮುಖಂಡರಾದ ರವೀಂದ್ರ ಕೆರೆಹಳ್ಳಿ, ಡಿ.ಈ.ಮಧುಸೂದನ್, ಗಣಪತಿ, ಎನ್.ಚಂದ್ರೇಶ್, ನಿರೂಪ್‍ಕುಮಾರ್, ಆಶೀಫ್‍ಭಾಷಾ, ಧನಲಕ್ಷ್ಮಿ, ನಿರುಪಮ ರಾಕೇಶ್, ಹೇಮಾ ಮಂಜಪ್ಪ, ಶಾಹಿರಾಬಾನು, ಉಬೇದುಲ್ಲ ಹಾಜರಿದ್ದರು.