ಕನ್ನಡಪ್ರಭ ವಾರ್ತೆ ಬ್ಯಾಡಗಿ
ಅನೀಸ ಉರ್ ರೆಹಮಾನ್ ಅವರ ಸ್ಕಾರ್ಪಿಯೋ ಕಾರು ಗೋವಾದಿಂದ ಬೆಂಗಳೂರು ಕಡೆಗೆ ಚಲಿಸುತ್ತಿದ್ದ ವೇಳೆ ಕೂಲೆಂಟ್‌ನಲ್ಲಾದ ಸಮಸ್ಯೆಯಿಂದ ಬೆಂಕಿ ಸ್ಪರ್ಶವಾದ ಬಗ್ಗೆ ಪೊಲೀಸರು ನೀಡಿದ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅದರಲ್ಲಿದ್ದ ನಾಲ್ವರು ಯುವಕರು ತಕ್ಷಣವೇ ಕೆಳಕ್ಕೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬ್ಯಾಡಗಿಯಿಂದ ಅಗ್ನಿಶಾಮಕ ವಾಹನ ತೆರಳಿ ಬೆಂಕಿ ನಂದಿಸುವಷ್ಟರಲ್ಲಿ ಸ್ಕಾರ್ಪಿಯೋ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಘಟನೆ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.