ಅಪಘಾತ ತಪ್ಪಿಸಲು ವಾಹನಗಳ ವೇಗಕ್ಕೆ ಬೇಕಿದೆ ಕಡಿವಾಣ!

KannadaprabhaNewsNetwork |  
Published : Jan 28, 2026, 02:00 AM IST
ತಾಲೂಕಿನ ಹತ್ತನೆಮೈಲಿ ಕಲ್ಲು ಬಳಿ ಇರುವ ಅಪಾಯಕಾರಿ ತಿರುವು | Kannada Prabha

ಸಾರಾಂಶ

ಚನ್ನಗಿರಿಯಿಂದ ಬೀರೂರು- ದಾವಣಗೆರೆ ಪ್ರದೇಶಗಳಿಗೆ ಸಂಚರಿಸುವಂತಹ 110 ಕಿ.ಮೀ.ಗಳ ಅಂತರದ ಬೀರೂರು- ಸಮಸಗಿ ರಸ್ತೆಯು ವಾಹನ ಚಾಲನೆಗೆ ಹಸನಾಗಿದೆ. ಈ ರಸ್ತೆಯಲ್ಲಿ ಮಸಣಿಕೆರೆ ಸರ್ಕಲ್ ಮತ್ತು 10ನೇ ಮೈಲಿ ಕಲ್ಲುಗಳ ಸ್ಥಳಗಳಲ್ಲಿ ಅಪಾಯದ ತಿರುವುಗಳಿವೆ. ಪರಿಣಾಮ ವೇಗವಾಗಿ ಸಂಚರಿಸುವ ವಾಹನಗಳಿಂದಾಗಿ ಆಗಾಗ ಅಪಘಾತಗಳಾಗುತ್ತಿವೆ. ವಿಶೇಷವಾಗಿ ಪಾದಚಾರಿಗಳ ಸಾವು-ನೋವುಗಳು ಗಮನೀಯ.

- ಬೀರೂರು-ಸಮಸಗಿ ರಸ್ತೆಯಲ್ಲಿ ಸಂಚಾರ ಹುಷಾರು । ಅಪಾಯಕಾರಿ ತಿರುವುಗಳಲ್ಲಿ ನೇರ ರಸ್ತೆ ಒಳಿತು

- - -

ಬಾ.ರಾ.ಮಹೇಶ್, ಚನ್ನಗಿರಿ

ಕನ್ನಡಪ್ರಭ ವಾರ್ತೆ ಚನ್ನಗಿರಿ

ಚನ್ನಗಿರಿಯಿಂದ ಬೀರೂರು- ದಾವಣಗೆರೆ ಪ್ರದೇಶಗಳಿಗೆ ಸಂಚರಿಸುವಂತಹ 110 ಕಿ.ಮೀ.ಗಳ ಅಂತರದ ಬೀರೂರು- ಸಮಸಗಿ ರಸ್ತೆಯು ವಾಹನ ಚಾಲನೆಗೆ ಹಸನಾಗಿದೆ. ಈ ರಸ್ತೆಯಲ್ಲಿ ಮಸಣಿಕೆರೆ ಸರ್ಕಲ್ ಮತ್ತು 10ನೇ ಮೈಲಿ ಕಲ್ಲುಗಳ ಸ್ಥಳಗಳಲ್ಲಿ ಅಪಾಯದ ತಿರುವುಗಳಿವೆ. ಪರಿಣಾಮ ವೇಗವಾಗಿ ಸಂಚರಿಸುವ ವಾಹನಗಳಿಂದಾಗಿ ಆಗಾಗ ಅಪಘಾತಗಳಾಗುತ್ತಿವೆ. ವಿಶೇಷವಾಗಿ ಪಾದಚಾರಿಗಳ ಸಾವು-ನೋವುಗಳು ಗಮನೀಯ.

ಕೆಲವು ವಾಹನಗಳ ಚಾಲಕರು 60, 80, 120, 140, 160 ಕಿ.ಮೀ ವೇಗದಲ್ಲಿ ಸಂಚರಿಸುತ್ತಾರೆ. ಇನ್ನು ಕೆಲವು ದ್ವಿಚಕ್ರ ವಾಹನಗಳಿಂದ ಹಿಡಿದು ಕಾರು, ಲಾರಿ, ಬಸ್‌ಗಳ ಚಾಲಕರು ಹಿಂದೆ, ಮುಂದೆ ಗಮನಿಸದೇ ವೇಗದ ಮೀತಿಯನ್ನೂ ತಗ್ಗಿಸದೇ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಇದರ ಪರಿಣಾಮ ಒಂದೇ ವಾರದಲ್ಲಿ 5ರಿಂದ 6 ಅಪಘಾತಗಳು ಸಂಭವಿಸುತ್ತಿವೆ. ಯುವಜನರು, ವೃದ್ಧರು, ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳ ದುರ್ಮರಣ ಜನರನ್ನು ಆತಂಕಕ್ಕೀಡು ಮಾಡಿದೆ.

ಈ ಪ್ರದೇಶದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಕೆಲವೆಡೆ ನಾಮಫಲಕಗಳಿದ್ದರೆ, ಮತ್ತೆ ಕೆಲವೆಡೆ ಜಾಗೃತಿ ಮೂಡಿಸುವ ಸೂಚನಾ ಫಲಕಗಳೇ ಅಳವಡಿಸಿಲ್ಲ. ದಾವಣಗೆರೆ- ಬೀರೂರು ರಸ್ತೆ ರಾಜ್ಯ ಹೆದ್ದಾರಿಯಾಗಿದೆ. ಆದರೆ ರಸ್ತೆ ವಿಶಾಲವಾಗಿ ಇರುವುದರಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯ ಮತ್ತು ಹೊರ ರಾಜ್ಯಗಳ ಟ್ರಕ್, ಭಾರಿ ಗಾತ್ರಗಳ ಸರಕು ತುಂಬಿದ ಲಾರಿಗಳು, ಕಾರುಗಳು ವೇಗವಾಗಿ ಸಂಚರಿಸುತ್ತಿವೆ.

ಈ ಬೀರೂರು- ಸಮಸಗಿ ರಸ್ತೆಯಲ್ಲಿ ದಾವಣಗೆರೆಯಿಂದ ಬೀರೂರುವರೆಗೆ 110 ಕಿ.ಮೀ. ಅಂತರವಿದೆ. ಇದರಲ್ಲಿ ಚನ್ನಗಿರಿ ವ್ಯಾಪ್ತಿಯಲ್ಲಿ 50.39 ಕಿ.ಮೀ. ರಸ್ತೆ ಇದೆ. ವಾಹನಗಳು ಸಂಚರಿಸುವ ರಸ್ತೆಯ 10 ಮೀಟರ್ ಅಗಲದಲ್ಲಿ ದ್ವಿಪಥ ರಸ್ತೆಯನ್ನಾಗಿ ಮಾಡಲಾಗಿದೆ. ಈ ರಸ್ತೆಯ ಅಗಲದ ವ್ಯಾಪ್ತಿಯಲ್ಲಿಯೇ ದ್ವಿಚಕ್ರ ವಾಹನ ಸವಾರರು ಸಂಚರಿಸಲು ಪ್ರತೇಕ ಟ್ಯ್ರಾಕ್‌ ಸಹ ಮಾಡಲಾಗಿದೆ. ಆದರೆ, ವಾಹನಗಳು ವೇಗದ ಮಿತಿಗಳಿಲ್ಲದೇ, ವಾಹನ ಕಾಯ್ದೆಗಳನ್ನು ಪರಿಪಾಲನೆ ಮಾಡದೇ, ಓವರ್ ಟೇಕ್‌ ಮಾಡುವ ಭರದಲ್ಲಿ ಸಂಚರಿಸುವುದರಿಂದ ಅಪಘಾತಗಳು ಹೆಚ್ಚುತ್ತಿವೆ.

- - -

(ಬಾಕ್ಸ್‌) * ನೇರ ರಸ್ತೆಯನ್ನಾಗಿ ಪರಿವರ್ತಿಸಬೇಕು: ನಿಖಿಲ್‌ ಚನ್ನಗಿರಿಯಿಂದ ತಾವರೆಕೆರೆಗೆ ಹೋಗುವ ರಸ್ತೆ ಸುಸಜ್ಜಿತವಾಗಿದೆ. ಆದರೆ ಈ ಮಾರ್ಗದ ಮಧ್ಯದಲ್ಲಿರುವ ಹತ್ತನೇ ಮೈಲಿಕಲ್ಲು ಬಳಿ ಅಪಾಯಕಾರಿ ತಿರುವುಗಳಿವೆ. ಪ್ರತಿದಿನ ಒಂದಿಲ್ಲೊಂದು ವಾಹನಗಳು ಈ ರಸ್ತೆ ತಿರುವುಗಳಲ್ಲಿ ಅಪಘಾತಕ್ಕೆ ಒಳಗಾಗುತ್ತಿವೆ, ಈ ರಸ್ತೆ ಅಭಿವೃದ್ಧಿಯಾಗಿ 15 ವರ್ಷಗಳು ಕಳೆದಿವೆ. ಅಲ್ಲಿಂದ ಇಲ್ಲಿಯವರೆಗೆ ಸುಮಾರು 100ಕ್ಕೂ ಹೆಚ್ಚು ಜನರು ಪ್ರಾಣಗಳನ್ನು ಕಳೆದುಕೊಂಡಿದ್ದಾರೆ. ಆದಷ್ಟು ಶೀಘ್ರದಲ್ಲಿಯೇ ಈ ಅಪಾಯಕಾರಿ ತಿರುವನ್ನು ನೇರ ರಸ್ತೆಯನ್ನಾಗಿ ಪರಿವರ್ತಿಸಿದರೆ ಇನ್ನಷ್ಟು ಜೀವಗಳನ್ನು ಉಳಿಸಬಹುದು ಎಂದು ಗಂಗಗೊಂಡನಹಳ್ಳಿ ಗ್ರಾಮದ ನಿವಾಸಿ ಜಿ.ಎಸ್.ನಿಖಿಲ್ ಸರ್ಕಾರಕ್ಕೆ ಸಲಹೆ ಮನವಿ ಮಾಡಿದ್ದಾರೆ.

- - -

(ಕೋಟ್ಸ್‌) ರಸ್ತೆ ಅಪಘಾತಗಳನ್ನು ತಡೆಗಟ್ಟುವ ಸಲುವಾಗಿ ಚನ್ನಗಿರಿ ತಾಲೂಕಿನ ಕೆಲವು ಸ್ಥಳಗಳನ್ನು ಬ್ಲಾಕ್ ಸ್ಪಾಟ್‌ಗಳೆಂದು ಗುರುತಿಸಲಾಗಿದೆ. ತಾಲೂಕಿನ ಗೆದ್ದಲಹಟ್ಟಿ, ನುಗ್ಗಿಹಳ್ಳಿ ಕ್ರಾಸ್, ಎ.ಬಿ.ಹಟ್ಟಿ ಕ್ರಾಸ್, ಬಸವ ಇಂಟರ್ ನ್ಯಾಷನಲ್ ಶಾಲೆ, ಹೊನ್ನೆಬಾಗಿ, ಆರ್.ಜಿ.ಹಳ್ಳಿ, 10ನೇ ಮೈಲಿಕಲ್ಲು, ತಾವರೆಕೆರೆ ಕ್ರಾಸ್ ಈ ಸ್ಥಳಗಳಲ್ಲಿ ಟಾರ್ ಹಂಪ್ಸ್‌ಗಳನ್ನು ಹಾಕಲು ತೀರ್ಮಾನಿಸಲಾಗಿದೆ.

- ರವಿಕುಮಾರ್, ಅಭಿಯಂತರ, ಲೋಕೋಪಯೋಗಿ ಇಲಾಖೆ.

- - -

ಪೊಲೀಸ್ ಇಲಾಖೆ, ನ್ಯಾಯಾಂಗ ಇಲಾಖೆ, ಸರ್ಕಾರಿ ಇಲಾಖೆಗಳ ಅಧಿಕಾರಿಗಳು ರಸ್ತೆ ಸುರಕ್ಷತೆಯನ್ನು ಕಾಪಾಡಿಕೊಳ್ಳುವ ಬಗ್ಗೆ ಹಳ್ಳಿಗಳಿಂದ ಹಿಡಿದು ಪಟ್ಟಣದ ವರೆಗೆ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಆದರೂ, ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಕಡಿವಾಣ ಹಾಕಲು ವೇಗದ ಮಿತಿ ಸೀಮಿತಗೊಳಿಸಬೇಕು. ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್‌ಗಳನ್ನು ಹಾಕುವುದು ಕಡ್ಡಾಯ ಆಗಬೇಕು. ಅಪಘಾತ ವಲಯದ ಪ್ರದೇಶಗಳಲ್ಲಿ ಹಂಪ್ಸ್‌ಗಳನ್ನು ಹಾಕಿದರೆ ವೇಗದ ಮಿತಿ ತಗ್ಗಿಸಲು ಸಹಕಾರಿಯಾಗಲಿದೆ.

- ರುದ್ರಪ್ಪ, ಕಿರಣ್, ಗೆದ್ದಲಹಟ್ಟಿ ಗ್ರಾಮ.

- - -

ಮಧ್ಯಪಾನ ಮಾಡಿಕೊಂಡು ವಾಹನಗಳನ್ನು ಚಲಾವಣೆ ಮಾಡುವವರ ಸಂಖ್ಯೆ ಶೇ.60ರಷ್ಟಿದ್ದರೆ, ಶೇ.30ರಷ್ಟು ವಾಹನ ಸವಾರರು ವಾಹನ ಸವಾರಿ ಮಾಡುತ್ತಲೇ ಮೊಬೈಲ್‌ಗಳಲ್ಲಿ ಮಾತನಾಡುತ್ತ ಅಪಘಾತಗಳನ್ನು ಮಾಡುತ್ತಾರೆ ಅಥವಾ ಅಪಘಾತಗಳಿಗೆ ಒಳಗಾಗುತ್ತಾರೆ. ಇದಕ್ಕೆ ಕಡಿವಾಣ ಹಾಕಬೇಕು. ಇನ್ನುಳಿದ 10ರಷ್ಟು ಜನ ಮಾತ್ರ ರಸ್ತೆ ನಿಯಮಗಳ ಪ್ರಕಾರ ವಾಹನಗಳ ಚಲಾಯಿಸುತ್ತಾರೆ.

- ಸುರೇಶ್, ಚಂದ್ರಣ್ಣ, ರಾಜು. ತಾವರೆಕೆರೆ ಗ್ರಾಮಸ್ಥರು.

- - -

-27ಕೆಸಿಎನ್‌ಜಿ1: ಹತ್ತನೇ ಮೈಲಿ ಕಲ್ಲು ಬಳಿಯ ಅಪಾಯಕಾರಿ ತಿರುವು.

-27ಕೆಸಿಎನ್ಜಿ2: ತಾವರೆಕೆರೆ ಚನ್ನಗಿರಿ, ಸಂತೆಬೆನ್ನೂರು ಮಾರ್ಗವಾಗಿ ದಾವಣಗೆರೆಗೆ ಹೋಗುವ ಅಪಾಯಕಾರಿ ಬೀರೂರು- ಸಮಸಗಿ ರಸ್ತೆ.

-27ಕೆಸಿಎನ್‌ಜಿ3: ಹತ್ತನೇ ಮೈಲಿಕಲ್ಲು ಬಳಿ ಅಪಘಾತಕ್ಕೆ ಒಳಗಾಗಿರುವ ದ್ವಿಚಕ್ರವಾಹನ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ
ಕೇಂದ್ರ ಸರ್ಕಾರದ ಸಾಧನೆ ತಿಳಿ ಹೇಳಿ