ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ರೆಡ್ಡಿ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ಮಹಾಯೋಗಿ ವೇಮನ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಮಕೃಷ್ಣ, ಬುದ್ಧ, ಬಸವ ಮುಂತಾದ ಲೋಕಪೂಜ್ಯರಂತೆ ಮೇರುಪಂಕ್ತಿಯಲ್ಲಿ ನಿಲ್ಲುವ ಮತ್ತೋರ್ವ ದಿವ್ಯಚೇತನ, ದೈವಾಂಶಸಂಭೂತ, ಸಮಾಜ ಸುಧಾರಕ ಮಹಾಯೋಗಿ ವೇಮನ. ಅವರು ತಮ್ಮ ವಚನ ಸಾಹಿತ್ಯದಲ್ಲಿ ವಿಶೇಷ ಕೃಷಿ ಮಾಡಿದರು. ವಾಸ್ತವ ಬದುಕಿಗೆ ಹತ್ತಿರ ಆಗಿರುವಂತೆ, ಸರಳ, ಸುಲಭ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಕವಿತೆಗಳನ್ನು ರಚಿಸಿದ್ದಾರೆ. ಅವರ ಮೌಲ್ಯಯುತ ಸಾಹಿತ್ಯ ದೇಶದ ಬೇರೆ ಬೇರೆ ಭಾóಷೆಗಳಿಗೆ ತರ್ಜುಮೆಗೊಂಡಿದ್ದು, ಅಪಾರ ಸಂಖ್ಯೆಯ ಓದುಗರನ್ನು ತಲುಪಿದೆ ಎಂದರು.ವೇಮನರ ಹಲವು ಪದ್ಯಗಳಲ್ಲಿನ ಬಳಕೆಯಾಗಿರುವ ಭಾಷೆ, ನುಡಿಗಟ್ಟುಗಳು ಓದುಗರನ್ನು ತನ್ನತ್ತ ಸೆಳೆಯುತ್ತವೆ. ಅವುಗಳಲ್ಲಿ ವಿಶೇಷವಾಗಿ ಯೋಗ, ಬುದ್ಧಿಮತ್ತೆ ಮತ್ತು ನೈತಿಕತೆ ವಿಷಯಗಳು ಒಳಗೊಂಡಿವೆ. ಯೋಗದಲ್ಲಿ ಅವರ ಯಶಸ್ಸು ಹೆಚ್ಚು ಜನಪ್ರಿಯಗೊಳಿಸಿದೆ ಮಾತ್ರವಲ್ಲ ಯೋಗಿ ವೇಮನ ಎಂದೇ ಕರೆಯುವಂತೆ ಮಾಡಿದೆ ಎಂದರು.
ಕಾರ್ಯಕ್ರಮದಲ್ಲಿ ರೆಡ್ಡಿ ಸಮಾಜದ ಅಧ್ಯಕ್ಷ ಎಚ್.ಜಿ.ಭೀಮರೆಡ್ಡಿ, ಕಾರ್ಯದರ್ಶಿ ಶ್ರೀನಿವಾಸ್ ಕೆ.ಜಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ, ನಗರಸಭೆ ಮಾಜಿ ಅಧ್ಯಕ್ಷ ಜ್ಞಾನೇಶ್ವರ್, ಡಾ.ಶ್ರೀನಿವಾಸ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.
- - - ಬಾಕ್ಸ್ ಮಾನವತಾ ಧರ್ಮ, ಅತ್ಯಂತ ಉಸ್ಕೃಷ್ಟ ನಿಲುವು, ವಿಶಾಲ ನೋಟ, ಉದಾರ ಚಿಂತನೆ ಹೊಂದಿದ್ದ ವೇಮನರು ವಿಶ್ವಮಾನವತೆ ಕುರಿತ ಸಂದೇಶ ಅವರ ಕೃತಿಗಳಲ್ಲಿ ಕಾಣಬಹುದಾಗಿದೆ. ಸಹೋದರ ಭಾವ, ವಿಶ್ವಕುಟುಂಬ ಮತ್ತು ದೇಶಪ್ರೇಮ, ಮತ- ಭಾಷೆ- ಪಂಥಗಳ ಎಲ್ಲೆ ಮೀರಿದ ಅವರ ಚಿಂತನೆ, ಸ್ಪಷ್ಟ ನಿಲುವು ಅಸಾಮಾನ್ಯವಾದುದ್ದಾಗಿದೆ. ವೇಮನರ ಅದ್ಭುತ ಆಲೋಚನೆ, ಉನ್ನತ ಔದಾರ್ಯ, ಅವರ ವಿಚಾರ ವಿಷಯಗಳ ವ್ಯಾಪ್ತಿ ಹಿರಿದಾಗಿದೆ. ಸ್ವಾನುಭವವೇ ಅವರನ್ನು ಮಹಾನುಭಾವರನ್ನಾಗಿಸಿದೆ- ಚನ್ನಬಸಪ್ಪ, ಶಾಸಕ, ಶಿವಮೊಗ್ಗ ಕ್ಷೇತ್ರ
- - --19ಎಸ್‌ಎಂಜಿಕೆಪಿ03:
ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಹಾಯೋಗಿ ವೇಮನ ಜಯಂತಿಯನ್ನು ಶಾಸಕ ಎಸ್.ಎನ್.ಚನ್ನಬಸಪ್ಪ ಉದ್ಘಾಟಿಸಿದರು.