ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ವೆಂಕಟರಮಣಪ್ಪ

KannadaprabhaNewsNetwork |  
Published : May 31, 2026, 01:30 AM IST
ಫೋಟೋ 30ಪಿವಿಡಿ1ಪಾವಗಡ,ಮಾಜಿ ಸಚಿವ ವೆಂಕಟರಮಣಪ್ಪ ನಿಧನರಾದ ಹಿನ್ನಲೆಯಲ್ಲಿ ನಿಕಟಪೂರ್ವ ಸಿಎಂ ಸಿದ್ದರಾಮಯ್ಯ,ಸಚಿವರಾದ ಕೆ.ಜೆ.ಜಾರ್ಜ್‌,ಜಮೀರ್‌ ಆಹಮ್ಮದ್‌,ಕೆ.ಎನ್‌.ರಾಜಣ್ಣ ಯತೀಂದ್ರ ಸಿದ್ದರಾಮಯ್ಯ ಇತರೆ ಗಣ್ಯರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಸಂತಾಪ ವ್ಯಕ್ತಪಡಿಸಿದರು.ಫೋಟೋ 30ಪಿವಿಡಿ2ಮಾಜಿ ಸಚಿವರಾದ ವೆಂಕಟರಮಣಪ್ಪ ನಿಧನರಾಗಿದ್ದ ಹಿನ್ನಲೆಯಲ್ಲಿ ಅವರ ಭಾವಚಿತ್ರಕ್ಕೆ ನಿಕಟಪೂರ್ವ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರಾದ ಕೆ.ಜೆ.ಜಾರ್ಜ್‌ ಮತ್ತು ಜಮೀರ್‌ ಆಹಮ್ಮದ್‌ ಪುಷ್ಪಾ ನಮನ ಸಲ್ಲಿಸಿದರು.ಫೋಟೋ 30ಪಿವಿಡಿ3ಪಾವಗಡ,ಮಾಜಿ ಸಚಿವರಾದ ವೆಂಕಟರಮಣಪ್ಪ ನಿಧನ,ನಿಕಟಪೂರ್ವ ಸಿಎಂ ಸಿದ್ದರಾಮಯ್ಯ ಸುದ್ದಿಗಾರರ ಜತೆ ಮಾತನಾಡಿ ಸಂತಾಪ ವ್ಯಕ್ತಪಡಿಸಿದರು. | Kannada Prabha

ಸಾರಾಂಶ

ಮಾಜಿ ಸಚಿವ ವೆಂಕಟರಮಣಪ್ಪ ಅವರ ನಿಧನ ಅತ್ಯಂತ ನೋವು ತಂದಿದೆ. ಇವರ ಸಾವಿನಿಂದ ವೈಯಕ್ತಿಕ ಹಾಗೂ ಕರ್ನಾಟಕ ರಾಜ್ಯಕ್ಕೆ ಅಪಾರ ನಷ್ಟ ಉಂಟಾಗಿದೆ ಎಂದು ಹಂಗಾಮಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಕನ್ನಡಪ್ರಭವಾರ್ತೆ ಪಾವಗಡ

ಮಾಜಿ ಸಚಿವ ವೆಂಕಟರಮಣಪ್ಪ ಅವರ ನಿಧನ ಅತ್ಯಂತ ನೋವು ತಂದಿದೆ. ಇವರ ಸಾವಿನಿಂದ ವೈಯಕ್ತಿಕ ಹಾಗೂ ಕರ್ನಾಟಕ ರಾಜ್ಯಕ್ಕೆ ಅಪಾರ ನಷ್ಟ ಉಂಟಾಗಿದೆ ಎಂದು ಹಂಗಾಮಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ಮಾಜಿ ಸಚಿವ ವೆಂಕಟರಮಣಪ್ಪ ನಿಧನರಾಗಿದ್ದ ಹಿನ್ನೆಲೆಯಲ್ಲಿ ಶನಿವಾರ ಹೆಲಿಕ್ಯಾಪ್ಟರ್‌ನಲ್ಲಿ ಪಾವಗಡ ನಗರಕ್ಕೆ ಆಗಮಿಸಿದ್ದು ಅಲ್ಲಿಂದ ಕಾರಿನಲ್ಲಿ 30 ಕಿಮೀ ದೂರದ ತಾಲೂಕಿನ ಹನುಮಂತನಹಳ್ಳಿಯ ತೋಟದ ಮನೆಗೆ ತೆರಳಿ, ಮಾಜಿ ಸಚಿವ ವೆಂಕಟರಮಣಪ್ಪ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ವೆಂಕಟರಮಣಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾನಮನ ಸಲ್ಲಿಸಿದ ಬಳಿಕ, ಮಾದ್ಯಮಗಳ ಜತೆ ಮಾತನಾಡಿದ ಸಿದ್ದರಾಮಯ್ಯ, ಈ ಭಾಗದ ಹಿರಿಯ ಮುಖಂಡ, ಮಾಜಿ ಸಚಿವ ವೆಂಕಟರಮಣಪ್ಪ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಹೆಚ್ಚು ನೋವಾಯಿತು. ಪಾವಗಡ ವಿಧಾನ ಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿ,ಎರಡು ಭಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ನನ್ನ ಬಗ್ಗೆ ಅವರಿಗೆ ಹೆಚ್ಚಿನ ಪ್ರೀತಿ ಕಾಳಜಿ ಹಾಗೂ ಅಭಿಮಾನವಿತ್ತು. ಕ್ಷೇತ್ರದ ಬಗ್ಗೆ ಏನೆ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ತರುತ್ತಿದ್ದರು. ಅವರ ಬಗ್ಗೆ ನನಗೂ ಸಹ ಅಷ್ಟೇ ಅಭಿಮಾನ, ಗೌರವ, ಪ್ರೀತಿ ಇತ್ತು. ದಲಿತ ಮತ್ತು ತಳ ಸಮುದಾಯದ ಪ್ರಗತಿಗೆ ಹೆಚ್ಚು ಕಾಳಜಿವಹಿಸಿ ಕೆಲಸ ಮಾಡುತ್ತಿದ್ದರು. ರೈತರ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು. ರೈತರ ಸಮಸ್ಯೆ ಕುರಿತು ಧ್ವನಿ ಎತ್ತಿ ವಿವಿಧ ಯೋಜನೆ ಅಡಿ ಅವರಿಗೆ ಅನುಕೂಲ ಕಲ್ಪಿಸಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಪುತ್ರನನ್ನು ಶಾಸಕರಾಗಿ ಮಾಡಬೇಕೆಂಬ ಹಿನ್ನೆಲೆಯಲ್ಲಿ ಎಚ್‌.ವಿ.ವೆಂಕಟೇಶ್‌ರಿಗೆ ಕಾಂಗ್ರೆಸ್ ನಿಂದ ಟಿಕೆಟ್‌ ನೀಡಿ ಗೆಲುವಿಗೆ ಸಹಕರಿಸಲಾಗಿತ್ತು. ವೆಂಕಟರಮಣಪ್ಪ ನಡೆದ ಪ್ರಾಮಾಣಿಕ ಹಾದಿಯಲ್ಲಿ ಶಾಸಕ ಎಚ್‌.ವಿ.ವೆಂಕಟೇಶ್‌ ನಡೆಯಲಿರುವ ವಿಶ್ವಾಸವಿದೆ. ಅವರಂತೆಯೆ ಉತ್ತಮ ಮಾದರಿ ನಾಯಕರಾಗಿ ನಡೆಯಬೇಕು. ಎಚ್‌.ವಿ.ವೆಂಕಟೇಶ್‌ ಸಹ ಜನಪರ ಕಾಳಜಿ ಹಾಗೂ ಸೇವಾಮನೋಭಾವುಳ್ಳ ಉತ್ತಮ ವ್ಯಕ್ತಿ, ವೆಂಕಟೇಶ್‌ ಬಗ್ಗೆ ಹೆಚ್ಚಿನ ಪ್ರೀತಿ ಹೊಂದಲಾಗಿದೆ ಎಂದರು. ಹೃದಯಾಘಾತದಿಂದ ಮಾಜಿ ಸಚಿವ ವೆಂಕಟರಮಣಪ್ಪ ನಿಧನರಾಗಿದ್ದು, ಇನ್ನೂ 10ವರ್ಷಗಳ ಕಾಲ ನಮ್ಮ ಜತೆ ಇರಬೇಕಿತ್ತು.ವಿ ಧಿ ಆಟದ ಮುಂದೆ ನಾವೆಲ್ಲ ನೆಪ ಮಾತ್ರ, ಹೀಗಾಗಿ,ವೆಂಕಟರಮಣಪ್ಪ ನಿಧನದಿಂದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಅಘಾತ ಉಂಟಾಗಿದೆ. ಅವರ ಸಾವಿನಿಂದ ದುಃಖ ಭರಿಸುವ ಶಕ್ತಿ ಕುಟುಂಬಕ್ಕೆ ಸಿಗಲಿ. ವೆಂಕಟರಮಣಪ್ಪ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸುವುದಾಗಿ ಹೇಳಿದರು.

ಈ ವೇಳೆ ಕೆ.ಜೆ.ಜಾರ್ಜ್‌,ವಸತಿ ಸಚಿವ ಜಮೀರ್‌ ಆಹಮ್ಮದ್‌, ಮಾಜಿ ಸಚಿವ ಕೆ.ಎನ್‌.ರಾಜಣ್ಣ, ಸಂಸದ ಗೋವಿಂದ ಎಂ.ಕಾರಜೋಳ ಅವರು ಅಂತಿಮ ದರ್ಶನ ಪಡೆದು ಆತ್ಮಕ್ಕೆ ಶಾಂತಿ ಕೋರಿದರು.

ಜಿಲ್ಲಾಧಿಕಾರಿ ಶುಭಕಲ್ಯಾಣ್‌, ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಬಿಜೆಪಿಯ ವೈ.ಎ.ನಾರಾಯಣಸ್ವಾಮಿ, ಮಾಜಿ ಸಂಸದ ಜನಾರ್ಧನಸ್ವಾಮಿ, ಮಾಜಿ ಸಚಿವ ರಘುವೀರರೆಡ್ಡಿ, ಎಸ್‌.ಪಿ.ಮುದ್ದಹನುಮೇಗೌಡ, ಬಿಜೆಪಿ ಹಿರಿಯ ಮುಖಂಡರಾದ ಡಾ.ಜಿ.ವೆಂಕಟರಾಮಯ್ಯ,ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಕಡಮಲಕುಂಟೆ ಶೇಷಗಿರಿಯಪ್ಪ, ನಾರಾಯಣಪ್ಪ, ಸಾವಿರಾರು ಸಂಖ್ಯೆಯ ಮುಖಂಡರು ಮತ್ತು ಕಾರ್ಯಕರ್ತರು ಆಗಮಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿ.ಕೆ.ಶಿವಕುಮಾರ್‌ಗೆ ಮುಖ್ಯಮಂತ್ರಿ ಗಾದಿ: ಹರಕೆ ತೀರಿಸಿದ ಅಭಿಮಾನಿ
ನಾಳೆಯಿಂದ ಶಾಲೆ ಆರಂಭ