ವಿಜೃಂಭಣೆಯಿಂದ ನಡೆದ ವೆಂಟೇಶ್ವರ ರಥೋತ್ಸವ

KannadaprabhaNewsNetwork |  
Published : Mar 28, 2026, 03:45 AM IST
ಶುಕ್ರವಾರ ವೆಂಕಟೇಶ್ವರ ರಥೋತ್ಸವ ಅದದೂರಿಯಿಂದ ನಡೆಯಿತು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ರಾಮದುರ್ಗ ರಾಮನವಮಿ ಮಾರನೇ ದಿನವಾದ ಶುಕ್ರವಾರ ಸಹಸ್ರಾರು ಜನ ಭಕ್ತರ ಸಮ್ಮುಖದಲ್ಲಿ ಪಟ್ಟಣದ ಮಲಪ್ರಭಾ ನದಿಯ ದಂಡೆಯ ಮೇಲಿರುವ ವೆಂಕಟೇಶ್ವರ ದೇವರ ಜಾತ್ರೆ ಶೃದ್ಧಾಭಕ್ತಿಯಿಂದ ಜರುಗಿತು.ಬೆಳಿಗ್ಗೆ 9.20ಕ್ಕೆ ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ, ತಹಸೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ, ಪುರಸಭೆ ಮಾಜಿ ಅಧ್ಯಕ್ಷರಾದ ಸುರೇಶ ಪತ್ತೇಪೂರ, ರಾಜು ಮಾನೆ, ಜಾತ್ರಾ ಸಮಿತಿ, ಬಿಜೆಪಿ ಅಧ್ಯಕ್ಷ ಡಾ.ಕೆ.ವಿ.ಪಾಟೀಲ, ಸದಸ್ಯರಾದ ಗಿರೀಶ ನೇಮಗೌಡ ಸೇರಿದಂತೆ ಅನೇಕ ಗಣ್ಯರು ರಥದ ಗಾಲಿಗಳಿಗೆ ತೆಂಗಿನ ಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ರಾಮನವಮಿ ಮಾರನೇ ದಿನವಾದ ಶುಕ್ರವಾರ ಸಹಸ್ರಾರು ಜನ ಭಕ್ತರ ಸಮ್ಮುಖದಲ್ಲಿ ಪಟ್ಟಣದ ಮಲಪ್ರಭಾ ನದಿಯ ದಂಡೆಯ ಮೇಲಿರುವ ವೆಂಕಟೇಶ್ವರ ದೇವರ ಜಾತ್ರೆ ಶೃದ್ಧಾಭಕ್ತಿಯಿಂದ ಜರುಗಿತು.ಬೆಳಿಗ್ಗೆ 9.20ಕ್ಕೆ ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ, ತಹಸೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ, ಪುರಸಭೆ ಮಾಜಿ ಅಧ್ಯಕ್ಷರಾದ ಸುರೇಶ ಪತ್ತೇಪೂರ, ರಾಜು ಮಾನೆ, ಜಾತ್ರಾ ಸಮಿತಿ, ಬಿಜೆಪಿ ಅಧ್ಯಕ್ಷ ಡಾ.ಕೆ.ವಿ.ಪಾಟೀಲ, ಸದಸ್ಯರಾದ ಗಿರೀಶ ನೇಮಗೌಡ ಸೇರಿದಂತೆ ಅನೇಕ ಗಣ್ಯರು ರಥದ ಗಾಲಿಗಳಿಗೆ ತೆಂಗಿನ ಕಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಮಲಪ್ರಭಾ ನದಿಯ ಪಕ್ಕದ ಭವ್ಯ ದೇವಸ್ಥಾನದಿಂದ ಎಡಕ್ಕೆ ಹನಮಂತ ದೇವಸ್ಥಾನದ ತನಕ ಉತ್ಸವ ಮೂರ್ತಿಯನ್ನು ಹೊತ್ತ ಕಲ್ಲಿನ ತೇರನ್ನು ಭಕ್ತಿಭಾವದಿಂದ ಎಳೆದು ತಂದರು. ಅಲ್ಲಿ ಸುಮಂಗಲೆಯರು ಆರತಿ ಎತ್ತಿ ಮೂರ್ತಿಗಳಿಗೆ ಪೂಜೆ ಸಲ್ಲಿಸಿದರು. ಭಕ್ತರು ರಥದ ಕಡೆಗೆ ಬಾಳೆಹಣ್ಣು, ಹೂವು, ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು. ಪಟ್ಟಣ ಮಾತ್ರವಲ್ಲದೇ ವಿವಿಧ ಗ್ರಾಮಗಳಿಂದ ಬಂದಿದ್ದ ಸಹಸ್ರಾರು ಭಕ್ತರು, ಮಹಿಳೆಯರು, ಮಕ್ಕಳು ಜಾತ್ರೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.ಹನಮಂತ ದೇವರ ಗುಡಿಯ ಹತ್ತಿರ ಕೇವಲ ಅರ್ಧ ಗಂಟೆಯಲ್ಲಿ ತಂದು ರಥವನ್ನು ನಿಲ್ಲಿಸಲಾಯಿತು. ಸುಮಾರು 30 ಡಿಗ್ರಿ ಇಳಿಜಾರಿನಲ್ಲಿ ವಾಲಿದ ತೇರನ್ನು ಭೋವಿ ಸಮಾಜದವರು ಕಲ್ಲಿನ ಗಾಲಿಗಳಿಗೆ ಸನ್ನೆಗೋಲು ಹಾಕಿ ಸಂಪೂರ್ಣ ತೇರನ್ನು ಗುಡಿಯ ಕಡೆಗೆ ತಿರುಗಿಸುವ ಪ್ರಕ್ರಿಯೆ ನಡೆಸಿದರು. ಈ ಕಾರ್ಯಕ್ಕೆ ಸುಮಾರು ಒಂದೂವರೆ ಗಂಟೆಗಳ ಕಾಲ 20-30 ಜನ ನಿರಂತರ ಶ್ರಮಿಸಿದರು. ಈ ರೀತಿಯಾಗಿ ರಥವನ್ನು ತಿರುಗಿಸಿ ನಿಲ್ಲಿಸುವುದು ರಾಮದುರ್ಗ ಪಟ್ಟಣದಲ್ಲಿ ಮಾತ್ರ ನಡೆಯುತ್ತಿದೆ. ಕಳೆದ 8 ದಶಕಗಳಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ. ಅದರಲ್ಲೂ ಬೆಳಗಿನ ವೇಳೆಯಲ್ಲಿ ರಥೋತ್ಸವ ನಡೆಯುವುದು ಮತ್ತೊಂದು ವಿಶೇಷವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚರಂತಿಮಠ ಗೆಲುವಿಗೆ ಪೂರಕ ವಾತಾವರಣ: ಜಗದೀಶ ಶೆಟ್ಟರ
ಚುನಾವಣೆ ನಿಯಮ ಕಟ್ಟುನಿಟ್ಟಾಗಿ ಪಾಲಿಸಿ: ಪಾರುಲ್ ಪಟವಾರಿ