ಬಾಗಲಕೋಟೆ ನಗರದ ಶಿವಾನಂದ ಜೀನದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಅಮೀನಗಡ ಹಾಗೂ ಶಿರಗುಪ್ಪಿ ಭಾಗಗಳ ಕಾಂಗ್ರೆಸ್ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಗರದ ಶಿವಾನಂದ ಜೀನದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಅಮೀನಗಡ ಹಾಗೂ ಶಿರಗುಪ್ಪಿ ಭಾಗಗಳ ಕಾಂಗ್ರೆಸ್ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾದರು.

ಈ ವೇಳೆ ಸಂಸದ ಜಗದೀಶ್ ಶೆಟ್ಟರ್ ಮಾತನಾಡಿ, ಬಾಗಲಕೋಟೆ ಮತಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠ ಅವರು ಅಪಾರ ಕೊಡುಗೆ ನೀಡಿದ್ದಾರೆ. ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವುದರ ಜೊತೆಗೆ ಮುಳುಗಡೆ ಸಂತ್ರಸ್ತರಿಗೆ ಸಹಾಯ ಮಾಡಿರುವುದು ಗಮನಾರ್ಹವಾಗಿದೆ ಎಂದು ವಿವರಿಸಿದರು.

ಜನಸಾಮಾನ್ಯರ ದನಿಯಾಗಿ ಜನಪರ ಆಡಳಿತ ನಡೆಸುತ್ತಿರುವ ಚರಂತಿಮಠ ಅವರ ಕಾರ್ಯಶೈಲಿ ಮೆಚ್ಚಿ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರುತ್ತಿದ್ದಾರೆ. ಇದರಿಂದ ಬಿಜೆಪಿ ಇನ್ನಷ್ಟು ಬಲಿಷ್ಠವಾಗುತ್ತಿದೆ. ಕ್ಷೇತ್ರದಲ್ಲಿ ಚರಂತಿಮಠ ಅವರ ಗೆಲುವಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಿದ್ದು, ಎಲ್ಲರೂ ಅವರ ಗೆಲುವಿಗಾಗಿ ಶ್ರಮಿಸೋಣ ಎಂದು ಕರೆ ನೀಡಿದರು.

ಮಾಜಿ ಸಚಿವ ಬಿ. ಶ್ರೀರಾಮುಲು ನೇತೃತ್ವದಲ್ಲಿ ನಡೆದ ಈ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠ, ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ, ಶರಣು ತಳ್ಳಿಕೇರಿ, ರಾಜು ನಾಯ್ಕರ್, ಗ್ರಾಮೀಣ ಅಧ್ಯಕ್ಷ ಸುರೇಶ ಕೋಣ್ಣೂರ, ವಿಜಯಕುಮಾರ, ಕೊಣ್ಣೂರ, ಬಾಬು ಛಬ್ಬಿ, ಸಂತೋಷ ತುಂಗಳ, ಸುಜಾತಾ ತತ್ರಾಣಿ, ಬಸವರಾಜ ಬೇವೂರ, ಪುಂಡಲೀಕ್ ರಕ್ಕಸಗಿ, ರವಿ ತುಂಬಗಿ, ಗಣೇಶ ಗುಡ್ಡದ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶಿವಚಾರ ಸಮಾಜದ ಅಧ್ಯಕ್ಷ ಬಿ. ಎಸ್. ನೀಡಗುಂದಿ, ರಮೇಶ ಬಸರಕೋಡ, ಮಾಗುಂಡಪ್ಫ ಮುದ್ದೆಬಿಹಾಳ, ಚಂದಶೇಖರ ಬಳಬಟ್ಟಿ, ಶೇಖಪ್ಪ ಅಣಗಿ, ರೂಪಾ ನಿಡಗುಂದಿ, ಶಂಕ್ರಮ್ಮ ನೀಡಗುಂದಿ, ದಾಕ್ಷಾಯಣಿ ಹೋಂಬಳ್ಳಿ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬಿಜಿಪಿ ಸೇರ್ಪಡೆಗೊಂಡರು.