ವಚನಗಳು ನಮಗೆ ಪೊಲಿಯೋ ಡ್ರಾಪ್ ಇದ್ದಂತೆ

KannadaprabhaNewsNetwork |  
Published : Nov 23, 2025, 01:30 AM IST
ಚಿತ್ರ 22ಬಿಡಿಆರ್54 | Kannada Prabha

ಸಾರಾಂಶ

Verses are like polio drops for us.

- ಸಾಮೂಹಿಕ ವಚನ ಪಾರಾಯಣದ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರುಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ವಚನಗಳು ನಮಗೆ ಪೊಲಿಯೋ ಡ್ರಾಪವಿದ್ದಂತೆ. ಪೋಲಿಯೊ ಡ್ರಾಪ್ ಹಾಕಿಸಿದರೆ ಮಕ್ಕಳು ಹೇಗೆ ಆರೋಗ್ಯವಂತರಾಗಿ ಬೆಳೆಯುತ್ತಾರೋ ಹಾಗೆ ವಚನಗಳು ನಮ್ಮ ಜೀವನದಲ್ಲಿ ಪ್ರತಿದಿನ ಪಠಣ ಮಾಡುವುದರಿಂದ ನಮಗೆ ಯಾವುದೇ ರೀತಿಯ ಭಯ ಆತಂಕವಿರುವುದಿಲ್ಲ ಎಂದು ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಬಸವಕಲ್ಯಾಣದಲ್ಲಿ ನಡೆಯುವ 46ನೆಯ ಶರಣ ಕಮ್ಮಟ ಹಾಗೂ ಅನುಭವಮಂಟಪ ಉತ್ಸವ ನಿಮಿತ್ತ ನ.22ರಿಂದ 28ರವರೆಗೆ ಏಳು ದಿವಸಗಳ ನಡೆಯುವ ಸಾಮೂಹಿಕ ವಚನ ಪಾರಾಯಣದ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಬಸವಾದಿ ಶರಣರು ತಮ್ಮ ಪ್ರಾಣವನ್ನು ಕೊಟ್ಟು ವಚನಗಳ ರಕ್ಷಣೆ ಮಾಡಿದ್ದಾರೆ. ಅವರು ಕೊಟ್ಟ ಈ ವಚನಗಳು ನಾವು ಪ್ರತಿನಿತ್ಯ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಜೀವನ ಸಾಗಿಸೋಣ ಎಂದು ನುಡಿದರು.

ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಉದ್ಘಾಟಿಸಿ ಮಾತನಾಡಿ, ವಚನಗಳು ನಮ್ಮ ಜೀವನಕ್ಕೆ ಅತ್ಯ ಅಮೂಲ್ಯವಾದದ್ದು, ವಚನಗಳ ಪಠಣದಿಂದ ನಮ್ಮ ಜೀವನ ಸುಂದರವಾಗುತ್ತದೆ. ಮುಂದಿನ ಯುವ ಪೀಳಿಗೆಗೆ ವಚನಗಳ ಪರಿಚಯ ಮಾಡಿಸುವುದು ತುಂಬಾ ಅವಶ್ಯಕವಾಗಿದೆ. ಬಸವಾದಿ ಶರಣರು ತೋರಿಸಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ವಚನಗಳ ಪಠಣದಿಂದ ನಮ್ಮ ಜೀವನ ಪಾವನಗೊಳಿಸಿಕೊಳ್ಳಬೇಕೆಂದರು.

ಹುಲಸೂರಿನ ಡಾ.ಶಿವಾನಂದ ಸ್ವಾಮಿಗಳು, ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು, ಜಗದ್ಗುರು ಸಿದ್ಧರಾಮೇಶ್ವರ ಸ್ವಾಮಿಗಳು ಬಸವಕಲ್ಯಾಣ, ಡಾ.ಗಂಗಾಂಬಿಕಾ ಅಕ್ಕ, ಪ್ರಭುದೇವ ಸ್ವಾಮಿಗಳು ಗೋರ್ಟಾ, ಬಸವಲಿಂಗ ಸ್ವಾಮಿಗಳು, ಪಂಚಾಕ್ಷರಿ ಸ್ವಾಮಿಗಳು ಬೇಲೂರು, ಬಸವದೇವರು, ಪ್ರಭುಲಿಂಗದೇವರು, ಶಿವಬಸವದೇವರು, ಗಂಗಾಧರ ದೇವರು, ಸತ್ಯದೇವಿತಾಯಿ, ಗಾಯತ್ರಿತಾಯಿ, ಸುಗುಣಾದೇವಿತಾಯಿ, ಹಾಲಮ್ಮತಾಯಿ, ಸತ್ಯಕ್ಕ ತಾಯಿ, ಕಲ್ಯಾಣಮ್ಮತಾಯಿ ಸಮ್ಮುಖ ವಹಿಸಿದ್ದರು. ಸಾಮೂಹಿಕ ವಚನ ಪಾರಾಯಣ ಸೇವಾ ಸಮಿತಿ ಅಧ್ಯಕ್ಷ ರವಿ ಕೋಳಕೂರು ಸ್ವಾಗತಿಸಿದರು. ರಾಜು ಜುಬರೆ ನಿರೂಪಿಸಿದರು.

--

ಚಿತ್ರ 22ಬಿಡಿಆರ್54:

ಬಸವಕಲ್ಯಾಣದಲ್ಲಿ ನಡೆಯುವ 46ನೆಯ ಶರಣ ಕಮ್ಮಟ ಹಾಗೂ ಅನುಭವಮಂಟಪ ಉತ್ಸವ ನಿಮಿತ್ತ ನ. 22ರಿಂದ 28ರವರೆಗೆ ನಡೆಯುವ ಸಾಮೂಹಿಕ ವಚನ ಪಾರಾಯಣ ಶನಿವಾರ ಆರಂಭವಾಯಿತು.

--

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ಎಷ್ಟು ಕೇಸ್‌ ಸಿಬಿಐಗೆ ನೀಡಿದೆ? : ಸಿಎಂ
ರಾಷ್ಟ್ರಧ್ವಜ ತಯಾರಿಸ್ತಿ ದ್ದ ಕೈಗಳಲ್ಲೀಗ ಕೆಲಸವಿಲ್ಲ!