ಅಸ್ಮಿತಾ ಲೀಗ್‌ ಜಿಲ್ಲೆಯ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ

KannadaprabhaNewsNetwork |  
Published : Nov 23, 2025, 01:30 AM IST
ಚಿತ್ರ 22ಬಿಡಿಆರ್58 ಎ | Kannada Prabha

ಸಾರಾಂಶ

Asmita League is a good platform for the athletes of the district

* ಕ್ರೀಡೋತ್ಸವ

- ಧ್ವಜಾರೋಹಣ ನೆರವೇರಿಸಿ ಶಾಸಕ ಡಾ.ಬೆಲ್ದಾಳೆ ಅಭಿಮತ । 400ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗಿ: ಬಾಬು ವಾಲಿಕನ್ನಡಪ್ರಭ ವಾರ್ತೆ ಬೀದರ್‌

ಜಿಲ್ಲಾ ಅಥ್ಲೆಟಿಕ್ಸ್ ಅಸೋಶಿಯೇಷನ್ ಬಾಬು ವಾಲಿಯವರ ನೇತೃತ್ವದಲ್ಲಿ ಒಂದು ಒಳ್ಳೆಯ ಕೆಲಸ ಮಾಡುತ್ತಿದ್ದು, ಜಿಲ್ಲೆಯ ಕ್ರೀಡಾಪಟುಗಳಿಗೆ ಇದು ಒಂದು ಉತ್ತಮ ವೇದಿಕೆಯಾಗಿದೆ ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ನುಡಿದರು.

ಸ್ಪೋರ್ಟ್ಸ್ ಅಥಾರಿಟಿ ಇಂಡಿಯಾ, ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆ, ಖೇಲೋ ಇಂಡಿಯಾ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಅಥ್ಲೆಟಿಕ್ ಅಸೋಶಿಯೇಷನ್ ವತಿಯಿಂದ ನಗರದ ನೆಹರು ಕ್ರಿಡಾಂಗಣದಲ್ಲಿ ಅಸ್ಮಿತಾ ಲೀಗ್‌ಗೆ ಧ್ವಜಾರೋಹಣ ನಡೆಸಿಕೊಡುವ ಮೂಲಕ ಚಾಲನೆ ನೀಡಿ ಮಾತನಾಡಿ, ಜಿಲ್ಲಾ ಅಥ್ಲೆಟಿಕ್ಸ್ ಅಸೋಶಿಯೇಷನ್‌ನಿಂದ ಲಾಭ ಪಡೆದು ಕ್ರೀಡಾಪಟುಗಳು ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಬೇಕೆಂದು ಕ್ರೀಡಾಪಟುಗಳಿಗೆ ಹುರಿದುಂಬಿಸಿದರು.

ಮುಖ್ಯ ಅತಿಥಿಯಾಗಿದ್ದ ಶೈನಿ ಪ್ರದೀಪ ಗುಂಟಿ ಮಾತನಾಡಿ, ಬಾಲಕಿಯರು ಇಂತಹ ಆಯೋಜನೆಗಳ ಲಾಭ ಪಡೆದು ದೇಶ ವಿದೇಶದಲ್ಲಿ ತಮ್ಮ ಕ್ರೀಡಾ ಸಾಮರ್ಥ್ಯ ತೋರಿಸಿ ದೇಶಕ್ಕೆ ಒಂದು ಒಳ್ಳೆಯ ಹೆಸರು ತರಬೇಕೆಂದರು.

ಜ್ಞಾನಸುಧಾ ವಿದ್ಯಾಲಯದ ಅಧ್ಯಕ್ಷೆ ಪೂರ್ಣಿಮಾ ಜಾರ್ಜ್ ಮಾತನಾಡಿ, 2025 ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತದ ಮಹಿಳೆಯರನ್ನು ನೆನಪಿಸಿ ಕ್ರೀಡಾಪಟುಗಳಿಗೆ ಹುರಿದುಂಬಿಸಿ ಭಾರತದ ಮಹಿಳೆಯರು ಚಿನ್ನದ ಕಾಲುಗಳನ್ನು ತೆಗೆದುಕೊಂಡು ಹೋಗಿ ಚಿನ್ನದ ಪದಕ ಗೆದ್ದು ಬರುತ್ತಿದ್ದಾರೆ. ನಿಮಗೆ ಇನ್ನೂ ಬಹಳಷ್ಟು ಅವಕಾಶವಿದ್ದು, ನಿಮ್ಮ ಸಾಮರ್ಥ್ಯ ತೋರಿಸಿ ಒಳ್ಳೆಯ ಕೀಡಾಪಟುಗಳಾಗಿ ದೇಶಕ್ಕೆ ಒಳ್ಳೆಯ ಹೆಸರು ತರಬೇಕೆಂದರು.

ಅಸ್ಮಿತಾ ಲೀಗ್‌ನ ಅಧ್ಯಕ್ಷತೆ ವಹಿಸಿದ ಜಿಲ್ಲಾ ಅಥ್ಲೆಟಿಕ್ಸ್ ಅಸೋಶಿಯೇಷನ್ ಅಧ್ಯಕ್ಷ ಬಾಬು ವಾಲಿ ಪ್ರಾಸ್ತಾವಿಕ ಮಾತನಾಡಿ, ಜಿಲ್ಲೆಯ ಆಯಾ ತಾಲೂಕಿನಿಂದ 1200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಯಾ ಶಿಕ್ಷಣ ಸಂಸ್ಥೆಯಿಂದ ಆಗಮಿಸಿದ್ದ, ಒಟ್ಟು 400ಕ್ಕೂ ಹೆಚ್ಚು ಕ್ರೀಡಾಪಟುಗಳು ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ ಎಂದ ಅವರು, ಕ್ರೀಡೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಲು ಇದೊಂದು ದಾಪುಗಾಲು, ಇದು ಕೇಂದ್ರ ಸರ್ಕಾರದ ಬಹುದೊಡ್ಡ ಯೋಜನೆಯಾಗಿದೆ ಎಂದರು.

ಜಿಲ್ಲಾ ಅಥ್ಲೆಟಿಕ್ಸ್ ಅಸೋಶಿಯೇಷನ್ ಸದಸ್ಯರಾದ ಶಿವರಾಜ ಕಣಜಿ ಮಾತನಾಡಿ, ಲೀಗ್‌ನಲ್ಲಿ ಪಾಲ್ಗೊಂಡ ಕ್ರೀಡಾಪಟು ಆಯಾ ಸಂಸ್ಥೆಯಿಂದ ಬಂದ ತಂಡದ ವ್ಯವಸ್ಥಾಪಕರಿಗೆ ನಿಯಮಗಳನ್ನು ತಿಳಿಸಿದರು.

ಎನ್‌ಸಿಸಿ ಮತ್ತು ಆಯಾ ತಾಲ್ಲೂಕಿನಿಂದ ಆಗಮಿಸಿದ ಕ್ರೀಡಾಪಟುಗಳು ಭವ್ಯವಾದ ಪರೇಡ್ ನಡೆಸಿಕೊಟ್ಟರು. ಗ್ಲೋಬಲ್ ಸೈನಿಕ್ ಶಾಲೆಯ ಅಧ್ಯಕ್ಷ ಕರ್ನಲ್ ಶರಣಪ್ಪಾ ಸಿಕೇನಪೂರೆ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಪ್ರಮುಖರಾದ ರಜನೀಶ ವಾಲಿ, ಶಶಿ ಹೊಸಳ್ಳಿ, ಜಯರಾಜ ಖಂಡ್ರೆ, ಸುರೇಶ ಚೆನ್ನಶೆಟ್ಟಿ, ದೈಹಿಕ ಶಿಕ್ಷಣಾಧಿಕಾರಿ ಎಂಡಿ ಮುನಾಫ್, ಅನುಪಮಾ ಯರೋಳಕರ್, ಪ್ರತಿಭಾ ಚಾಮಾ, ಮಂಗಲಾ ಭಾಗವತ್, ಅರ್ಷಾ ಬೇಗಂ, ದೀಪಾ ಬಾಲೋಡೆ, ದೀಪಾ ಮೈಲಾರೆ, ಬಾಬು ದಾನಿ, ವಿಜಯಕುಮಾರ ಪಾಟೀಲ ಯರನಳ್ಳಿ, ಸುಧೀರ ರಾಗಾ, ಪ್ರಶಾಂತ ರಾಗಾ ನಿವೃತ್ತ ದೈಹಿಕ ಶಿಕ್ಷಕರಾದ ಶ್ರೀನಿವಾಸ ರೆಡ್ಡಿ, ದೈಹಿಕ ಶಿಕ್ಷಕರ ತಂಡ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.--

ಚಿತ್ರ 22ಬಿಡಿಆರ್58:

ಜಿಲ್ಲಾ ಅಥ್ಲೆಟಿಕ್ ಅಸೋಶಿಯೇಷನ್ ವತಿಯಿಂದ ನಗರದ ನೆಹರು ಕ್ರಿಡಾಂಗಣದಲ್ಲಿ ಅಸ್ಮಿತಾ ಲೀಗ್‌ಗೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಚಾಲನೆ ನೀಡಿದರು.

--ಚಿತ್ರ 22ಬಿಡಿಆರ್58 ಎ:

ಜಿಲ್ಲಾ ಅಥ್ಲೆಟಿಕ್ ಅಸೋಶಿಯೇಷನ್ ವತಿಯಿಂದ ನಗರದ ನೆಹರು ಕ್ರಿಡಾಂಗಣದಲ್ಲಿ ಅಸ್ಮಿತಾ ಲೀಗ್‌ ನಲ್ಲಿ ಹೈ ಜಂಪ್‌ ಸ್ಪರ್ಧೆಯಲ್ಲಿ ಪಾಲ್ಗೊಂಡ ಕ್ರೀಡಾಪಟು---

PREV

Recommended Stories

ತಂತ್ರಜ್ಞಾನವನ್ನು ಒಳ್ಳೆಯದಕ್ಕೆ ಬಳಸಿ: ಶಾಸಕ ಅಶೋಕ ಪಟ್ಟಣ
ಸೈಕ್ಲಿಂಗ್‌ ಪಟುಗಳಿಗೆ ಸಂವಿಧಾನ ಪಾಠ ಮಾಡಿದ ಸಚಿವ ಸಂತೋಷ ಲಾಡ್