ಹಿರಿಯ ರಂಗಭೂಮಿ ಕಲಾವಿದ ಶರಣಪ್ಪ ಮಾಸ್ಟರ್ ಚಿಂತನಳ್ಳಿ ನಿಧನ

KannadaprabhaNewsNetwork |  
Published : Mar 12, 2025, 12:50 AM IST
ಹಿರಿಯ ರಂಗಭೂಮಿ ಕಲಾವಿದ ಶರಣಪ್ಪ ಮಾಸ್ಟರ್ ಚಿಂತನಳ್ಳಿ | Kannada Prabha

ಸಾರಾಂಶ

Veteran theatre artist Sharanappa Master Chintanalli passes away

ಯಾದಗಿರಿ: ಜಿಲ್ಲೆಯ ವೃತ್ತಿ ಹಾಗೂ ಹವ್ಯಾಸಿ ರಂಗಭೂಮಿ ಕಲಾವಿದ, ಸಂಗೀತ ನಿರ್ದೇಶಕ, ಹಾಡುಗಾರ, ಕವಿ, ಹಿರಿಯ ಚೇತನ ಶರಣಪ್ಪ ಮಾಸ್ಟರ್ ಚಿಂತನಳ್ಳಿ (80) ನಗರದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿಯರು ಹಾಗೂ ಅಪಾರ ಬಂಧು ಬಳಗ, ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯಕ್ಕೆ ಈಡಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ನಗರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಸಂತಾಪ: ಮೃತರ ನಿಧನಕ್ಕೆ ವೃತ್ತಿ ರಂಗಭೂಮಿ ಕವಿ ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ಶರಣು ಎಸ್. ನಾಟೆಕರ್, ಪದಾಧಿಕಾರಿಗಳಾದ ಶ್ರೀನಿವಾಸರಡ್ಡಿ ಸಣ್ಣ ಸಂಭರ, ಮಹಾಂತಯ್ಯ ಸ್ವಾಮಿ ಖಾನಾಪೂರ, ಸಿದ್ದರಡ್ಡಿ ಬಂಕಲಗಿ, ಬಸವರಾಜ ಕ್ಯಾತನಾಳ, ಬಸವರಾಜ ಮಾಸ್ಟರ್ ಕಿಲ್ಲನಕೇರಾ, ಬಯಲಾಟ ಮಾಸ್ಟರ್ ಚಂದ್ರಶೇಖರಯ್ಯ ಸ್ವಾಮಿ, ಸಂಘದ ಗೌರವ ಸಲಹೆಗಾರರು ಹಾಗೂ ವೀರಭಾರತಿ ಪ್ರತಿಷ್ಠಾನ ಅಧ್ಯಕ್ಷ ವೈಜನಾಥ ಹಿರೇಮಠ, ಮಹಾದೇವ ದೊಡ್ಡಮನಿ, ಪರಮಾನಂದ ದೋರನಳ್ಳಿ, ಸುಭಾಷ ದೋರನಳ್ಳಿ, ವಸಿಮ್ ಸಾಬ್, ಮನೋಹರಸಾಬ್, ಬಾಬುರಡ್ಡಿ ಯಡ್ಡಳ್ಳಿ ಸೇರಿದಂತೆ ಜಿಲ್ಲೆಯ ಕಲಾವಿದರು ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ ಎಂದು ಶೋಕ ವ್ಯಕ್ತಪಡಿಸಿದ್ದು, ಸಂತಾಪ ಸೂಚಿಸಿದ್ದಾರೆ.

-----

11ವೈಡಿಆರ್‌7 : ಹಿರಿಯ ರಂಗಭೂಮಿ ಕಲಾವಿದ ಶರಣಪ್ಪ ಮಾಸ್ಟರ್ ಚಿಂತನಳ್ಳಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌