ಕನಕಪುರ: ನಗರಸಭೆಯ 5ನೇ ವಾರ್ಡ್‌ಗೆ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಜಯಭೇರಿ ಬಾರಿಸುವ ಮೂಲಕ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗ ಉಂಟಾಗಿದೆ.
ಜೆಡಿಎಸ್‌ನ ಲೋಕೇಶ್ 569 ಮತಗಳು, ಕಾಂಗ್ರೆಸ್‌ನ ಚಾಮರಾಜು 519 ಮತಗಳು, ಬಿಜೆಪಿಯ ಶಿವರುದ್ರ 18 ಮತಗಳು ನೋಟಾ 09 ಮತಗಳು ಚಲಾವಣೆಗೊಂಡಿದ್ದವು.
ನಗರಸಭೆಯಲ್ಲಿ ಕಾಂಗ್ರೆಸ್ ದುರಾಡಳಿತದಿಂದ ಬೇಸತ್ತ ಮತದಾರರು, ಜೆಡಿಎಸ್ಗೆ ಮತ ಕೊಟ್ಟು ಗೆಲ್ಲಿಸಿದ್ದಾರೆ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ನಾಗರಾಜು ಹಾಗೂ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಚಿನ್ನಸ್ವಾಮಿ ಹೇಳುತ್ತಾ, ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪರ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.ವಿಜೇತ ಅಭ್ಯರ್ಥಿ ಲೋಕೇಶ್ ಮಾತನಾಡಿ, ನನ್ನ ಗೆಲುವಿಗೆ ಹಗಲಿರುಳೆನ್ನದೆ ದುಡಿದ ಎಲ್ಲಾ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿ ಈ ಗೆಲುವು ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿದ್ದು ಈ ಫಲಿತಾಂಶ ಮರುಕಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಗರಸಭೆ 5ನೇ ವಾರ್ಡ್ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಲೋಕೇಶ್, ಕಾಂಗ್ರೆಸ್ ಆಭ್ಯರ್ಥಿ ಚಾಮರಾಜು ವಿರುದ್ಧ 50 ಮತಗಳ ಅಂತರದಿಂದ ಜಯಗಳಿಸಿದರು.