- 2 ಸಲ ಮೋಸವಾಗಿದೆ, ಈಗ ಮೋದಿ, ವಾಜಪೇಯಿ ಯಾವುದೇ ಅಲೆ ನಡೆಯೋದಿಲ್ಲ ಎಂದ ಶಾಸಕ
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದೆ ಎರಡು ಸಲ ಮೋಸವಾಗಿದ್ದು, ಈ ಸಲ ಯಾವುದೇ ಮೋದಿ, ವಾಜಪೇಯಿ ಅಲೆಗಳು ಕ್ಷೇತ್ರದಲ್ಲಿ ನಡೆಯಲ್ಲ. ಈ ಸಲ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಎಂಸಿಸಿ ಬಿ ಬ್ಲಾಕ್‌ನ ಐಎಂಎ ಭವನದಲ್ಲಿ ಮಂಗಳವಾರ ತಮ್ಮ ತಂದೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ತಮ್ಮ ಪತ್ನಿ, ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ, ಮಕ್ಕಳಾದ ಸಮರ್ಥ ಎಂ.ಶಾಮನೂರು, ಶ್ರೇಷ್ಠ ಎಂ.ಶಾಮನೂರು ಜೊತೆಗೆ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ದಾವಣಗೆರೆಯಲ್ಲಿ, ಸಿಎಂ ಸಿದ್ದರಾಮಯ್ಯ ಹೊನ್ನಾಳಿ, ಹರಿಹರದಲ್ಲಿ ಡಾ.ಪ್ರಭಾ ಪರ ಪ್ರಚಾರ ಮಾಡಿದ್ದಾರೆ. ರಾಜ್ಯದಲ್ಲಿ ಯಾವುದೇ ಮೋದಿ ಅಲೆಯಾಗಲೀ, ಬಿಜೆಪಿ ಅಲೆಯಾಗಲಿ ಇಲ್ಲ. ಇರುವೊಂದೇ ಭರವಸೆ ಅದು ಕಾಂಗ್ರೆಸ್ ಭರವಸೆ. ನಾವು ಈಡೇರಿಸಿರುವ ಗ್ಯಾರಂಟಿ ಹಾಗೂ ಅಭಿವೃದ್ಧಿ ಅಲೆ ಮಾತ್ರ ಇದೆ ಎಂದು ತಿಳಿಸಿದರು.
ಸಿದ್ಧೇಶ್ವರ ವಿರುದ್ಧ ವಾಗ್ದಾಳಿ:
ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮತದಾನವು ಪ್ರತಿಯೊಬ್ಬರ ಸಂವಿಧಾನಬದ್ಧ ಹಕ್ಕು. ದಾವಣಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ಸಾಧಿಸಲಿದೆ. ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರ ಪರಿಶ್ರಮಕ್ಕೆ ಮತದಾರರು ಸ್ಪಂದಿಸಿ, ಕಾಂಗ್ರೆಸ್ ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
- - - ಬಾಕ್ಸ್ 2 ಲಕ್ಷ ಮತ ಅಂತರದಿಂದ ಗೆಲ್ತೇವೆ: ಶಾಮನೂರು
ನಗರದ ಎಂಸಿಸಿ ಬಿ ಬ್ಲಾಕ್ ಐಎಂಎ ಸಭಾಂಗಣದ ಮತಗಟ್ಟೆಯಲ್ಲಿ ಮಂಗಳವಾರ ಪುತ್ರ, ಸೊಸೆ, ಮೊಮ್ಮಕ್ಕಳ ಜೊತೆ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಕಾಂಗ್ರೆಸ್ ಹಣದ ಹೊಳೆ ಹರಿಸಿದೆ ಎಂಬುದಾಗಿ ಸಂಸದ ಸಿದ್ದೇಶ ಆರೋಪಿಸಿದ್ದಾನೆ. ಅವನೇನು ಕತ್ತೆ ಕಾಯುತ್ತಿದ್ದನಾ? ಅವನಿಗೆ ಹೋಗಿ ಹೇಳಿ, ನಿಮ್ಮ ಮಾವ ನಿಮಗೆ ಕತ್ತೆ ಕಾಯೋಕೆ ಹೋಗು ಅಂದಾ ಅಂತಾ ಎಂಬುದಾಗಿ ಏಕವಚನದಲ್ಲೇ ಸಂಸದ ಸಿದ್ದೇಶ್ವರ ವಿರುದ್ಧ ವಾಗ್ದಾಳಿ ನಡೆಸಿದರು.
ದಾವಣಗೆರೆ ಐಎಂಎ ಸಭಾಂಗಣದ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ, ಪತಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಮಕ್ಕಳಾದ ಸಮರ್ಥ, ಶ್ರೇಷ್ಠ ಹಾಗೂ ಕುಟುಂಬ ಸದಸ್ಯರು, ಬೆಂಬಲಿಗರು.
-7ಕೆಡಿವಿಜಿ6:
ದಾವಣಗೆರೆ ಐಎಂಎ ಸಭಾಂಗಣದ ಮತಗಟ್ಟೆಯಲ್ಲಿ ಮತ ಚಲಾಯಿಸಿದ ನಂತರ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಪತ್ನಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಸುದ್ದಿಗಾರರೊಂದಿಗೆ ಮಾತನಾಡಿದರು.