ಅರಬಾವಿ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

KannadaprabhaNewsNetwork |  
Published : Jun 10, 2024, 02:05 AM IST
ಮೂರನೇ ಭಾರಿಗೆ ಭಾರತದ ಪ್ರಧಾನಿಪಟ್ಟ ಅಲಂಕರಿಸಿದ ನರೇಂದ್ರ ಮೋದಿ ಅವರು ಪ್ರಮಾಣ ವಚಣ ಸ್ವೀಕರಿಸುತ್ತಿದಂತೆ ಮೂಡಲಿಯಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.  | Kannada Prabha

ಸಾರಾಂಶ

3ನೇ ಬಾರಿಗೆ ಭಾರತದ ಪ್ರಧಾನಿಪಟ್ಟ ಅಲಂಕರಿಸಿದ ನರೇಂದ್ರ ಮೋದಿ ಅವರು ಪ್ರಮಾಣ ವಚಣ ಸ್ವೀಕರಿಸುತ್ತಿದಂತೆ ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಅರಬಾವಿ ಮಂಡಲ ಬೆಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ ನೇತೃತೃದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ3ನೇ ಬಾರಿಗೆ ಭಾರತದ ಪ್ರಧಾನಿಪಟ್ಟ ಅಲಂಕರಿಸಿದ ನರೇಂದ್ರ ಮೋದಿ ಅವರು ಪ್ರಮಾಣ ವಚಣ ಸ್ವೀಕರಿಸುತ್ತಿದಂತೆ ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಅರಬಾವಿ ಮಂಡಲ ಬೆಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ ನೇತೃತೃದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು. ಈ ಸಮಯದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಕುಡಚಿ ಮಾತನಾಡಿ, ಭಾರತ ದೇಶವನ್ನು ವಿಕಸಿತ ಭಾರತವನ್ನಾಗಿ ಮುನ್ನಡೆಸಲು ಮೂರನೇ ಭಾರಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವು ಸಂತಸದ ವಿಷಯ ಎಂದರು. ವಿಜಯೋತ್ಸವದಲ್ಲಿ ಪುರಸಭೆ ಮಾಜಿ ಉಪಾಧ್ಯಕ್ಷ ರವೀಂದ್ರ ಸೋನವಾಲಕರ, ಪುರಸಭೆ ಸದಸ್ಯ ಹನಮಂತ ಗುಡ್ಲಮನಿ, ಪಾಂಡು ಮಹೇಂದ್ರಕರ, ಡಾ.ಬಿ.ಎಂ.ಪಾಲಭಾಂವಿ, ಕುಮಾರ ಗಿರಡ್ಡಿ, ಕೇದಾರಿ ಭಸ್ಮೇ, ಹನಂತ ಸತರಡ್ಡಿ, ಜಗದೀಶ ತೇಲಿ, ಮಲ್ಲಪ್ಪ ನೇಮಗೌಡ್ರ, ಶಿವಬಸು ಶುಣಧೋಳಿ, ಅನ್ನಪ್ಪ ಅಕ್ಕನವರ, ಪರಪ್ಪ ಹಡಪದ, ಮಲ್ಲು ಯಾದವಾಡ, ಚೇತನ ಹೊಸಕೋಟಿ, ರೇವಪ್ಪ ಕೋರಿಶೆಟ್ಟಿ, ಶ್ರೀಶೈಲ್ ಗಾಣಿಗೇರ, ಶೀತಲ ಬೇವಿನಕಟ್ಟಿ, ಭೀಮಶಿ ಢವಳೇಶ್ವರ, ಸೋಮು ಹಿರೇಮಠ, ಪ್ರಕಾಶ ಕಾಳಪ್ಪಗೋಳ, ಈರಪ್ಪ ಚಂದರಗಿ ಸೇರದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''