ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮುದ್ದಂಡ ಹಾಕಿ ಕಪ್‌ನ ಭಾನುವಾರ ನಡೆದ ಪಂದ್ಯದಲ್ಲಿ ಕೂತಂಡ, ಅಮ್ಮಣಿಚಂಡ, ಮಂಡೇಪಂಡ ತಂಡಗಳು ಗೆಲವು ಸಾಧಿಸಿತು.ಕೂತಂಡ ಮತ್ತು ಪೆಮ್ಮಂಡ ತಂಡಗಳ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕೂತಂಡ ತಂಡ ಜಯ ಸಾಧಿಸಿತು. ಕೂತಂಡ ಪರ ಸಂತೋಷ್ ಮೇದಪ್ಪ 1 ಗೋಲು ದಾಖಲಿಸಿದರು. ಪೆಮ್ಮಂಡ ಸುಹಾನ್ ಮಂದಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಅಮ್ಮಣಿಚಂಡ ಮತ್ತು ಬೊವ್ವೇರಿಯಂಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಅಮ್ಮಣಿಚಂಡ ಜಯ ಸಾಧಿಸಿತು. ಅಮ್ಮಣಿಚಂಡ ಪ.ರ ವಿಘ್ನೇಶ್ ಬೋಪಣ್ಣ 1 ಗೋಲು ದಾಖಲಿಸಿದರು. ಬೊವ್ವೇರಿಯಂಡ ಗ್ಯಾನ್ ಉತ್ತಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.ನೆರವಂಡ ಮತ್ತು ಮಂಡೇಪಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 4-3 ಗೋಲುಗಳ ಅಂತರದಲ್ಲಿ ಮಂಡೇಪಂಡ ಗೆಲುವು ದಾಖಲಿಸಿತು. ನೆರವಂಡ ಬೋಪಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಸಣ್ಣುವಂಡ ಮತ್ತು ಸೋಮೆಯಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ತಲಾ 1 ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 4-2 ಗೋಲುಗಳ ಅಂತರದಲ್ಲಿ ಸಣ್ಣುವಂಡ ತಂಡ ಗೆಲುವು ದಾಖಲಿಸಿತು. ಸಣ್ಣುವಂಡ ಪರ ಪೊನ್ನಣ್ಣ ಹಾಗೂ ಸೋಮೆಯಂಡ ಪರ ಪುನೀತ್ ತಲಾ 1 ಗೋಲು ದಾಖಲಿಸಿದರು. ಸೋಮೆಯಂಡ ಅಪ್ಪಚ್ಚು ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.ಇಟ್ಟಿರ ಮತ್ತು ಕಾಂಡಂಡ ನಡುವಿನ ಪಂದ್ಯದಲ್ಲಿ ತಲಾ 1 ಗೋಲುಗಳ ಮೂಲಕ ಎರಡೂ ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 4-3 ಗೋಲುಗಳ ಅಂತರದಲ್ಲಿ ಕಾಂಡಂಡ ತಂಡ ಜಯ ಸಾಧಿಸಿತು. ಕಾಂಡಂಡ ಪರ ಆದಿತ್ಯ ಅಪ್ಪಣ್ಣ ಹಾಗೂ ಇಟ್ಟಿರ ಪರ ಭವಿನ್ ತಲಾ 1 ಗೋಲು ದಾಖಲಿಸಿದರು. ಭವಿನ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕರವಂಡ ಮತ್ತು ಕಂಬೀರಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 3-2 ಗೋಲುಗಳ ಅಂತರದಲ್ಲಿ ಕರವಂಡ ಗೆಲುವು ದಾಖಲಿಸಿತು.