ವಿಧಾನ ಪರಿಷತ್ ಸದಸ್ಯ ಯೋಗೇಶ್ವರ್ ಭಾವ ಮಹದೇವಯ್ಯ ನಾಪತ್ತೆ

KannadaprabhaNewsNetwork |  
Published : Dec 03, 2023, 01:00 AM IST
ಪೊಟೋ೨ಸಿಪಿಟಿ೧: ಮಹದೇವಯ್ಯ | Kannada Prabha

ಸಾರಾಂಶ

ಚನ್ನಪಟ್ಟಣ: ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರ ಭಾವ ಮಹದೇವಯ್ಯ ಅವರು, ಚಕ್ಕೆರೆ ಗ್ರಾಮದಲ್ಲಿರುವ ತಮ್ಮ ಮನೆಯಿಂದ ಶನಿವಾರ ನಾಪತ್ತೆಯಾಗಿದ್ದಾರೆ.

ಚನ್ನಪಟ್ಟಣ: ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರ ಭಾವ ಮಹದೇವಯ್ಯ ಅವರು, ಚಕ್ಕೆರೆ ಗ್ರಾಮದಲ್ಲಿರುವ ತಮ್ಮ ಮನೆಯಿಂದ ಶನಿವಾರ ನಾಪತ್ತೆಯಾಗಿದ್ದಾರೆ.

ಸಿ.ಪಿ.ಯೋಗೇಶ್ವರ್ ಅವರ ಸಹೋದರಿಯ ಪತಿ 62 ವರ್ಷದ ಮಹದೇವಯ್ಯ ಅವರು ಬೆಂಗಳೂರಿನಲ್ಲಿ ವಾಸವಿದ್ದು, ಆಗಾಗ ಚಕ್ಕೆರೆಯಲ್ಲಿನ ತೋಟದ ಮನೆಗೆ ಬರುತ್ತಿದ್ದರು. ಇದೀಗ ಚನ್ನಪಟ್ಟಣದ ಚೆಕ್ಕೆರೆ ಗ್ರಾಮದ ತೋಟದ ಮನೆಯಿಂದ ನಾಪತ್ತೆಯಾಗಿದ್ದಾರೆ.

ಅಪಹರಣದ ಶಂಕೆ: ಅವರ ಪತ್ನಿ ಬೆಂಗಳೂರಿಗೆ ಹೋಗಿದ್ದರಿಂದ, ಮನೆಯಲ್ಲಿ ಅವರೊಬ್ಬರೇ ಇದ್ದರು. ಮಧ್ಯಾಹ್ನ ಸ್ಥಳೀಯರು ಮನೆಗೆ ಹೋಗಿದ್ದಾಗ, ಮಹದೇವಯ್ಯ ಅವರು ಇರಲಿಲ್ಲ. ಬೆಡ್ ರೂಮ್‌ನ ಬೀರು, ಅಲ್ಮೆರಾ ತೆರೆದಿದ್ದು, ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಯಾರೋ ಅವರನ್ನು ಅಪಹರಿಸಿ ಮನೆಯಲ್ಲಿದ್ದ ನಗದು ಮತ್ತು ಚಿನ್ನಾಭರಣ ದೋಚಿರುವ ಅನುಮಾನದಿಂದ ಕೂಡಲೇ ಕುಟುಂಬದವರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಉದ್ಯಮಿ ಮಹದೇವಯ್ಯ: ಮೂಲತಃ ಉದ್ಯಮಿಯಾದ ಮಹದೇವಯ್ಯ, ಮೆಗಾಸಿಟಿ ನಿರ್ದೇಶಕರಾಗಿದ್ದಾರೆ. ಜತೆಗೆ ಚಕ್ಕೆರೆಯಲ್ಲಿ ಜಮೀನು ಹೊಂದಿದ್ದು, ಹಸುಗಳನ್ನು ಸಹ ಸಾಕಿದ್ದರು.

ಮೊಬೈಲ್ ಆನ್-ಆಫ್: ಇನ್ನು ಮಹದೇವಯ್ಯ ಅವರ ಬಳಿ ಇದ್ದ ಕಾರು ಸಹ ನಾಪತ್ತೆಯಾಗಿದ್ದು, ಮಹದೇವಯ್ಯ ಅವರ ಮೊಬೈಲ್ ಪದೇಪದೆ ಆನ್ ಅಂಡ್ ಆಫ್ ಆಗುತ್ತಿದೆ. ಶನಿವಾರ ಬೆಳಗ್ಗೆ ಮಹದೇಶ್ವರ ಬೆಟ್ಟದ ಮೇಲೆ ಮೊಬೈಲ್ ಲೊಕೇಶನ್ ತೋರಿಸಿದ್ದು, ನಂತರ ಸ್ವಿಚ್ ಆಫ್ ಆಗಿದೆ. ಮೊಬೈಲ್ ಕರೆಯನ್ನು ರಿಸೀವ್ ಮಾಡುತ್ತಿರುವ ಅನಾಮಧೇಯ ವ್ಯಕ್ತಿ, ನೀವ್ ಯಾರೋ ಗೊತ್ತಿಲ್ಲ, ನಾನ್ ಆಮೇಲೆ ಫೋನ್ ಮಾಡುತ್ತೇನೆ ಎಂದು ಕರೆಯನ್ನು ಕಟ್ ಮಾಡುತ್ತಿದ್ದಾನೆ. ಶನಿವಾರ ಬೆಳಗ್ಗೆಯಿಂದ 4ರಿಂದ 5 ಬಾರಿ ಫೋನ್ ಆನ್ ಮಾಡಿ ಆಫ್ ಮಾಡಲಾಗಿದೆ. ಮಹದೇವಯ್ಯ ಫೋನ್ ಕಾಂಟ್ಯಾಕ್ಟ್ ಲಿಸ್ಟ್ ತೆಗೆದಿರೋ ಪೊಲೀಸರು ಫೋನ್‌ಗೆ ಯಾರ್‍ಯಾರು ಕರೆ ಮಾಡಿದ್ದಾರೆ ಎಂದು ಪರಿಶೀಲಿಸುತ್ತಿದ್ದಾರೆ.

ಕೆಟ್ಟಿರುವ ಸಿಸಿ ಕ್ಯಾಮರಾ: ಮಹದೇವಯ್ಯ ಅವರ ತೋಟದ ಮನೆಯ ಸುತ್ತಮುತ್ತ ಸಿಸಿ ಕ್ಯಾಮರಾ ಅಳವಡಿಸಿದ್ದು, ಕಳೆದ ಒಂದು ತಿಂಗಳಿಂದ ಅವು ಕೆಟ್ಟಿವೆ.

ಬೆರಳಚ್ಚು, ಶ್ವಾನದಳ ಪರಿಶೀಲನೆ:

ಮಹದೇವಯ್ಯ ನಾಪತ್ತೆ ಪ್ರಕರಣ ಬೆಳಕಿಗೆ ಬರುತ್ತಲೇ ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ಪರಿಶೀಲನೆ ತಂಡ ಮನೆಯಲ್ಲಿನ ಬೀರು, ಫೈಲ್ಸ್, ಸೋಫಾ ಸೇರಿದಂತೆ ಹಲವು ಕಡೆ ಪರಿಶೀಲಿಸಿ ಬೆರಳಚ್ಚುಗಳನ್ನ ಕಲೆಹಾಕಲಾಗಿದೆ. ಶ್ವಾನದಳ ಪರಿಶೀಲನೆ ನಡೆಸಿದೆ. ಮಹದೇವಯ್ಯ ತೋಟದ ಮನೆಯಿಂದ ಸುಳ್ಳೇರಿ ಕಡೆಗೆ ಕಾರು ತೆರಳಿದ್ದು, ಕಾರು ಹೋಗಿರೋ ಜಾಡು ಹಿಡಿದು ಹೊರಟ್ಟಿದ್ದ ಶ್ವಾನಗಳು ಸುಳ್ಳೇರಿ ಗ್ರಾಮದವರೆಗೂ ತೆರಳಿ ಮರಳಿದ್ದು, ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.

ಕೋಟ್...............

ನಮ್ಮ ಭಾವ ನಾಪತ್ತೆಯಾಗಿರುವ ವಿಚಾರ ತಿಳಿದು ತೋಟದ ಮನೆಗೆ ಬಂದು ನೋಡಿದಾಗ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿ ಆಗಿತ್ತು. ಬೇರೆ ಬೇರೆ ಕಾರು ಓಡಾಡಿರೋ ಹಾಗಿದೆ. ಏನಾದರು ನಡೆದಿರಬಹುದೆಂಬ ಶಂಕೆ ಇದೆ. ಅದಕ್ಕೆ ನಾವು ಪೊಲೀಸರಿಗೆ ಇರೋ ವಿಚಾರ ಹೇಳಿದ್ದೇವೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

-ಸಿ.ಪಿ.ರಾಜೇಶ್, ಯೋಗೇಶ್ವರ್ ಸಹೋದರ(ಮಗ್‌ಶಾಟ್‌ ಮಾತ್ರ ಮತ್ತು ಫೋಟೋಗಳು ಸಣ್ಣದಾಗಿ ಬಳಸಿ)

ಪೊಟೋ೨ಸಿಪಿಟಿ೧: ಮಹದೇವಯ್ಯ

ಪೊಟೋಸಿಪಿಟಿ೨,೩: ಮಹದೇವಯ್ಯ ತೋಟದ ಮನೆಯ ಅಲ್ಮೇರಾ,ಬೀರು ತೆರೆದು ಹುಡುಕಾಟ ನಡೆಸಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ