ಕನ್ನಡಪ್ರಭ ವಾರ್ತೆ ಮಂಗಳೂರು
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ತೆರವಾದ ವಿಧಾನ ಪರಿಷತ್ ಸ್ಥಾನಕ್ಕೆ ಬಿಜೆಪಿಯಲ್ಲಿ ಲಾಬಿ ಜೋರಾಗಿದ್ದು, ಈ ಹಿನ್ನೆಲೆಯಲ್ಲಿ ಗುರುವಾರ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಂಗಳೂರಿಗೆ ಆಗಮಿಸಿ ಎರಡು ಜಿಲ್ಲೆಗಳ ಮುಖಂಡರ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ.ನಗರದ ಜಿಲ್ಲಾ ಬಿಜೆಪಿ ಕಚೇರಿಗೆ ಆಗಮಿಸಿ ಅವರು, ಸುಮಾರು 67 ಮಂದಿ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.
ಉಭಯ ಜಿಲ್ಲೆಗಳ ಸಂಸದರು, ಮಾಜಿ ಸಂಸದರು, ಶಾಸಕರು, ಮಾಜಿ ಶಾಸಕರು, ಚುನಾವಣೆ ಅಭ್ಯರ್ಥಿಗಳು, ಎಂಎಲ್ಸಿಗಳು, ಮಾಜಿ ಎಂಎಲ್ಸಿಗಳು, ವಿಭಾಗ ಪ್ರಮುಖರು, ಪ್ರಧಾನ ಕಾರ್ಯದರ್ಶಿಗಳು ಸೇರಿ 67ರಷ್ಟು ಮಂದಿ ಪ್ರಮುಖರು, ತಲಾ ಮೂರು ಹೆಸರುಗಳನ್ನು ಮುಚ್ಚಿದ ಲಕೋಟೆಯಲ್ಲಿ ಬೊಮ್ಮಾಯಿ ಅವರಿಗೆ ನೀಡಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.8-9 ಆಕಾಂಕ್ಷಿಗಳು: ಸದ್ಯಕ್ಕೆ ಬಿಜೆಪಿಯಲ್ಲಿ 8-9 ಮಂದಿ ಆಕಾಂಕ್ಷಿಗಳಿದ್ದಾರೆ. ಅವರಲ್ಲಿ ಪ್ರಮುಖವಾಗಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಉಡುಪಿಯ ಪ್ರಮೋದ್ ಮಧ್ವರಾಜ್, ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೆಸರು ಪ್ರಧಾನವಾಗಿ ಕೇಳಿಬರುತ್ತಿದೆ. ಉಳಿದ ಐದಾರು ಮಂದಿ ಮುಖಂಡರೂ ಆಕಾಂಕ್ಷಿಗಳಾಗಿದ್ದಾರೆ.
2021ರಲ್ಲಿ ಕೋಟ ಶ್ರೀನಿವಾಸ ಪೂಜಾರಿ ಎಂಎಲ್ಸಿ ಆದ ಬಳಿಕ ಕಳೆದ ಲೋಕಸಭೆ ಚುನಾವಣೆಯಲ್ಲಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಬಳಿಕ ಅವರ ಎಂಎಲ್ಸಿ ಸ್ಥಾನ ತೆರವಾಗಿತ್ತು.2021ರಲ್ಲಿ ಕೋಟ ಶ್ರೀನಿವಾಸ ಪೂಜಾರಿ ಎಂಎಲ್ಸಿ ಆದ ಬಳಿಕ ಕಳೆದ ಲೋಕಸಭೆ ಚುನಾವಣೆಯಲ್ಲಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ಬಳಿಕ ಅವರ ಎಂಎಲ್ಸಿ ಸ್ಥಾನ ತೆರವಾಗಿತ್ತು.
ರಾಜಕೀಯದಲ್ಲೂ ಲೈಂಗಿಕ ದೌರ್ಜನ್ಯ ಆಗಿದ್ದರೆ ವಿಚಾರಣೆಯಾಗಲಿ: ಬೊಮ್ಮಾಯಿಮಂಗಳೂರು:ಚಲನಚಿತ್ರ ರಂಗದಲ್ಲಿನ ಲೈಂಗಿಕ ದೌರ್ಜನ್ಯ ವಿಚಾರದ ಕುರಿತು ಚಿತ್ರರಂಗವು ಸಮಿತಿ ರಚನೆ ಮಾಡಿ ವಿಚಾರಣೆ ಮಾಡಲಿ. ರಾಜಕೀಯದಲ್ಲೂ ಇಂತಹ ದೌರ್ಜನ್ಯಗಳು ನಡೆದಿದ್ದರೆ, ಅಲ್ಲೂ ವಿಚಾರಣೆ ಮಾಡುವುದರಲ್ಲಿ ತಪ್ಪೇನೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ಮಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲೂ ಲೈಂಗಿಕ ದೌರ್ಜನ್ಯ ನಡೆದಿದ್ದರೆ ಅಲ್ಲೂ ವಿಚಾರಣೆ ಮಾಡಲಿ. ಎಲ್ಲಿ ದೌರ್ಜನ್ಯ ಅಗಿದೆಯೋ, ಎಲ್ಲಿ ತಪ್ಪು ಆಗಿದೆಯೋ ಅಲ್ಲಿ ವಿಚಾರಣೆ ಮಾಡಲಿ. ಸರ್ಕಾರ ಅದ್ಯಾವ ರೀತಿ ಮಾಡುತ್ತೋ ಮಾಡಲಿ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಡಾ ಪ್ರಕರಣ ಕೋರ್ಟ್‌ನಲ್ಲಿದ್ದು, ಆದಷ್ಟುಶೀಘ್ರ ಕೋರ್ಟ್ ನಿರ್ಧಾರ ಕೈಗೊಳ್ಳಲಿದೆ. ಆದರೆ ಸರ್ಕಾರವೇ ತನ್ನ ಆಜ್ಞೆಯಲ್ಲಿ ಅಧಿಕಾರಿಯನ್ನು ಸಸ್ಪೆಂಡ್ ಮಾಡಿದ್ದು, ಕಾನೂನು ಉಲ್ಲಂಘನೆ ಆಗಿದ್ದನ್ನು ಸ್ವಷ್ಟವಾಗಿ ಒಪ್ಪಿಕೊಂಡಿದೆ ಎಂದು ಬೊಮ್ಮಾಯಿ ಪ್ರತಿಕ್ರಿಯಿಸಿದರು.ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಪ್ರಕರಣಗಳ ತನಿಖೆ ಕುರಿತು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ. ಅದೇನೇ ಇದ್ದರೂ ಎದುರಿಸಲು ಸಿದ್ಧ. ನಾವೇನು ತಪ್ಪು ಮಾಡಿಲ್ಲ. ಕಾನೂನು ಇದೆ, ಕೋರ್ಟ್ ಇದೆ. ಸೇಡಿನ ರಾಜಕೀಯ ಭಾವನೆ ಹೊರತುಪಡಿಸಿದರೂ, ಇದನ್ನೆಲ್ಲ ಎದುರಿಸಲು ಸಿದ್ಧರಿದ್ದೇವೆ ಎಂದು ಮಾಜಿ ಸಿಎಂ ಹೇಳಿದರು.ಫೋಟೊಬೊಮ್ಮಾಯಿ ಫೋಟೊ