ಮಾರ್ಚ್‌ 10ರಂದು ವಿಧಾನಸೌಧ ಚಲೋ, ಪೂರ್ವಭಾವಿ ಸಭೆ

KannadaprabhaNewsNetwork |  
Published : Mar 07, 2025, 12:47 AM IST
ಡಿಡಬ್ಲೂಡಿ8ರೈತರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಮಾ. 10ರಂದು ರೈತ ಕೃಷಿ ಕಾರ್ಮಿಕರು ವಿಧಾನ ಸೌದ ಚಲೋ ಕುರಿತು ಧಾರವಾಡ ತಾಲೂಕಿನ ಮುಗದ, ಕಲ್ಲಾಪುರ, ವರಹ ನಾಗಲಾವಿ, ಮಂಡ್ಯಾಳ, ಗ್ರಾಮದಲ್ಲಿ ನರೇಗಾ ಕೂಲಿ ಕಾರ್ಮಿಕರ ನಡುವೆ ಪೂರ್ವಭಾವಿ ಸಭೆ ನಡೆಸಲಾಯಿತು. | Kannada Prabha

ಸಾರಾಂಶ

ರೈತರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಮಾ. 10ರಂದು ರೈತ ಕೃಷಿ ಕಾರ್ಮಿಕರು ವಿಧಾನ ಸೌಧ ಚಲೋ ಕುರಿತು ಧಾರವಾಡ ತಾಲೂಕಿನ ಮುಗದ, ಕಲ್ಲಾಪುರ, ವರಹ ನಾಗಲಾವಿ, ಮಂಡ್ಯಾಳ ಗ್ರಾಮದಲ್ಲಿ ನರೇಗಾ ಕೂಲಿ ಕಾರ್ಮಿಕರ ನಡುವೆ ಪೂರ್ವಭಾವಿ ಸಭೆ ನಡೆಸಲಾಯಿತು.

ಧಾರವಾಡ: ರೈತರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಮಾ. 10ರಂದು ರೈತ ಕೃಷಿ ಕಾರ್ಮಿಕರು ವಿಧಾನ ಸೌಧ ಚಲೋ ಕುರಿತು ಧಾರವಾಡ ತಾಲೂಕಿನ ಮುಗದ, ಕಲ್ಲಾಪುರ, ವರಹ ನಾಗಲಾವಿ, ಮಂಡ್ಯಾಳ ಗ್ರಾಮದಲ್ಲಿ ನರೇಗಾ ಕೂಲಿ ಕಾರ್ಮಿಕರ ನಡುವೆ ಪೂರ್ವಭಾವಿ ಸಭೆ ನಡೆಸಲಾಯಿತು.

ರೈತ ಸಮುದಾಯ ಮತ್ತು ಕೃಷಿ ಕಾರ್ಮಿಕರು ಅತ್ಯಂತ ಸಂಕಟಮಯ ಜೀವನ ನಡೆಸುತ್ತಿದ್ದಾರೆ. ಕೃಷಿ ಕ್ಷೇತ್ರವು ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಸಾಲದ್ದಕ್ಕೆ ಕೇಂದ್ರ ಸರ್ಕಾರ ಮತ್ತೊಮ್ಮೆ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಹೊಸ ಹೆಸರಿನೊಂದಿಗೆ ಜಾರಿ ಮಾಡಿ ರೈತರ ಮರಣ ಶಾಸನ ಬರೆಯಲು ಹೊರಟಿದೆ. ಇನ್ನು, ರಾಜ್ಯ ಕಾಂಗ್ರೆಸ್ ಸರ್ಕಾರ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡುತ್ತೇವೆ ಎಂದು ಹೇಳುತ್ತಲಿದೆ. ರೈತರ ಮೇಲೆ ಕೇಸ್ ಹಾಕಿ ಭೂಮಿಯಿಂದ ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಕೃಷಿ ಒಳಸುರಿವುಗಳಾದ ಬೀಜ, ಗೊಬ್ಬರ ಕೀಟನಾಶಕ ಎಲ್ಲದರ ಬೆಲೆಯೂ ಗಗನಕ್ಕೇರಿ ರೈತನ ಬದುಕನ್ನು ಪಾತಾಳ ಸೇರುವಂತೆ ಮಾಡಿದೆ.

ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಇಲ್ಲದೆ ರೈತನ ಮಗ್ಗಲು ಮುರಿಯುತ್ತಿದೆ. ವಿದ್ಯುತ್ ಕಾಯ್ದೆ 2023ರನ್ನು ಜಾರಿಗೊಳಿಸಿ ವಿದ್ಯುತ್ ಖಾಸಗೀಕರಣ ಮಾಡಿ ಪ್ರೀಪೇಯ್ಡ್‌ ಮಾಡಲು ಹೊರಟಿದೆ. ಇದರಿಂದ ಮುಂದಿನ ದಿನಗಳಲ್ಲಿ ಹಣ ಪಾವತಿ ಮಾಡಲಾಗದೆ ಕತ್ತಲೆಯಲ್ಲೇ ಜೀವನ ನಡೆಸುವಂತಾಗುತ್ತದೆ. ಈ ಎಲ್ಲ ಸಮಸ್ಯೆಗಳನ್ನು ವಿರೋಧಿಸಿ ಇದೇ ಮಾ. 10ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ. ಉತ್ತರ ಕರ್ನಾಟಕದ ರೈತ ಕೃಷಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕೆಂದು ಹಾಗೂ ಹೋರಾಟದಲ್ಲಿ ಭಾಗವಹಿಸುವರು ಮೊ. 7411516670 ಸಂಪರ್ಕಿಸಲು ರೈತ ಕೃಷಿ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷ ದೀಪಾ ಧಾರವಾಡ, ಮಂಜುನಾಥ್ ಪಾಟೀಲ್, ನಾರಾಯಣ ಮೇಘಾನಿ, ಸಿದ್ದಮ್ಮ, ಮಲ್ಲಪ್ಪ, ನಾಗಪ್ಪ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ 33 ಹಳ್ಳಿಗಳಲ್ಲಿ ಪ್ರತಿ ದಿನ ಸಂಜೆ 7- 9 ಗಂಟೆವರೆಗೆ ಮೊಬೈಲ್‌, ಟಿವಿ ಬಂದ್‌
ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ರು ಸಚಿವೆ ಲಕ್ಷ್ಮೀ