ವಿದ್ಯಾಮಾತಾ ಅಕಾಡೆಮಿ: ಯಶೋಧಾ, ಕೃಷ್ಣ ವೇಷ ಸ್ಪರ್ಧೆ

KannadaprabhaNewsNetwork |  
Published : Sep 03, 2026, 02:45 AM IST
ವೇಷ- | Kannada Prabha

ಸಾರಾಂಶ

ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ ಪುತ್ತೂರು ವಿದ್ಯಾಮಾತಾ ಅಕಾಡೆಮಿಯಲ್ಲಿ 3ನೇ ವರ್ಷದ ಕೃಷ್ಣ ವೇಷ ಸ್ಪರ್ಧೆ-ಕೃಷ್ಣ ಲೀಲೆ ಅದ್ಧೂರಿಯಾಗಿ ನೆರವೇರಿತು. 83ಕ್ಕೂ ಅಧಿಕ ಮುದ್ದು ಕೃಷ್ಣರು ಸೇರಿದಂತೆ ಯಶೋದಾ ಕೃಷ್ಣರು ಸಹ ಪಾಲ್ಗೊಂಡಿದ್ದರು.

ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ ಪುತ್ತೂರು ವಿದ್ಯಾಮಾತಾ ಅಕಾಡೆಮಿಯಲ್ಲಿ 3ನೇ ವರ್ಷದ ಕೃಷ್ಣ ವೇಷ ಸ್ಪರ್ಧೆ-ಕೃಷ್ಣ ಲೀಲೆ ಅದ್ಧೂರಿಯಾಗಿ ನೆರವೇರಿತು. 83ಕ್ಕೂ ಅಧಿಕ ಮುದ್ದು ಕೃಷ್ಣರು ಸೇರಿದಂತೆ ಯಶೋದಾ ಕೃಷ್ಣರು ಸಹ ಪಾಲ್ಗೊಂಡಿದ್ದರು.ಕಾರ್ಯಕ್ರಮ ಉದ್ಘಾಟಿಸಿದ ಪುತ್ತೂರು ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಸ್ವಾತಿ ಮಾತನಾಡಿ, ಪ್ರಸ್ತುತ ಕಾಲ ಘಟ್ಟದಲ್ಲಿ ಎಲ್ಲವೂ ಆಧುನೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ ಚಿಕ್ಕ ಮಕ್ಕಳಲ್ಲಿ ಶ್ರೀ ಕೃಷ್ಣನ ಆದರ್ಶಯುತವಾದ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪೋಷಕರು ಕಾರ್ಯಪ್ರವೃತರಾಗಬೇಕು ಎಂದರು.

ವಿದ್ಯಾಮಾತಾ ಅಕಾಡೆಮಿಯಲ್ಲಿ ಈ ವರ್ಷದ ಸ್ಪರ್ಧೆಯ ವಿಭಾಗದಲ್ಲಿ 1 ರಿಂದ 3 ವರ್ಷ, 3 ರಿಂದ 6 ವರ್ಷ ಹಾಗೂ ಯಶೋದೆ ಕೃಷ್ಣ ವಿಭಾಗವನ್ನು ಹೊಸದಾಗಿ ಪರಿಚಯಿಸಲಾಗಿತ್ತು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಓಣಂ ಪೂಕಳಂ ರಚಿಸಿ ಓಣಂ ಹಬ್ಬವನ್ನು ಸರಳವಾಗಿ ಆಚರಿಸಿದರು.ಸ್ಪರ್ಧೆಯ ವಿಜೇತರ ವಿವರ :

1 ರಿಂದ 3 ವರ್ಷದ ವಿಭಾಗದಲ್ಲಿ ಪ್ರಥಮ ಬಹುಮಾನ ಸುಳ್ಯ ತಾಲೂಕು ಮುರುಳ್ಯದ ಕಳತಾಜೆ ನಿವಾಸಿಗಳಾದ ನಿರೀಕ್ಷಾ ಮತ್ತು ಕೀರ್ತನ್ ಅವರ ಪುತ್ರಿ ದಿತ್ಯಾ ಕೆ ಶೆಟ್ಟಿ. ದ್ವಿತೀಯ ಬಹುಮಾನ: ಪುತ್ತೂರು ತಾಲೂಕು ಎಪಿಎಂಸಿ ರಸ್ತೆಯ ಅರುಣ್ ಕಾಂಪ್ಲೆಕ್ಸ್ ನ ನಿವಾಸಿಗಳಾದ ಸ್ವಾತಿ ಮತ್ತು ಬಾಲಕೃಷ್ಣ ಅವರ ಪುತ್ರಿ ಶ್ರೀವಿ ಬಿ. ತೃತೀಯ ಬಹುಮಾನ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಈದು ಇಲ್ಲಿಯ ನಿವಾಸಿಗಳಾದ ರಶ್ಮಿತಾ ಜೈನ್ ಮತ್ತು ಶರ್ಮಿತ್ ಜೈನ್ ರವರ ಪುತ್ರ ಕೃತರ್ವ್ ಸತ್ಯಾ ಜೈನ್ 3 ರಿಂದ 6 ವರ್ಷದ ವಿಭಾಗ: ಪ್ರಥಮ ಬಹುಮಾನ: ಬಂಟ್ವಾಳ ತಾಲೂಕು ವಿಟ್ಲ ಮೂಡ್ನೂರು ಇಲ್ಲಿಯ ನಿವಾಸಿಗಳಾದ ಭಾಗ್ಯಲಕ್ಷ್ಮೀ ಮತ್ತು ಶಿವರಾಮ್ ಅವರ ಪುತ್ರಿ ಮಾನ್ಯ ಶ್ರೀಯಾ. ದ್ವಿತೀಯ ಬಹುಮಾನ: ಪುತ್ತೂರು ತಾಲೂಕು ನಿಡ್ಪಳ್ಳಿಯ ನಿವಾಸಿಗಳಾದ ಶೋಭಾ ಕೆ ಮತ್ತು ಜನಾರ್ಧನ ಡಿ ಅವರ ಪುತ್ರಿ ಚವಿಷ್ಕಾ ದುರ್ಗಾ. ತೃತೀಯ ಬಹುಮಾನ: ಪುತ್ತೂರು ತಾಲೂಕು ಮಾಡಾವು ನಿವಾಸಿಗಳಾದ ಚೈತನ್ಯ ಸಿ ರೈ ಮತ್ತು ಚಂದ್ರಶೇಖರ ಎಸ್ ಅವರ ಪುತ್ರಿ ಚಾರಿತ್ರ್ಯ ಸಿ ರೈ ಯಶೋದ ಕೃಷ್ಣ ವಿಭಾಗ: ಪ್ರಥಮ ಬಹುಮಾನ: ಪುತ್ತೂರು ತಾಲೂಕು ಕಸಬಾ ನಿವಾಸಿ ಸುಧಾಕರ ಅವರ ಪತ್ನಿ ಭವ್ಯ ಕೆ ಹಾಗೂ ಮಗಳಾದ ಅನಿತಾ ಕೆ ಆಚಾರ್ಯ. ದ್ವಿತೀಯ ಬಹುಮಾನ: ಬಂಟ್ವಾಳ ತಾಲೂಕು ಕುಲ ನಿವಾಸಿ ಲೋಹಿತ್ ಪಿ ಅವರ ಪತ್ನಿ ಲಿಖಿತ ಎಂ ಮತ್ತು ಮಗಳಾದ ಚಿರಣ್ವಿ ಎಂ. ತೃತೀಯ ಬಹುಮಾನ: ಪುತ್ತೂರು ತಾಲೂಕು ಚಿಕ್ಕ ಮೂಡ್ನೂರು ನಿವಾಸಿ ಪುರುಷೋತ್ತಮ ಕೆ ಅವರ ಪತ್ನಿ ವಿಮಲತೇಜಾಕ್ಷಿ ಮತ್ತು ಮಗಳಾದ ಋತ್ವಿಕಾ ಪಿ ಅವರು ಬಹುಮಾನವನ್ನು ಜಯಿಸಿರುತ್ತಾರೆ. ಅಲ್ಲದೇ 2026ನೇ ಸಾಲಿನ ಕೃಷ್ಣ ವೇಷ ಸ್ಪರ್ಧೆ-ಕೃಷ್ಣ ಲೀಲೆಯಲ್ಲಿ ಭಾಗವಹಿಸಿದ ಎಲ್ಲಾ ಮುದ್ದು ಕೃಷ್ಣರಿಗೆ ಹಾಗೂ ಯಶೋದ-ಕೃಷ್ಣರಿಗೆ ಗೌರವದ ಪದಕ ಹಾಗೂ ಪ್ರಮಾಣ ಪತ್ರ ನೀಡಲಾಯಿತು.

ಸ್ಪರ್ಧೆಯ ತೀರ್ಪುಗಾರರಾಗಿ ಚೇತನಾ ಸತೀಶ್, ಗಾಯತ್ರಿ ಹಾಗೂ ದೀಕ್ಷಿತಾ ಅವರು ಸಹಕರಿಸಿದರು.

ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದರು. ನಂದಗೋಕುಲ ಚಿಣ್ಣರ ಅಂಗಳ ಮುಖ್ಯಸ್ಥರಾದ ಪವಿತ್ರ ವಸಂತ್ ವಿದ್ಯಾಮಾತಾ ಅಕಾಡೆಮಿಯ ನಿರ್ದೇಶಕಿಯಾದ ರಮ್ಯಾ ಭಾಗ್ಯೇಶ್ ರೈ, ದೇವಿದ್ಯಾ ರೈ, ಹಾಗೂ ಈ ಕಾರ್ಯಕ್ರಮದ ಯಶಸ್ಸಿಗೆ ವಿದ್ಯಾಮಾತಾ ಅಕಾಡೆಮಿಯ ವಿದ್ಯಾರ್ಥಿಗಳು ಸಿಬ್ಬಂದಿ ವರ್ಗ ಸಹಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಮಗಾರಿ ವಿಳಂಬ, ಕಳಪೆ ಗುಣಮಟ್ಟ: ಪೊನ್ನಣ್ಣ ಅಸಮಾಧಾನ
ಒಳಚರಂಡಿ ಜಾಲಕ್ಕೆ ಸಂಪರ್ಕ: ಡಾ. ಮಂತರ್ ಗೌಡ ಸೂಚನೆ