ಮೂಲ್ಕಿ: ವಿಜಯ ರೈತರ ಸೇವಾ ಸಹಕಾರಿ ಸಂಘವು ಪ್ರಸಕ್ತ ಸಾಲಿನಲ್ಲಿ 142 ಕೋಟಿ 13 ಲಕ್ಷ ರು. ವ್ಯವಹಾರ ನಡೆಸಿದ್ದು, ಸದಸ್ಯರಿಗೆ ಶೇ.12 ಡಿವಿಡೆಂಡ್ ವಿತರಿಸಲಾಗಿದೆ. ಶೀಘ್ರದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಶಿಕ್ಷಣದ ಜೊತೆಗೆ, ಶಿಕ್ಷಣೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿ ಸಾಧಕರನ್ನು ಗುರುತಿಸಿ ಗೌರವಿಸಲಾಗುವುದೆಂದು ಮೂಲ್ಕಿ ವಿಜಯಾ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ ಹೇಳಿದರು.ಮೂಲ್ಕಿಯ ಬಿಲ್ಲವ ಸಂಘದ ಶ್ರೀ ನಾರಾಯಣಗುರು ಸಭಾಂಗಣದಲ್ಲಿ ನಡೆದ ಸಂಘದ 49ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರಗತಿಪರ ಹಿರಿಯ ಕೃಷಿಕರಾದ ಭುಜಂಗ ಆರ್. ಶೆಟ್ಟಿ, ಸದಾನಂದ ಆರ್. ಸನಿಲ್ ಚಿತ್ರಾಪು, ಗಿರಿಧರ ಕಾಮತ್ ಅತಿಕಾರಿಬೆಟ್ಟು, ದಿನಕರ ಕಾಂಚನ್ ಮಾನಂಪಾಡಿ, ನೀಲು ಪೂಜಾರ್ತಿ ಅತಿಕಾರಿಬೆಟ್ಟು ಹಾಗೂ ಮಾಜಿ ನಿರ್ದೇಶಕಿ ಪುಷ್ಪ ಮಡಿವಾಳ್ತಿ ಅವರನ್ನು ಸನ್ಮಾನಿಸಲಾಯಿತು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ 25 ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಂಘದ ಸದಸ್ಯರಿಗೆ ಶೇ.12 ಡಿವಿಡೆಂಡ್ ವಿತರಿಸಲಾಯಿತು.ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಆಡಳಿತ ನಿರ್ದೇಶಕ ಸಂತೋಷ್ ಕುಮಾರ್ ಶೆಟ್ಟಿ, ನಿರ್ದೇಶಕರಾದ ಗಂಗಾಧರ ವಿ. ಶೆಟ್ಟಿ, ಅಶೋಕ್ ಕುಮಾರ್ ಚಿತ್ರಾಪು, ನರಸಿಂಹ ಪೂಜಾರಿ, ದೇವಪ್ರಸಾದ್, ಮಮತಾ ಡಿ. ಪೂಂಜ, ಪದ್ಮಿನಿ ವಿ. ಶೆಟ್ಟಿ, ರಾಜೇಶ್ ಶೆಟ್ಟಿ, ಪ್ರಭಾಕರ ದೇವಾಡಿಗ, ರಾಮ ನಾಯ್ಕ್, ನಂಜುಂಡ ಆರ್.ಕೆ. ಮತ್ತಿತರರು ಇದ್ದರು.
ಸಂಘದ ನಿರ್ದೇಶಕ ಗಂಗಾಧರ ಶೆಟ್ಟಿ ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕ ಚಂದ್ರಕಾಂತ ಶೆಟ್ಟಿ ವರದಿ ಮಂಡಿಸಿದರು. ಅಶೋಕ್ ಚಿತ್ರಾಪು ವಂದಿಸಿದರು. ಮನೋಹರ ಕೋಟ್ಯಾನ್ ನಿರೂಪಿಸಿದರು.ಇತ್ತೀಚೆಗೆ ನಿಧನರಾದ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಚಿತ್ತರಂಜನ್ ಶೆಟ್ಟಿ ಉಳೆಪಾಡಿ ಅವರಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.