ವಿಜಯ ಕರ್ನಾಟಕ ವೇದಿಕೆ ನೊಂದವರ ಪರ ನಿಲ್ಲಲಿ: ಎಸಿಪಿ ಮಹಾನಂದ

KannadaprabhaNewsNetwork |  
Published : May 18, 2026, 01:45 AM IST
ಮಹಾನಂದ್ ಜಾಹೀರಾತುದಾರರ | Kannada Prabha

ಸಾರಾಂಶ

ಜನಪರ ಸೇವೆ ಸಂಘಟನೆಯ ಮೊದಲ ಆದ್ಯತೆಯಾಗಿದ್ದು, ಇಂದಿನ ಕಾರ್ಯಕ್ರಮದಲ್ಲಿ ಹೊಲಿಗೆ ಯಂತ್ರ ವಿತರಣೆ, ಸಾಧಕ ಮಕ್ಕಳಿಗೆ ಪುರಸ್ಕರಿಸುವ ಕಾರ್ಯ ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ. ತಾಲೂಕು, ಜಿಲ್ಲೆಯ ಪದಾಧಿಕಾರಿಗಳು ನೊಂದವರ ಪರ ನಿಲ್ಲಬೇಕು.

ಜನಪರ ಸೇವೆಗೆ ಮೊದಲ ಆದ್ಯತೆ ನೀಡಲು ರಾಜ್ಯಾಧ್ಯಕ್ಷ ಮಹೇಶ್ ಕುಮಾರ್ ಸಲಹೆ

ಹೊಲಿಗೆ ಯಂತ್ರ, ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕಾರದ ಮೂಲಕ ಪದಾಧಿಕಾರಿಗಳ ಪದಗ್ರಹಣ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯು ಬಡವರು, ಶೋಷಿತರು, ನೊಂದವರ ಪರ ಧ್ವನಿಯಾಗಲಿ, ನಮ್ಮ ಭಾಷೆ. ನೆಲ- ಜಲದ ವಿಚಾರದಲ್ಲಿ ರಾಜಿಯಾಗದೆ ಸಂಘಟಿತ ಹೋರಾಟಕ್ಕೆ ಶ್ರಮಿಸುವಂತಾಗಬೇಕು ಎಂದು ಮುಖ್ಯಮಂತ್ರಿ ಪದಕ ಪುರಸ್ಕೃತ ಎಸಿಪಿ ಮಹಾನಂದ ಹೇಳಿದರು.

ಅವರು ಪಟ್ಟಣದ ಗುರುಭವನದಲ್ಲಿ ಭಾನುವಾರ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ನೂತನ ಪದಾಧಿಕಾರಿಗಳ ಪದಗ್ರಹಣ, ಹೊಲಿಗೆ ಯಂತ್ರ ವಿತರಣೆ, 10ನೇ ತರಗತಿ ಸಾಧಕ ಮಕ್ಕಳಿಗೆ ಅಭಿನಂದನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ನೊಂದವರ ಪರ ನಿಲ್ಲುವುದು, ಕಳಂಕ ರಹಿತ ಸೇವೆ ನೂತನ ಪದಾಧಿಕಾರಿಗಳ ಧ್ಯೇಯವಾಗಲಿ. ನಮ್ಮ ಭಾಷೆ, ನೆಲ, ಜಲ ಉಳಿಸುವಲ್ಲಿ ಎಲ್ಲರೂ ಶ್ರಮಿಸಬೇಕು, ಜಿಲ್ಲೆ, ತಾಲೂಕು ಬದಲಾವಣೆ ನಿಟ್ಟಿನಲ್ಲಿ ನೂತನ ಸಂಘಟನೆ ಮುಂದಾಗಲಿ, ಜನಸೇವೆ ಸಂಸ್ಥೆಯ ಆದ್ಯತೆಯಾಗಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯಾಧ್ಯಕ್ಷ ಮಹೇಶ್ ಕುಮಾರ್ ಮಾತನಾಡಿ, ಜನಪರ ಸೇವೆ ಸಂಘಟನೆಯ ಮೊದಲ ಆದ್ಯತೆಯಾಗಿದ್ದು, ಇಂದಿನ ಕಾರ್ಯಕ್ರಮದಲ್ಲಿ ಹೊಲಿಗೆ ಯಂತ್ರ ವಿತರಣೆ, ಸಾಧಕ ಮಕ್ಕಳಿಗೆ ಪುರಸ್ಕರಿಸುವ ಕಾರ್ಯ ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ. ತಾಲೂಕು, ಜಿಲ್ಲೆಯ ಪದಾಧಿಕಾರಿಗಳು ನೊಂದವರ ಪರ ನಿಲ್ಲಬೇಕು ಎಂದು ಸಲಹೆ ನೀಡಿದರು.

ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಡಾ.ಬಿ‌.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಆನಂದಮೂರ್ತಿ, ಪ್ರಥಮ ದರ್ಜೆ ಗುತ್ತಿಗೆದಾರ ಓಲೆ ಮಹದೇವ, ಬಿಇಒ ಮಂಜುಳಾ, ಇತಿಹಾಸ ವಿಭಾಗ ಉಪನ್ಯಾಸಕರು ಗಿರೀಶ್ ಬಾಬು, ನಗರಸಭೆ ಮಾಜಿ ಅಧ್ಯಕ್ಷ ಶಾಂತರಾಜು, ತಾಪಂ ಮಾಜಿ ಉಪಾಧ್ಯಕ್ಷ ಬಸವಣ್ಣ, ರಾಜ್ಯ ಉಪಾಧ್ಯಕ್ಷ ದೇವರಾಜು, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಅಶೋಕ್, ಜಿಲ್ಲಾ ಗೌರವಾಧ್ಯಕ್ಷ ವೆಂಕಟಾಚಾಲ, ಜಿಲ್ಲಾಧ್ಯಕ್ಷ ಶಿವಸುಂದರ್, ತಾಲೂಕು ಅಧ್ಯಕ್ಷ ರೇವಣ್ಣ ಇನ್ನಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಖಾಸಗಿ ಶಾಲೆ ಆರಂಭ, ಮಾರಾಟ ಈಗ ಸರಳ
ಮೋದಿ ಸರ್ಕಾರದಿಂದ ದಾಖಲೆ ನಿರುದ್ಯೋಗ: ಮಂಜುನಾಥ್‌