ಹಿರೇಕೆರೂರು: ಸಕ್ಕರೆ ಕಾರ್ಖಾನೆಯ ಸುತ್ತಮುತ್ತಲಿನ ರೈತರಿಗೆ ಅನಕೂಲವಾಗುವ ಉದ್ದೇಶದಿಂದ ಸ್ಥಾಪಿಸಿದ ವಿಜಯ (ಎಂ.ಆರ್.ಎನ್) ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ಇಂದು ಹೆಮ್ಮರವಾಗಿ ಬೆಳೆದು ರಾಷ್ಟ್ರೀಕೃತ ಬ್ಯಾಂಕಿನ ಎಲ್ಲ ಸೌಲಭ್ಯಗಳನ್ನು ನೀಡುವ ಮೂಲಕ ಕರ್ನಾಟಕದಲ್ಲೇ ಪ್ರಥಮ ಸ್ಥಾನ ಪಡೆದ ಪ್ರತಿಷ್ಠಿತ ಸಂಸ್ಥೆಯಾಗಿದೆ ಎಂದು ಬ್ಯಾಂಕಿನ ಸಂಸ್ಥಾಪಕ, ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.
18ನೇ ನವೆಂಬರ್ 2007 ರಲ್ಲಿ ಮುಧೋಳ ನಗರದಲ್ಲಿ ಪ್ರಾರಂಭವಾದ ಈ ಸಹಕಾರಿಯು ಕರ್ನಾಟಕ ರಾಜ್ಯಾದ್ಯಂತ 77 ಶಾಖೆಗಳನ್ನು ಹೊಂದಿದ್ದು, ಮುಂಬರುವ ದಿನಗಳಲ್ಲಿ 125 ಶಾಖೆಗಳನ್ನು ಹೊಂದುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.
ಮಾಜಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ಮುರುಗೇಶ ನಿರಾಣಿ ಅವರು ಸಂಸ್ಥಾಪಿಸಿದ ಈ 76 ಬ್ಯಾಂಕುಗಳು ಮತ್ತು 22 ಸಕ್ಕರೆ ಕಾರ್ಖಾನೆಗಳು ಅವರ ಸಮರ್ಥ ಮಾರ್ಗದರ್ಶನದಲ್ಲಿ ಅತ್ಯಂತ ಯಶಸ್ವಯಾಗಿ ನಡೆಯುತ್ತಿವೆ. ಇಡೀ ದೇಶದಲ್ಲಿ ಎಥೆನಾಲ್ ಉತ್ಪಾದನೆಯಲ್ಲಿ ನ.1 ಸ್ಥಾನ ಪಡೆದ ಕೀರ್ತಿ ಇವರಿಗೆ ಸಲ್ಲುತ್ತದೆ. ವಿನಾಕಾರಣ ಎಥೆನಾಲ್ ಬಗ್ಗೆ ವಿರೊಧ ಪಕ್ಷದವರು ಇಲ್ಲಸಲ್ಲದ ಸುಳ್ಳು ಅಪಾದನೆ ಮಾಡುತ್ತಿದ್ದು, ಇದರಿಂದ ಪೆಟ್ರೋಲ್ ಅಭಾವ ಸೃಷ್ಟಿಸುವ ಹುನ್ನಾರ ನಡೆಸಿದ್ದಾರೆ. ಇದಕ್ಕೆ ಯಾರೂ ಕೂಡಾ ತಲೆಕೆಡಿಸಿಕೊಳ್ಳಬಾರದು. ಈ ಬ್ಯಾಂಕ್ ವಾರದ 7 ದಿನ ಹಾಗೂ 24 ಗಂಟೆಗಳ ಕಾಲ ತನ್ನ ವಹಿವಾಟನ್ನು ಮಾಡುತ್ತಿದ್ದು, ಅಗತ್ಯ ಬಿದ್ದರೆ ಬ್ಯಾಂಕಿನ ಸಿಬ್ಬಂದಿ ಗ್ರಾಹಕರ ಮನೆಬಾಗಿಲಿಗೆ ಬಂದು ಹಣ ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ, ವಿ.ಡಿ. ಹಂಪಾಳಿ, ಹುಚ್ಚಪ್ಪ ಚೌಟಿ, ಸೋಮಶೇಖರ ಎಸ್ ಗೋಸಾರ, ಎಂ.ಎಚ್. ಪತ್ತೆನ್ನವರ, ಆನಂದ ಕುಲಕರ್ಣಿ, ರವಿಶಂಕರ ಬಾಳಿಕಾಯಿ, ಪ್ರಮೋದ್, ಬಾಲು ಜನ್ನು, ಪುಟ್ಟಣ್ಣ ಪಾಟೀಲ, ಆರ್.ಎನ್. ಗಂಗೋಳ, ಡಿ.ಸಿ. ಪಾಟೀಲ, ಬ್ಯಾಂಕಿನ ನಿರ್ದೇಶಕರಾದ ಕುಮಾರ ಮರಿಗೌಡ್ರ, ಎಂ.ಬಿ. ಕಾಗಿನೆಲ್ಲಿ, ಆರ್.ಎಸ್. ಹುಲ್ಮನಿ, ಶಿವಶಂಕರ ಹಂಪಾಳಿ, ಬಸಮ್ಮ ಅಬಲೂರು, ನೀಲಮ್ಮ ಹೊಸಮನಿ, ಸಿ.ಎಸ್. ಚಳಗೇರಿ, ರಾಜು ಕಾರಗಿ ಸೇರಿದಂತೆ ಬ್ಯಾಂಕ್ ಸಿಬ್ಬಂದಿ ಇದ್ದರು.