ಮಾಲೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ವಿಜಯಕುಮಾರ್‌ ಆಯ್ಕೆ

KannadaprabhaNewsNetwork |  
Published : Dec 26, 2025, 01:15 AM IST
ಶಿರ್ಷಿಕೆ-೨೫ಕೆ.ಎಂ.ಎಲ್‌.ಆರ್.೧-ಮಾಲೂರು ಕಾರ್ಯನಿರತ ಪತ್ರಕರ್ತರ ಚುನಾವಣೆಯಲ್ಲಿ ಸತತ ಎರಡನೇ ಬಾರಿ ಅಧ್ಯಕ್ಷರಾಗಿ ವಿಜೇತರಾದ ಡಿ.ಎಂ.ವಿಜಯಕುಮಾರ್‌ ಅವರ ತಂಡವನ್ನು ಅಭಿನಂದಿಸಲಾಯಿತು. | Kannada Prabha

ಸಾರಾಂಶ

ಸಮಾಜಕ್ಕೆ ಮಾದರಿಯಾಗಬೇಕಾದ ಪತ್ರಿಕಾರಂಗ ಹಾದಿ ತಪ್ಪುತ್ತಿದ್ದು, ಸರಿದಾರಿಗೆ ತರುವ ಪ್ರಯತ್ನ ಪ್ರತಿಯೊಬ್ಬ ಪತ್ರಕರ್ತರಿಂದ ಆಗಬೇಕಾಗಿದೆ ಎಂದು ಹೇಳಿದರು. ಚುನಾವಣೆ ಎಂದ ಮೇಲೆ ಸ್ಪರ್ಧೆ ಇದ್ದೇ ಇರುತ್ತದೆ. ಅದು ಆರೋಗ್ಯಕರವಾಗಿರಲಿ,

ಮಾಲೂರು: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಡಿ.ಎಂ.ವಿಜಯಕುಮಾರ್‌ ಆಯ್ಕೆಯಾದರು. ಇಲ್ಲಿನ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಕರ್ತರ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ಸತತ ಎರಡನೇ ಬಾರಿಗೆ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎಂ.ನಾರಾಯಣಸ್ವಾಮಿ, ಉಪಾಧ್ಯಕ್ಷರಾಗಿ ನಂಜುಂಡಪ್ಪ, ನಟರಾಜ್‌ , ಕಾರ್ಯದರ್ಶಿಯಾಗಿ ಮುನಿನಾರಾಯಣ, ಲಕ್ಷ್ಮಣ್‌ ಯಾದವ್‌, ಖಜಾಂಚಿಯಾಗಿ ಟಿ.ಕೆ.ನಾಗರಾಜ್‌ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಂ.ವಿ.ರವೀಂದ್ರ, ಟೇಕಲ್‌ ಲಕ್ಷ್ಮೀಶ್‌, ಮಲ್ಲಿಕಾರ್ಜುನ್‌, ಎಸ್.ನಾರಾಯಣಸ್ವಾಮಿ ,ಲಕ್ಕೂರು ಶ್ರೀನಿವಾಸ್‌, ಭರತ್‌ ಭೂಷಣ್‌, ಅಂಬಿಕಾ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಹಿರಿಯ ಪತ್ರಕರ್ತ ಪ.ಮಾ.ಅನಂತರಾಮ್‌ ಮಾತನಾಡಿ, ಸಮಾಜಕ್ಕೆ ಮಾದರಿಯಾಗಬೇಕಾದ ಪತ್ರಿಕಾರಂಗ ಹಾದಿ ತಪ್ಪುತ್ತಿದ್ದು, ಸರಿದಾರಿಗೆ ತರುವ ಪ್ರಯತ್ನ ಪ್ರತಿಯೊಬ್ಬ ಪತ್ರಕರ್ತರಿಂದ ಆಗಬೇಕಾಗಿದೆ ಎಂದು ಹೇಳಿದರು. ಚುನಾವಣೆ ಎಂದ ಮೇಲೆ ಸ್ಪರ್ಧೆ ಇದ್ದೇ ಇರುತ್ತದೆ. ಅದು ಆರೋಗ್ಯಕರವಾಗಿರಲಿ, ಚುನಾವಣೆಯಲ್ಲಿ ತಂತ್ರ ಇರಲಿ, ಆದರೆ ಕುತಂತ್ರ ಒಳ್ಳೆಯದಲ್ಲ ಎಂದರು. ಸೋತವರನ್ನೂ ಜೊತೆ ಕರೆದುಕೊಂಡು ಸಂಘದ ಉದ್ದೇಶವನ್ನು ಶಕ್ತಿಯುತವಾಗಿ ಸಾಕಾರಗೊಳಿಸಿ ಎಂದು ಸಲಹೆ ನೀಡಿದರು. ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್‌, ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯ ಮುನಿರಾಜು, ಹಿರಿಯ ಪತ್ರಕರ್ತ ಪವನ್‌ ರಮೇಶ್‌ ಮಾತನಾಡಿದರು. ಜಿಲ್ಲಾ ಸಮಿತಿ ಕಾರ್ಯದರ್ಶಿ ರಾಜೇಂದ್ರ ವೈದ್ಯ, ಸದಸ್ಯರಾದ ರಘು, ನವೀನ್‌, ಕೆಂಪರತ್ನಂ, ಮಾಸ್ತಿ ಮೂರ್ತಿ ಇನ್ನಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭೀಕರ ಬಸ್‌ ಬೆಂಕಿಗೆ ಐವರು ಸಜೀವ ದಹನ
ಜಗಳದಲ್ಲಿ ಗಂಡನ ಕೊಲೆ ಮಾಡಿಅನಾರೋಗ್ಯದ ಕಥೆ ಕಟ್ಟಿದ ಪತ್ನಿ