ಭೀಮಣ್ಣ ಗಜಾಪುರ
ಹಂಪಿ ಉತ್ಸವದ ವಿರೂಪಾಕ್ಷ ವೇದಿಕೆಯಲ್ಲಿ 2ನೇ ದಿನದ ವೇದಿಕೆಯಲ್ಲಿ ಆಯೋಜಿಸಿದ ವಿಚಾರಗೋಷ್ಠಿಯಲ್ಲಿ ಆಶಯ ನುಡಿಗಳನ್ನಾಡಿದ ಅವರು, ವಿಜಯನಗರ ಸಾಮ್ರಾಜ್ಯ ಜಾಗತಿಕವಾಗಿ ಹೆಸರಾಗಿದ್ದರೂ ಸಾಮಾನ್ಯ ಜನತೆಗೆ ಕೊಡುಗೆ ವಿಚಾರ ಬಂದಾಗ ಶೂನ್ಯವಾಗುತ್ತದೆ. ಸೈನಿಕರ ಲೈಂಗಿಕ ವಾಂಛೆಗಳನ್ನು ಈಡೇರಿಸಲು ವಿಜಯನಗರ ಅರಸರು ವೇಶ್ಯಾವಾಟಿಕೆ ಆರಂಭಿಸುವ ಮೂಲಕ ಮಹಿಳೆಯರ ಶೋಷಣೆ, ಬೆವರಿನ ಮೇಲೆ ಸಾಮ್ರಾಜ್ಯ ಕಟ್ಟಿದರು. ಧರ್ಮ ಮತ್ತು ವೇಶ್ಯಾವಾಟಿಕೆ ಸಮೀಕರಿಸಿಕೊಂಡು ಶ್ರಮ ಸಂಸ್ಕೃತಿಯ ಜನರನ್ನು ಮರೆಯಲಾಗಿದೆ ಎಂದರು.
ಯುದ್ಧ ಮಾಡಲು ಗುರಾಣಿ ತಯಾರು ಮಾಡುವವರನ್ನು, ಅಂದಿನ ವೈದ್ಯರನ್ನು, ದೇವಾಲಯ ಕಟ್ಟಿದ ಶ್ರಮಿಕರ ಇತಿಹಾಸ ಕೈಬಿಟ್ಟು ಕೇವಲ ರಾಜರ, ಉಳ್ಳವರ ಇತಿಹಾಸ ಮುಂಚೂಣಿಯಲ್ಲಿದೆ. ಶ್ರಮಿಕರ ಇತಿಹಾಸದ ಬಗ್ಗೆ ಸಂಶೋಧನೆ ಆಗಬೇಕಿದೆ ಎಂದರು.ರಾಮನಗರದ ಸಂಶೋಧಕ ಎಚ್.ಡಿ. ಉಮಾಶಂಕರ ವಿಜಯನಗರ ಕಾಲದ ಸತಿಸಹಗಮನ ಪದ್ಧತಿ ಹಾಗೂ ದೇವದಾಸಿ ಪದ್ಧತಿ ಕುರಿತು ಮಾತನಾಡಿ, ವಿಜಯನಗರ ಸಾಮ್ರಾಜ್ಯ ವರ್ಣಾಶ್ರಮದ ಮೇಲೆ ನಿಂತಿತ್ತು. ಸತಿಸಹಗಮನ, ದೇವದಾಸಿ ಪದ್ಧತಿ ಮೂಲಕ ವಿಜಯನಗರ ಕೇವಲ ಧಾರ್ಮಿಕ ಕೇಂದ್ರವಾಗಿರದೇ ವ್ಯಾಪಾರ ಕೇಂದ್ರವೂ ಆಗಿತ್ತು. ವೇಶ್ಯಾವಾಟಿಕೆ ಮೂಲಕ ರಾಜಮನೆತನಕ್ಕೆ ಹೇರಳ ಆದಾಯವೂ ಬರುತ್ತಿತ್ತು. ಹೀಗಾಗಿ ರಾಜಪ್ರಭುತ್ವ ಜನಪ್ರಭುತ್ವ ಮರೆತು ಮಹಿಳೆಯರನ್ನು ಭೋಗದ ವಸ್ತುವನ್ನಾಗಿಸಿದ್ದು ಮಾತ್ರ ಮರೆಯಲಾರದ ಸಂಗತಿ ಎಂದರು.
ಸಂಶೋಧಕ ಗಿರಿಜಾಪತಿ ಹಂಪಿಯ ಕುಮಾರರಾಮನ ಕಾವ್ಯಗಳು ಕುರಿತು ಮಾತನಾಡಿ, ಶ್ರೀಕೃಷ್ಣದೇವರಾಯ, ಪ್ರೌಢರಾಯನ ಬಗ್ಗೆ ಜನಸಾಮಾನ್ಯರು ಕಾವ್ಯ ಕಟ್ಟಲಿಲ್ಲ. ಕುಮಾರರಾಮನ ಬಗ್ಗೆ ನಮ್ಮ ಜನಪದರ ಮೌಖಿಕ ಕಾವ್ಯ ಪರಂಪರೆ ಹೇರಳವಾಗಿ ಸಿಗುತ್ತದೆ. ಕುಮಾರರಾಮನ ಬಗ್ಗೆ ಕೃತಿಗಳನ್ನು ಕವಿಗಳು ಚಿತ್ರಿಸಿದ್ದಾರೆ. ಕುಮಾರರಾಮನ ವರ್ಣನೆ ಬಣ್ಣಿಸಿದ್ದಾರೆ. ಕುಮಾರರಾಮನ ಜನಪದರ ಆಚರಣೆ ಹಂಪಿಯಿಂದ ಹಿಡಿದು ರಾಮನಗರದ ವರೆಗೂ ಹಬ್ಬಿತ್ತು. ರಾಮನಗರ ಎಂಬ ಹೆಸರು ಬಂದಿದ್ದು ಸಹ ಕುಮಾರರಾಮನಿಂದಲೇ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಮದ್ ಕೊಟ್ಟೂರು ಮಾತನಾಡಿ, ಹಂಪಿ ಬಯಲು ಮ್ಯೂಜಿಯಂ ಆಗಿದೆ. ಇಲ್ಲಿರುವ ಪ್ರಾಣಿ-ಪಕ್ಷಿಗಳು, ಸಸ್ಯ, ಜೀವ ವೈವಿಧ್ಯ ವಿಜಯನಗರ ಸಾಮ್ರಾಜ್ಯದ ಉನ್ನತಿಗೆ ಕಾರಣವಾಗಿದೆ ಎಂದು ಬಣ್ಣಿಸಿದರು. ಪ್ರಭೇದದ ಮೀನುಗಳು ತುಂಗಾಭದ್ರ ನದಿಯಲ್ಲಿರುವುದು ಗುರುತಿಸಿದ್ದರಿಂದ 2015ರಲ್ಲಿ ತುಂಗಭದ್ರಾ ನದಿ ಸಂರಕ್ಷಿತ ಪ್ರದೇಶವಾಗಿದೆ ಎಂದರು.