ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಎಂಡಿಸಿ ಹಾಗೂ ಹಲವು ದಲಿತಪರ ಸಂಘಟನೆಗಳಿಂದ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದಿರುವುದನ್ನು ಖಂಡಿಸಿ ಪ್ರತಿಭಟನೆ, ಬಂದ್ ನಡೆಯಲಿದೆ ಎಂದರು.
ಕೇವಲ ಐ ಲವ್ ಮೊಹಮ್ಮದ ಎಂದಿದ್ದಕ್ಕೆ ಅವರನ್ನು ಕೇಸ್ ಹಾಕಿ ಜೈಲಿಗೆ ಕಳಿಸಿದ್ದಾರೆ. ಈ ಪ್ರಕರಣದಲ್ಲೂ ಶೂ ಎಸೆದು ಸಂವಿಧಾನಕ್ಕೆ ಅಪಮಾನ ಮಾಡಿದ ವಕೀಲನ ಮೇಲೆ ಕೇಸ್ ದಾಖಲಿಸಿ ಗಲ್ಲು ಶಿಕ್ಷೆ ವಿಧಿಸಬೇಕು ಎಂದ ಅವರು, ದುರಾಡಳಿತವನ್ನು ನಾವು ಸಹಿಸುವುದಿಲ್ಲ. ಅ.16ರಂದು ವಿಜಯಪುರ ಬಂದ್ ಮಾಡಬೇಕು. ಮಾಡದಿದ್ದರೆ ಅನಾಹುತಗಳಾದರೆ ನಾವು ಜವಾಬ್ದಾರಿಯಲ್ಲ ಎಂದು ಎಚ್ಚರಿಸಿದರು.ಮುಖಂಡ ಜೈನುಲ್ ಅಬಿದಿನ್ ಹಾಶ್ಮಿ ಮಾತನಾಡಿ, ನ್ಯಾಯಾಧೀಶರ ಮೇಲೆ ಶೂ ಎಸೆದ ವಕೀಲನ ಮೇಲೆ ಕ್ರಮಕ್ಕೆ ಆಗ್ರಹಿಸಿ ಅ.16ರಂದು ಹೋರಾಟ ಮಾಡಲಾಗುತ್ತಿದೆ. ನಗರದ ಎಪಿಎಂಸಿ, ಬಾಗವಾನ ಮಾರುಕಟ್ಟೆ, ಕಿರಾಣಿ ಮಾರುಕಟ್ಟೆ ಸೇರಿದಂತೆ ಎಲ್ಲ ವಹಿವಾಟು ಬಂದ್ ಮಾಡಿ ಜನರು, ವ್ಯಾಪಾರಸ್ಥರು ಸಹಕರಿಸಬೇಕು ಎಂದರು. ಮುಖಂಡ ಬಂದೇನವಾಜ್ ಮಹಾಬರಿ ಮಾತನಾಡಿ, ಇದು ಇಡಿ ದೇಶವೇ ತಲೆ ತಗ್ಗಿಸುವಂತಹ ಘಟನೆ. ನ್ಯಾಯಾಧೀಶರ ಮೇಲೆ ಹಲ್ಲೆ ಮಾಡುವಷ್ಟರ ಮಟ್ಟಿಗೆ ವ್ಯವಸ್ಥೆ ಬೆಳೆದಿದೆ ಎಂದರೆ ಜನಸಾಮಾನ್ಯರ ಗತಿ ಏನು?. ದಲಿತರು, ಮುಸ್ಲಿಂರು ಬದುಕಲಾಗದ ಸ್ಥಿತಿಗೆ ವ್ಯವಸ್ಥೆ ತಂದಿಟ್ಟಿದ್ದಾರೆ ಎಂದು ದೂರಿದರು.
ಸಂಘಟನೆ ಸದಸ್ಯರಾದ ಎ.ಎಂ.ತಾಂಬೋಳಿ, ಮಹಮ್ಮದಪಟೇಲ್ ಬಗಲಿ, ಹಾಫೀಜ್ ಸಿದ್ದಿಕಿ, ನಾಸೀರ್ ಠಕ್ಕೆ, ಇರ್ಫಾನ ಶೇಖ, ರಫೀಕ ಖಾನೆ ಉಪಸ್ಥಿತರಿದ್ದರು.