ವಿಜಯ ಶಾಲೆಯಲ್ಲಿ ವಿಜಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ

KannadaprabhaNewsNetwork |  
Published : Dec 18, 2025, 12:15 AM IST
17ಎಚ್ಎಸ್ಎನ್15 : ಕಾರ್ಯಕ್ರಮದ ನಿಮಿತ್ತ ವಿದ್ಯಾರ್ಥಿಗಳಿಗೆ ವಿಶೇಷ ಭೋಜಲದ ವ್ಯವಸ್ಥೆ ಮಾಡಲಾಗಿತ್ತು. | Kannada Prabha

ಸಾರಾಂಶ

ಶಾಲಾ ಸಂಸ್ಥಾಪಕ ನಿರ್ದೇಶಕರಾದ ತಾರಾ ಎಸ್ ಸ್ವಾಮಿ ಅವರು ಮಾತನಾಡುತ್ತಾ, ಮಕ್ಕಳ ವೈಯುಕ್ತಿಕ ಸುರಕ್ಷತೆಯ ಬಗ್ಗೆ ಹಾಗೂ ಶಾಲೆಯ ಆಸ್ತಿಗಳನ್ನು ಹೇಗೆ ಸಂರಕ್ಷಿಸಬೇಕಾದ ವಿಚಾರದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ವಿಜಯ ಶಾಲೆ ತನ್ನ ಮಕ್ಕಳಿಗಾಗಿ ಯಾವ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂಬುದರ ಬಗ್ಗೆ ಅರಿವಿನ ಜೊತೆಗೆ ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಯನ್ನು ಹೊರತರುವಲ್ಲಿ ಪೋಷಕರು ಸಹ ಕೈಜೋಡಿಸಬೇಕೆಂದು ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಗುರು ಇದ್ದರೆ ಗುರಿ ಮುಟ್ಟಲು ಸಾಧ್ಯವಿದೆ. ನಾವು ಗೆಲುವನ್ನು ಹುಡುಕುತ್ತಾ ಹೋದಂತೆ ಸೋಲುಗಳು ಸದಾ ಜೊತೆಯಲ್ಲಿ ಇರುತ್ತವೆ. ಸೋಲನ್ನು ಮೆಟ್ಟಿ ಗೆಲುವನ್ನು ಸಾಧಿಸುವ ಛಲ ಇರಬೇಕು ಎಂದು ನವ್ಕೀಸ್ ತಾಂತ್ರಿಕ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ವಿಶ್ವನಾಥ್ ಎಸ್ ಆರ್‌ ತಿಳಿಸಿದರು.

ಡಿಸೆಂಬರ್ 12 ಮತ್ತು 13ರಂದು ನಡೆದವಿಜಯ ಶಾಲೆಯ ವಿಜಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವೈಜ್ಞಾನಿಕ ಯುಗದಲ್ಲಿ ಮಕ್ಕಳನ್ನು ಬೆಳೆಸುವುದು ಪೋಷಕರಿಗೆ ದೊಡ್ಡ ಸವಾಲಿನ ಜವಾಬ್ದಾರಿಯಾಗಿದೆ. ಮಕ್ಕಳು ಜನ್ಮತಃ ತುಂಬಾ ಜ್ಞಾನವಂತರಾಗಿರುತ್ತಾರೆ ಅವರಿಗೆ ಸೂಕ್ತ ಮಾರ್ಗದರ್ಶನದಲ್ಲಿ ಶಿಸ್ತು, ಸಂಸ್ಕಾರ, ಸಂಯಮ, ಸಭ್ಯತೆ ಕಲಿಸುವುದು ಅತಿ ಮುಖ್ಯವಾಗಿದೆ ಎಂದು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಕವಿತಾ ಅವರು ಪೋಷಕರಿಗೆ ಕರೆ ನೀಡಿದರು. ನಗರದ ವಿಜಯಶಾಲೆಯ 2025-26 ನೇ ಸಾಲಿನ ಪ್ರಶಸ್ತಿ ಪ್ರದಾನ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಾ, ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ ಮನೆಯಲ್ಲಿ ತಂದೆ ತಾಯಿಗಳು ಹೇಳಿಕೊಡುವ ಸಂಸ್ಕಾರ ಶಾಲೆಯಲ್ಲಿ ಶಿಕ್ಷಕರು ಕಲಿಸುವ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಾದ ಸಾಂಸ್ಕೃತಿಕ, ಕ್ರೀಡೆ, ಯೋಗ ಹೀಗೆ ಹಲವಾರು ವಿಭಾಗಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಕಾರ್ಯ, ಪರಿಸರ ಸಂರಕ್ಷಣೆ ಪ್ರತಿಯೊಬ್ಬ ಮಗುವಿನ ಜವಾಬ್ದಾರಿಯುತ ಕರ್ತವ್ಯವಾಗಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಶಾಲಾ ಸಂಸ್ಥಾಪಕ ನಿರ್ದೇಶಕರಾದ ತಾರಾ ಎಸ್ ಸ್ವಾಮಿ ಅವರು ಮಾತನಾಡುತ್ತಾ, ಮಕ್ಕಳ ವೈಯುಕ್ತಿಕ ಸುರಕ್ಷತೆಯ ಬಗ್ಗೆ ಹಾಗೂ ಶಾಲೆಯ ಆಸ್ತಿಗಳನ್ನು ಹೇಗೆ ಸಂರಕ್ಷಿಸಬೇಕಾದ ವಿಚಾರದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ವಿಜಯ ಶಾಲೆ ತನ್ನ ಮಕ್ಕಳಿಗಾಗಿ ಯಾವ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂಬುದರ ಬಗ್ಗೆ ಅರಿವಿನ ಜೊತೆಗೆ ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಯನ್ನು ಹೊರತರುವಲ್ಲಿ ಪೋಷಕರು ಸಹ ಕೈಜೋಡಿಸಬೇಕೆಂದು ಕಿವಿಮಾತು ಹೇಳಿದರು.

ಶಾಲಾ ಶೈಕ್ಷಣಿಕ ಮುಖ್ಯಸ್ಥೆ ಡಾ. ಶ್ರೀ ಲಕ್ಷ್ಮಿ ಎಸ್ ಅವರು ಪ್ರಸ್ತಾವಿಕ ನುಡಿಗಳನಾಡುತ್ತಾ ನಮ್ಮ ವಿಜಯಶಾಲೆಯ ವಿದ್ಯಾರ್ಥಿ ಪರಿಷತ್ತು ಬಹಳ ಕ್ರಿಯಾಶೀಲವಾಗಿದ್ದು ಉತ್ತಮ ಕೆಲಸ ಮಾಡುತ್ತಿದೆ ಪಠ್ಯ ಹಾಗೂ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡುವ ಮೂಲಕ ಶಾಲಾ ಆಡಳಿತ ಮಂಡಳಿ ಅಭಿನಂದಿಸುತ್ತಿದೆ ಎಂದು ತಿಳಿಸಿದರು. ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸಲುವಾಗಿ ವಿಜಯ ಅರ್ಲಿ ಇಯರ್ಸ್‌ನಲ್ಲಿ ವ್ಯಾಸಂಗ ಮಾಡುತ್ತಿರುವ 161 ಮಕ್ಕಳಿಗೂ ಕ್ರೀಡಾ ಸಾಮಗ್ರಿ ನೀಡಲಾಯಿತು.

1ನೇ ತರಗತಿಯಿಂದ 10ನೇ ತರಗತಿಯ ವರೆಗಿನ 760 ವಿದ್ಯಾರ್ಥಿಗಳು ಸಾಂಸ್ಕೃತಿಕ, ಕ್ರೀಡೆ ಇತ್ಯಾದಿಗಳಲ್ಲಿ ವಿಜಯೋತ್ಸವ ಪ್ರಶಸ್ತಿ ಹಾಗೂ ಪ್ರಮಾಣಪತ್ರ, 27 ವಿದ್ಯಾರ್ಥಿಗಳು ವಿಜಯಶ್ರೀ ಪ್ರಶಸ್ತಿ ಪತ್ರದ ಜೊತೆಗೆ ನಗದು 1500 ರುಪಾಯಿಗಳನ್ನು ಸ್ವೀಕರಿಸಿದರು. ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡು ನವೀನ ಸೃಜನಶೀಲ ಚಿಂತನೆಯನ್ನು ಪ್ರದರ್ಶಿಸಿದ 151 ವಿದ್ಯಾರ್ಥಿಗಳಿಗೆ ಪದಕ ಮತ್ತು ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಯಿತು.

ಹಿಂದಿನ ತರಗತಿಯ ಅಂಕಗಳ ಆಧಾರದ ಮೇಲೆ 198 ವಿದ್ಯಾರ್ಥಿಗಳು ವಿಜಯ ಮೆರಿಟ್ ಪ್ರಶಸ್ತಿಯಲ್ಲಿ ವಿಶೇಷ ಪುಸ್ತಕಗಳನ್ನು ತಮ್ಮದಾಗಿಸಿಕೊಂಡರು. ವಿಜಯ ಸ್ಟಾರ್ ಆಚೀವರ್ – 3, ವಿಜಯ ಕಲ್ಚರಲ್ ಐಕಾನ್ – 3, ವಿಜಯ ಅಥ್ಲೆಟ್ ಆಫ್ ದ ಇಯರ್‌ – 4 ವಿದ್ಯಾರ್ಥಿಗಳು ಪಡೆದುಕೊಂಡರು. ಮಕ್ಕಳು ಮಾತ್ರವಲ್ಲದೆ ಪೋಷಕರು, ಅಜ್ಜ-ಅಜ್ಜಿಯಂದಿರೂ, ಶಿಕ್ಷಕರೂ ಹಾಗೂ ಶಾಲಾ ಸಿಬ್ಬಂದಿ ವರ್ಗ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ವಿಜಯ ಪೆರೆಂಟ್ಸ್ ಘಾಟ್ ಟ್ಯಾಲೆನ್ಟ್ ನಲ್ಲಿ ವಿಜೇತರಾದ ಪೋಷಕರಿಗೆ ಶಾಲೆಯಲ್ಲಿ ಬೆಳೆದಂತಹ ಗಿಡಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ವೈ ಎನ್ ಸುಬ್ಬಸ್ವಾಮಿ, ಪ್ರಾಂಶುಪಾಲ ನಂದೀಶ ಕೆ ಎಸ್, ಶಿಕ್ಷಕರು, ಶಾಲಾ ಸಿಬ್ಬಂದಿ ವರ್ಗ, ಪೋಷಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಣ ಹಂಚಿ ಗೆದ್ದವರಿಂದ ಜನಪರ ಆಡಳಿತ ಸಾಧ್ಯವಿಲ್ಲ
ಬಾಲ್ಯವಿವಾಹಕ್ಕೆ ಅವಕಾಶ ನೀಡಿದರೆ ಕಠಿಣ ಶಿಕ್ಷೆ