ಕನ್ನಡಪ್ರಭ ವಾರ್ತೆ ಸಿಂದಗಿ
ಈ ವೇಳೆ ಹೋರಾಟ ಸಮಿತಿಯ ಪ್ರಮುಖ ರಂಗನಾಥ ತೋರ್ಫೆ ಮಾತನಾಡಿ, ಡಾ.ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ ವಿಜಯಪುರ ಜಿಲ್ಲೆಯನ್ನು ಹೈದ್ರಾಬಾದ ಕರ್ನಾಟಕದ ಸಂವಿಧಾನದ ತಿದ್ದಪಡಿ 371(ಜೆ) ಕಲಂನಲ್ಲಿ ಸೇರ್ಪಡೆ ಮಾಡಬೇಕಾಗಿತ್ತು. ಅದನ್ನು 2012-13 ರಲ್ಲಿ ಕಲ್ಯಾಣ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗಾಗಿ ಸಂವಿಧಾನದಲ್ಲಿ 371(ಜೆ) ಕಲಂ ಅನ್ನು ಜಾರಿಗೆ ತರಲಾಗಿದೆ. ಆದರೆ, ಈ ಕಲಂನಿಂದ ವಿಜಯಪುರ ಜಿಲ್ಲೆಯನ್ನು ಕೈಬಿಟ್ಟಿದ್ದು ಪುನಃ ಸೇರ್ಪಡೆ ಮಾಡುವುಂತೆ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಸದನದಲ್ಲಿ ಚರ್ಚಿಸುವಂತೆ ಮನವಿ ಮಾಡಿದರು. ಮನವಿ ಸ್ವೀಕರಿಸಿ ಮಾತನಾಡಿದ ಬಿ.ವೈ.ವಿಜಯೇಂದ್ರ ಅವರು, ಡಾ.ನಂಜುಂಡಪ್ಪ ವರದಿ ಪ್ರಕಾರ ವಿಜಯಪುರ ಜಿಲ್ಲೆಗೂ 371 ಜೆ ಸೌಲಭ್ಯ ದೊರೆಯಬೇಕಾಗಿತ್ತು. 371(ಜೆ) ಕಲಂನಲ್ಲಿ ಕೈ ಬಿಟ್ಟಿರುವ ವಿಜಯಪುರ ಜಿಲ್ಲೆ ಸೇರಿಸಲು ರಾಜ್ಯ ಸರ್ಕಾರದಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಒತ್ತಾಯಿಸುತ್ತೇನೆ. ಅಲ್ಲದೆ, ಕೇಂದ್ರ ಸರ್ಕಾರದಲ್ಲಿ ಚರ್ಚಿಸಿ ತಮಗೆ ನ್ಯಾಯ ಕಲ್ಪಿಸುವುದಾಗಿ ಭರವಸೆ ನಿಡಿದರು..ಈ ವೇಳೆ ಮಾಜಿ ಶಾಸಕ ರಮೇಶ ಭುಸನೂರ, ಸಮಿತಿ ಸದಸ್ಯರಾದ ಸಿದ್ದರಾಮ ಪಾಟೀಲ, ಪಂಡಿತ ಯಂಪೂರೆ, ಎಂ.ಎಂ.ಹಂಗರಗಿ, ಎಸ್.ಎಸ್.ಮಲ್ಲೇದ, ದಾನಪ್ಪಗೌಡ ಚನಗೊಂಡ, ಸಿದ್ದು ಕಡಗಂಚಿ, ಅರವಿಂದ ಕುಲಕರ್ಣಿ, ಗುರುರಾಜ ಪಡಶೆಟ್ಟಿ, ಅಂಬರೀಶ ಸುಣಗಾರ, ಆನಂದ ಶಾಬಾದಿ, ಮಲ್ಲಿಕಾರ್ಜುನ ಅಲ್ಲಾಪುರ ಸೇರಿದಂತೆ ಪೀರು ಕೇರೂರ, ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಸಿದ್ದು ಬುಳ್ಳಾ, ಅಶೋಕ ಅಲ್ಲಾಪುರ, ಎಸ್.ಆರ್.ಪಾಟೀಲ, ಸತೀಶ ಹಿರೇಮಠ, ಪ್ರಶಾಂತ ಕದ್ದರಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.