ಇತಿಹಾಸ ಪ್ರಸಿದ್ಧ ಮೃತ್ಯುಂಜಯ ದೇವಸ್ಥಾನದಲ್ಲಿ ವಿಜೃಂಭಣೆಯ ಪುತ್ತರಿ ಹಬ್ಬ ಆಚರಣೆ

KannadaprabhaNewsNetwork |  
Published : Dec 07, 2025, 03:45 AM IST
ಚಿತ್ರ :  5ಎಂಡಿಕೆ1 : ಇತಿಹಾಸ ಪ್ರಸಿದ್ಧ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ವಿಜೃಂಭಣೆಯ ಪುತ್ತರಿ ಜರುಗಿತು.  | Kannada Prabha

ಸಾರಾಂಶ

ಇತಿಹಾಸ ಪ್ರಸಿದ್ಧ ಬಾಡಗರಕೇರಿ ಶ್ರೀಮೃತ್ಯುಂಜಯ ದೇವಸ್ಥಾನದಲ್ಲಿ ಪುತ್ತರಿ ಹಬ್ಬವನ್ನು ವಿಜೃಂಭಣೆಯಿಂದ ಸಾಮೂಹಿಕವಾಗಿ ಗ್ರಾಮಸ್ಥರು ಆಚರಿಸಿದರು.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಪೊನ್ನಂಪೇಟೆ ತಾಲೂಕಿನ ಇತಿಹಾಸ ಪ್ರಸಿದ್ಧ ಬಾಡಗರಕೇರಿ ಶ್ರೀ ಮೃತ್ಯುಂಜಯ ದೇವಸ್ಥಾನದಲ್ಲಿ ಪುತ್ತರಿ ಹಬ್ಬವನ್ನು ವಿಜೃಂಭಣೆಯಿಂದ ಸಾಮೂಹಿಕವಾಗಿ ಗ್ರಾಮಸ್ಥರು ಆಚರಿಸಿದರು.ತಕ್ಕ ಮುಖ್ಯಸ್ಥರು, ದೇವಸ್ಥಾನ ಆಡಳಿತ ಮಂಡಳಿ ನೇತೃತ್ವದಲ್ಲಿ ಪದ್ಧತಿಯಂತೆ ಸಾಂಪ್ರದಾಯಿಕವಾಗಿ ಕದಿರು ತೆಗೆಯುವ ಆಚರಣೆ ನಡೆಸಲಾಯಿತು.

ದೇವಸ್ಥಾನದಿಂದ ಸುಮಾರು ಎರಡು ಕಿ. ಮೀ.ದೂರದಲ್ಲಿರುವ ಪಾರಂಪರಿಕವಾಗಿ ಕದಿರು ತೆಗೆಯುವ ಮಲ್ಲೇಂಗಡ ಕುಟುಂಬಸ್ಥರ ಗದ್ದೆಗೆ ದೇವಸ್ಥಾನದಿಂದ ತಳಿಯತಕ್ಕಿ ಬೊಳಕ್, ಓಡ್ಡೋಲಗ ದೊಂದಿಗೆ ತೆರಳಿ ಕದಿರು ತೆಗೆದು ದೇವಸ್ಥಾನಕ್ಕೆ ತರಲಾಯಿತು. ಪಟಾಕಿ ಸಿಡಿಸಿ, ಓಡ್ಡೋಲಗಕ್ಕೆ ಗ್ರಾಮಸ್ಥರು ಕುಣಿದು ಸಂಭ್ರಮಿಸಿದರು. ಪುತ್ತರಿ ಪ್ರಯುಕ್ತ ವಿಶೇಷ ಖಾದ್ಯ ತಂಬಿಟ್ಟು ನೊಂದಿಗೆ ಸಾಮೂಹಿಕ ಊಟೋಪಚಾರ ನಡೆಯಿತು.

ದೇವತಕ್ಕ ಆಣ್ಣೀರ ಕುಟುಂಬದ ದಾದಾ ಗಣಪತಿ, ನಾಡ್ ತಕ್ಕ ಕುಟುಂಬ ಕಾಯಪಂಡ ಕುಟುಂಬದ ಅಯ್ಯಪ್ಪ, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಚೋನಿರ ಸುಬ್ರಮಣಿ, ಕಾರ್ಯದರ್ಶಿ ಬಲ್ಯಮೀದೇರಿರ ಸಂಪತ್, ಉಪಾಧ್ಯಕ್ಷ ಕಾಯಪಂಡ ಸ್ಟಾಲಿನ್ ಗಣಪತಿ, ಖಜಾಂಚಿ ಬಲ್ಯಮೀದೇರಿರ ಚೇತನ್ ಸೋಮಣ್ಣ, ಕಾಯಪಂಡ ಸುರೇಂದ್ರ, ಕಾಯಪಂಡ ಕಾವೇರಪ್ಪ, ಅಣ್ಣೀರ ಸರು, ಅಣ್ಣೀರ ಲೋಕೇಶ್, ಕಾಯಪಂಡ ಸುನಿಲ್, ಮೀದೇರಿರ ಗಣಪತಿ, ಬಲ್ಯಮೀದೇ ರಿರ ರನ್ನು, ಮಲ್ಲೇಂಗಡ ಶಮ್ಮಿ ನರೇಂದ್ರ ಹಾಗೂ ಮುಖ್ಯ ಅರ್ಚಕರಾದ ಗಿರೀಶ್ ಹಾಗೂ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಧನೆಗೆ ಸತತ ಪ್ರಯತ್ನ, ಪ್ರಾಮಾಣಿಕತೆ ಅಗತ್ಯ
ಹಿಪ್ಪರಗಿ ಬ್ಯಾರೇಜ್‌ ನೀರು ಸಂಗ್ರಹದಲ್ಲಿ ಚೇತರಿಕೆ