ಹೊಸಪೇಟೆ: ನಗರದಲ್ಲಿ ಕಳೆದ 30 ವರ್ಷಗಳಿಂದ ಹೊಸಪೇಟೆ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿರುವ ವಿಕಾಸ ಸೌಹಾರ್ದ ಕೋ- ಆಪರೇಟಿವ್ ಬ್ಯಾಂಕ್ ನಗರದ ಸರ್ದಾರ್ ಪಟೇಲ್ ಮುಖ್ಯರಸ್ತೆಯಲ್ಲಿ ನಾಲ್ಕು ಮಹಡಿಗಳ ಸ್ವಂತ ಕಟ್ಟಡದಲ್ಲಿ ಕಾರ್ಯಾರಂಭ ಮುಂದುವರೆಸಲಿದೆ. ನ.1ರಂದು ಬೆಳಗ್ಗೆ 9.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಕೊಟ್ಟೂರು ಬಸವಲಿಂಗ ಶ್ರೀ, ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಶ್ರೀ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ವಿಕಾಸ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ತಿಳಿಸಿದರು.ನಗರದ ಪತ್ರಿಕಾ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನದ 24 ಗಂಟೆಯೂ ಗ್ರಾಹಕರು ಸ್ವಯಂ ಆಗಿ ನಿರ್ವಹಿಸಬಲ್ಲ ದಕ್ಷಿಣ ಭಾರತದ ಪ್ರಥಮ ಡಿಜಿಟಲ್ ವಾಲ್ಟ್ (ಲಾಕರ್) ಸೌಲಭ್ಯ ಮಳೆ ನೀರು ಕೊಯ್ಲು ಹಾಗೂ ಸೌರ್ಯ ಶಕ್ತಿಯನ್ನು ಹೊಂದಿದ ಮೊದಲ ಬ್ಯಾಂಕ್ ವಿಕಾಸ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ದಿನದ 24 ಗಂಟೆಯೂ ಗ್ರಾಹಕರು ಸ್ವಯಂ ಆಗಿ ನಿರ್ವಹಿಸಬಲ್ಲ ದಕ್ಷಿಣ ಭಾರತದ ಪ್ರಥಮ ಡಿಜಿಟಲ್ ವಾಲ್ಟ್ (ಲಾಕರ್) ಸೌಲಭ್ಯ ಇಲ್ಲಿನ ತಳಮಹಡಿಯಲ್ಲಿ 10 ತಿಂಗಳೊಳಗೆ ಆರಂಭವಾಗಲಿದೆ ಎಂದರು.
ನ.1ರಂದು ಬೆಳಗ್ಗೆ 9.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ವಿ ಸಾಫ್ಟ್ ಸಂಸ್ಥೆಯ ಮೂರ್ತಿ ವೀರಗಂಟಿ, ಗೋದ್ರೆಜ್ ಕಂಪನಿಯ ಉಪಾಧ್ಯಕ್ಷ ಪರ್ಸಿ ಮಾಸ್ಟರ್ ಬಹಾದ್ದೂರ್ ಭಾಗವಹಿಸಲಿದ್ದಾರೆ ಎಂದರು.
ಬ್ಯಾಂಕ್‌ನ ಸಲಹೆಗಾರ ವಿ.ಜೆ. ಕುಲಕರ್ಣಿ, ಹಿರಿಯ ನಿರ್ದೇಶಕರಾದ ಛಾಯಾ ದಿವಾಕರ್, ರಮೇಶ್ ಪುರೋಹಿತ್, ಎಂ.ವೆಂಕಪ್ಪ, ಕೆ.ವಿಕಾಸ, ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಹಿರೇಮಠ ಇದ್ದರು.ಹೊಸಪೇಟೆಯ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಕಾಸ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ಮಾತನಾಡಿದರು.